ಶ್ರೀ ಏಳುಮಕ್ಕಳ ತಾಯಮ್ಮ ದೇವಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ

ಹುಬ್ಬಳ್ಳಿ, ಡಿ13: ಹಳೇ ಹುಬ್ಬಳ್ಳಿ ಪಡದಯ್ಯನ ಹಕ್ಕಲದಲ್ಲಿರುವ ಶ್ರೀ ಏಳು ಮಕ್ಕಳ ತಾಯಮ್ಮ ದೇವಿ ದೇವಸ್ಥಾನದಲ್ಲಿ ಕಾರ್ತಿಕ ಅಮವಾಸ್ಯೆ ನಿಮಿತ್ತ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.
ಶ್ರೀದೇವಿಗೆ ದೀಪಗಳಿಂದ ಸುಂದರವಾಗಿ ಅಲಂಕಾರ ಮಾಡಲಾಯಿತು. ಈ ಸಂದರ್ಭದಲ್ಲಿ ಮೋಹನ ಗುರುಸ್ವಾಮಿ, ನಾಗರಾಜ ಗಾಮನಗಟ್ಟಿ, ಮಲ್ಲೇಶ ಕುಂದಗೋಳ, ಮೇದಾರ ಸಮಾಜದ ಹಿರಿಯರು, ಮಹಿಳೆಯರು, ಮಕ್ಕಳು ಉಪಸ್ಥಿತರಿದ್ದರು.