ಶ್ರೀ ಎರ್ರಿತಾತನವರ ಜೀವ ಸಮಾಧಿ ಶತಮಾನೋತ್ಸವ ಕಾರ್ಯಕ್ರಮ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.20: ತಾಲ್ಲೂಕಿನ ಸುಕ್ಷೇತ್ರ ಚೇಳ್ಳಗುರ್ಕಿಯಲ್ಲಿ ಪವಾಡ ಪುರುಷ ಶ್ರೀ ಎರ್ರಿತಾತನವರ ಜೀವ ಸಮಾಧಿ ಶತಮಾನೋತ್ಸವ ಹಾಗೂ ಜಾತ್ರಾ ಮಹೋತ್ಸವದ ಪ್ರಯುಕ್ತ ಇಂದು ಬೆಳಿಗ್ಗೆ 5:30ಕ್ಕೆ ಗಂಗೆ ತಂದು 6:30 ರಿಂದ ಹೋಮದೊಂದಿಗೆ ವಿಶೇಷ ಪೂಜೆಗೆ ಮಠದ ಆವರಣದಲ್ಲಿ ಶ್ರೀ ಎರ್ರಿಸ್ವಾಮಿ ಜೀವ ಸಮಾಧಿ ಟ್ರಸ್ಟ್ ಹಾಗೂ ಶ್ರೀ ಎರ್ರಿಸ್ವಾಮಿ ದಾಸೋಹ ಸೇವಾ ಸಂಘದಿಂದ  ಸಡಗರ ಸಂಭ್ರಮದಿಂದ ನೆರವೇರಿತು.
ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಆರ್. ರಾಮನಗೌಡ ಉದ್ಘಾಟಿಸಿದರು. ನಂತರ ತಾತನವರ ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಲಾಯಿತು. ನಂತರ ಮಾತನಾಡಿದ ರಾಮನಗೌಡರು, ತಾತನ ಆಶೀರ್ವಾದ ನಮ್ಮ ನಿಮ್ಮೆಲ್ಲರ ಮೇಲಿರಲಿ ಎಂದರು. ವಕೀಲ ತಿಪ್ಪಣ್ಣನವರು ಆಶಯ ನುಡಿಗಳನ್ನಾಡಿದರು.ಇಪ್ಪತ್ತೆಂಟು ಗ್ರಾಮಗಳ ಭಜನೆ ತಂಡದ ಮುಖ್ಯಸ್ಥರುಗಳನ್ನು ಸನ್ಮಾನಿಸಲಾಯಿತು. ಶತಮಾನೋತ್ಸವ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯವನ್ನು ಆಂಧ್ರಪ್ರದೇಶ ಉರವಕೊಂಡ ಗವಿಮಠದ ಶ್ರೀ ಜಗದ್ಗುರು ಚನ್ನಬಸವರಾಜೇಂದ್ರ ಮಹಾಸ್ವಾಮಿಗಳು,ಶ್ರೀ ಮ.ನಿ.ಪ್ರ.ಡಾ.ಕರಿಬಸವರಾಜೇಂದ್ರ ಮಹಾಸ್ವಾಮಿಗಳು, ಸಂಡೂರು ವಿರಕ್ತ ಮಠದ ಶ್ರೀ ಮ.ನಿ.ಪ್ರ.ಪ್ರಭುಸ್ವಾಮಿಗಳು,ಕಮ್ಮರಚೇಡಿನ ಕಲ್ಯಾಣ ಸ್ವಾಮಿ ಮಠದ ಶ್ರೀ ಮ.ನಿ.ಪ್ರ.ಕಲ್ಯಾಣ ಮಹಾಸ್ವಾಮಿಗಳು, ಕಲ್ಲುಹೊಳೆಮಠದ ತಪೋರತ್ನ ಶ್ರೀ ಷ.ಬ್ರ.ಚೆನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಹಂಪಿಯ ಹೇಮಕೂಟ ಆಶ್ರಮದ ಅವಧೂತ ಸ್ತೋ.ಪ್ರ.ವಿದ್ಯಾನಂದ ಭಾರತಿ ಸ್ವಾಮಿಗಳು ವಹಿಸಿದರೆ.ಕಾರ್ಯಕ್ರಮ ಅಧ್ಯಕ್ಷತೆಯನ್ನು ಟ್ರಸ್ಟ್ ಕಮಿಟಿ ಅಧ್ಯಕ್ಷ ಎಚ್. ಬಾಳನಗೌಡ ಹಾಗೂ ದಾಸೋಹ ಸೇವಾ ಸಂಘದ ಅಧ್ಯಕ್ಷ ಸಿ.ಕೆ.ಪೊಂಪನಗೌಡ ವಹಿಸುವರು.ವೀರಶೈವ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ ಉಡೇದ ಬಸವರಾಜ, ಶಾಂತನಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಸೂರ್ಯ ಕಲಾತಂಡದವರಿಂದ ಹಾಗೂ ದೊಡ್ಡ ಬಸವಗವಾಯಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು