ಶ್ರೀ ಕನಕ, ಓಬವ್ವ ಜಯಂತಿ

ನವಲಗುಂದ,ನ12 : ಕುಲ ಕುಲ ಕುಲವೆಂದು ಹೊಡೆದಾಡದಿರಿ ಕನಕದಾಸರ ಪಧ್ಯ ಅರ್ಥ ಪೂರ್ಣವಾಗಿದೆ. ಮನುಜ ಕುಲದ ನೆಲೆಯ ನೇನಾದರು ಬಲ್ಲಿರಾ ಬಲ್ಲಿರಾ ಎಂಬ ನುಡಿಯೊಡನೆ ತಿಮ್ಮಪ್ಪ ನಾಯಕ ತನಗೆ ಸಿಕ್ಕ ಕೊಪ್ಪರಿಗೆ ಹೊನ್ನನ್ನು ದಾನ ಧರ್ಮ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ದಾನ ಮಾಡಿ ಕನಕದಾಸನಾದ ಎಂದು ವಿ.ಆರ್.ಲಕ್ಕಣ್ಣವರ ಹೇಳಿದರು.

ಅವರು ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಸರಕಾರಿ ಮಾದರಿ ಕೇಂದ್ರ ಶಾಲೆಯಲ್ಲಿ ಸರಕಾರಿ ಶಾಲೆ ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಕನಕ ಜಯಂತಿ ಹಾಗೂ ಓನಕೆ ಓಬವ್ವ ಜಯಂತಿಯಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಎಮ್.ಮೆಣಸಿನಕಾಯಿ ಅವರು ಮಾತನಾಡಿ ದಾಸರಲ್ಲಿ ದಾಸಶ್ರೇಷ್ಠ ಏನಿಸಿದ ಕನಕದಾಸರ ಬಾಲ್ಯ ಪಾಳೇಗಾರನ ಇತಿಹಾಸ ಕುರಿತು ಹೇಳಿದರು.

ಆರು ಬದುಕಿದರಯ್ಯ ಹರಿ ನಿನ್ನ ನಂಬಿ ತೋರು ಈ ಧರೆಯೊಳಗೆ ಎಂಬ ದಾಸರ ಪದ್ಯಗಳನ್ನು ವಿದ್ಯಾರ್ಥಿಗಳಾದ ನಿಂಗಬಸಪ್ಪ ಚಲವಾದಿ, ಧರೆಯಪ್ಪ ಪೂಜಾರ ಅವರು ಹಾಡಿದರು. ಶಶಿಕಲಾ ಜಾಲಿಹಾಳ ಓಬವ್ವನ ವೇಷ, ಕೃಷ್ಣನ ವೇಶದಲ್ಲಿ ಲಕ್ಷ್ಮೀ ಕುನಿಸೆಣ್ಣವರ ಇದ್ದರು.

ಬಿ.ಎಲ್.ಪೂಜಾರ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಎಸ್.ಡಿ.ಎಮ್.ಸಿ ಅಧ್ಯಕ್ಷ ಮಲ್ಲಿಕಾರ್ಜುನ ಮಾಕಣ್ಣವರ ಅಧ್ಯಕ್ಷತೆ ವಹಿಸಿದ್ದರು.

ಬಿ.ಎಸ್.ಆಡಿನ, ಪಿ.ಎನ್.ಕಿರೇಸೂರ, ಎಸ್.ಸಿ.ಪಾಟೀಲ, ಎಸ್.ಎಸ್.ಈರೇಶನವರ, ರೇಖಾ ಗಾಣಿಗೇರ, ಶಶಿಕಲಾ ಬಳ್ಳೂರ, ನಸೀಮಾಭಾನು ದುರ್ಗಪ್ಪ ಚಳ್ಳಕ್ಕನವರ ಉಪಸ್ಥಿತರಿದ್ದರು. ಐ.ಬಿ.ಈರಗಾರ ನಿರೂಪಿಸಿದರು. ಯು.ಬಿ.ಕಟ್ಟಿಮನಿ ವಂದಿಸಿದರು.