ಶ್ರೀ ಊರಮ್ಮ ದೇವಿ ದೇವಸ್ಥಾನದ ಅಡಿಪಾಯಕ್ಕೆ ಮಣ್ಣು ಪರೀಕ್ಷೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು. 29 :- ಇಂದು ಪಟ್ಟಣದ ಆರಾಧ್ಯ ದೈವ ಶ್ರೀ ಊರಮ್ಮ ದೇವಿಯ ಎರಡು ಕೋಟಿ ರೂ ಗೂ ಅಧಿಕ ವೆಚ್ಚದ ದೇವಸ್ಥಾನದ ನಿರ್ಮಾಣದ ಉತ್ತಮ ಅಡಿಪಾಯ ಹಾಕುವ ಮೊದಲು ಮಣ್ಣು ಪರೀಕ್ಷೆ ಮಾಡುವಲ್ಲಿ ದೇವಸ್ಥಾನದ ದೈವಸ್ಥರು ಹಾಗೂ ಪಟ್ಟಣದ ಮುಖಂಡರು ಮುಂದಾಗಿದ್ದರು.
ಇಂದು ಬೆಳಿಗ್ಗೆ ಪಟ್ಟಣದ ಶ್ರೀ ಊರಮ್ಮ ದೇವಿಯ ದೇವಸ್ಥಾನದ ಜಾಗದಲ್ಲಿ ಸಭೆಸೇರಿ ಇಂಜಿನಿಯರ್ ಗಳ ಮುಂದಾಳತ್ವದಲ್ಲಿ ಪಟ್ಟಣಪಂಚಾಯತಿ ಜೆಸಿಬಿಯಿಂದ ಅಗೆದು ಉತ್ತಮ ಅಡಿಪಾಯ ಹಾಕಲು ಮಣ್ಣಿನ ಪರೀಕ್ಷೆ ನಡೆಸುವ ಸಲುವಾಗಿ ದೇವಸ್ಥಾನ ಅಡಿಪಾಯ ಹಾಕುವ ನಾಲ್ಕು ಭಾಗಗಳಿಂದ ಮಣ್ಣನ್ನು ತೆಗೆದು ಪರೀಕ್ಷೆಗೆ ಕಳುಹಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ದೈವಸ್ಥರಾದ ಚಿದಾನಂದಸ್ವಾಮಿ,ಆಯಗಾರ ಸುರೇಶ, ಪಟ್ಟಣಪಂಚಾಯತಿ ಮಾಜಿ ಅಧ್ಯಕ್ಷ ಉದಯಜನ್ನು, ಜಿಂಕಲ್ ನಾಗಮಣಿ, ಪಟ್ಟಣಪಂಚಾಯತಿ ಸದಸ್ಯರಾದ ಕಾವಲ್ಲಿ ಶಿವಪ್ಪನಾಯಕ,ಸಿರಿಬಿ ಮಂಜುನಾಥ, ಸಣ್ಣ ಕೊತ್ಲಾ ಪ್ಪ, ಟಿ ಜಿ ಮಲ್ಲಿಕಾರ್ಜುನ ಗೌಡ, ಬಂಗಾರು ಹನುಮಂತು, ಜಯಮ್ಮರ ರಾಘು, ಕಂಪ್ಯೂಟರ್ ರಾಘು, ಮಲ್ಲಿಕಾರ್ಜುನ ಗೌಡ, ಗಣೇಶ ಹಾಗೂ ಇತರರು ಉತ್ತಮ ಅಡಿಪಾಯಕ್ಕೆ ಮಣ್ಣು ಪರೀಕ್ಷೆಗಾಗಿ ತೆಗೆಯುವಾಗ ಉಪಸ್ಥಿತರಿದ್ದರು.