ಶ್ರೀ ಕನಕದಾಸರ-ಓಬವ್ವ ಜಯಂತಿ ಆಚರಣೆಗೆ ಚಾಲನೆ

ಆಳಂದ:ನ.12: ಪಟ್ಟಣದ ತಾಲೂಕು ಆಡಳಿತ ಸೌಧನಲ್ಲಿ ಆಯೋಜಿಸಿದ್ದ ಭಕ್ತ ಕನಕದಾಸರ ಮತ್ತು ಓನಕೆ ಒಬವ್ವ ಅವರ ಜಯಂತಿ ಅಂಗವಾಗಿ ಶಾಸಕ ಸುಭಾಷ ಗುತ್ತೇದಾರ ಅವರು ಮಹನಿಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಣೆಗೆ ಚಾಲನೆ ನೀಡಿದರು.

ಕುರಬ ಸಂಘದ ರಾಜ್ಯ ಉಪಾಧ್ಯಕ್ಷ ಈರಣ್ಣಾ ಝಳಕಿ, ತಾಲೂಕು ಅಧ್ಯಕ್ಷ ತುಕಾರಾಮ ವಗ್ಗಿ, ಭೀರಣ್ಣಾ ಪೂಜಾರಿ, ತಹಸೀಲ್ದಾರ ಯಲ್ಲಪ್ಪ ಸುಬೇದಾರ, ಪುರಸಭೆ ಅಧ್ಯಕ್ಷೆ ರಾಜಶ್ರೀ ಎಸ್. ಖಜೂರಿ, ಉಪಾಧ್ಯಕ್ಷ ಈರಣ್ಣಾ ಹತ್ತರಕಿ, ಮುಖ್ಯಾಧಿಕಾರಿ ವಿಜಯಮಹಾಂತೇಶ ಹೂಗಾರ, ಸಮಾಜದ ಈರಣ್ಣಾ ಝಳಕಿ, ತುಕಾರಾಮ ವಗ್ಗಿ, ಕೆ.ಎಸ್.ಸಾವಳಗಿ, ನಾಗರಾಜ ಘೋಡಕೆ, ಜಿ.ಕೆ. ಪೂಜಾರಿ, ಸಿದ್ಧು ಪೂಜಾರಿ ಸೇರಿ ಇಲಾಖೆಗಳ ಅಧಿಕಾರಿಗಳ ಕುರುಬ ಸಮಾಜ ಬಾಂಧವರು ಆಗಮಿಸಿದ್ದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ನಡೆದ ಜಯಂತಿ ಆಚರಣೆಯಲ್ಲಿ ಕಲ್ಯಾಣಾಧಿಕಾರಿ ಬಸವರಾಜ ಕಾಳೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಎಸ್‍ಡಿಎ ಸುನಿತಾ ಗೋಪಿರೆಡ್ಡಿ, ಪ್ರದೀಪ ಶೇರಿಕಾರ ಮತ್ತಿತರು ಇದ್ದರು. ಸ್ಥಳೀಯ ಪುರಸಭೆ ಸೇರಿದಂತೆ ತಾಲೂಕಿನ ಇತರೆ ಸರ್ಕಾರಿ ಕಚೇರಿ, ಶಾಲಾ ಕಾಲೇಜು ಒಳಗೊಂಡು ಎಲ್ಲಡೆ ಜಯಂತಿ ಅಂಗವಾಗಿ ಭಾವಚಿತ್ರದ ಪೂಜೆ ನೆರವೇರಿಸಲಾಯಿತು.