ಶ್ರೀ ಕನಕದಾಸರ ಜಯಂತಿ

ಅಣ್ಣಿಗೇರಿ,ನ12: ಸಾಸ್ವಿಹಳ್ಳಿ ಗ್ರಾಮದ ಗ್ರಾಮ ಪಂಚಾಯತಿಯ ಕಾರ್ಯಾಲಯದಲ್ಲಿ ಶ್ರೀ ಕನಕದಾಸರ 535 ನೇ ಜಯಂತಿ ಹಾಗೂ ವನಕೆ ಓಬವ್ವನ ಜಯಂತಿ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ವಿ ಡಿ ಅಂದಾನಿಗೌಡರ ತಮ್ಮ ವಚನ ಮತ್ತು ಕೀರ್ತನೆಗಳ ಮೂಲಕ ಸಮಾಜದ ಒಳಿತು ಅಂಕುಡೊಂಕುಗಳನ್ನು ಜನರಿಗೆ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಜೀವನ ಸಂದೇಶ ನೀಡಿದ ಸಂತ ಮಹಾತ್ಮರಾದ ಕನಕದಾಸರ ಸಮಾಜ ಪರಿವರ್ತನೆಯ ಕೀರ್ತನಕಾರರು ಎಂದು ಹೇಳಿದರು.
ಅವರು ಯಾವುದೇ ಒಂದು ಜಾತಿ, ಧರ್ಮ, ಪ್ರದೇಶ, ಭಾಷೆಗೆ ಸೀಮಿತವಾಗದ ಕನಕದಾಸರ ವಿಶ್ವಮಾನವ ಪರಿಕಲ್ಪನೆಯ ಸಂದೇಶವನ್ನು ಪ್ರಸ್ತುತಿಯನ್ನು ಪಡೆದಿದೆ ಎಂದರು.
ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೀನಾಕ್ಷಿ ಭಜಂತ್ರಿ, ಪಂಚಾಯತಿ ಅಧ್ಯಕ್ಷರಾದ ಜಗದೀಶಗೌಡ ಶೇಷನಗೌಡರ, ಉಪಾಧ್ಯಕ್ಷರು ಫಕ್ಕಿರವ್ವ ತಹಶೀಲ್ದಾರ್, ಶಿವಾಜಿ ರಾವ್ ಮೂಖಾಸಿ, ಎಸ್ ಎಂ ಅಂದಾಣಿಗೌಡರ, ಅಣ್ಣಿಗೇರಿ ಪುರಸಭೆಯ ನಾಮ ನಿರ್ದೇಶಕ ಸದಸ್ಯರಾದ ಸೋಮಶೇಖರಯ್ಯ
ಹಿರೇಮಠ, ಎಮ್ ಜಿ ಪಾಟೀಲ, ವಿರುಪಾಕ್ಷಪ್ಪ ನಾಯ್ಕರ್, ರಾಮಣ್ಣ ದೊಡ್ಡಮನಿ, ಶರಣಪ್ಪ ನಾಯ್ಕರ್, ಹಾಲುಮತದ ಸಮಾಜ ಹಿರಿಯರು ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಹಿರಿಯರು ಉಪಸ್ಥಿತರಿದ್ದರು.