ಶ್ರೀ ಉರುಕಾತೇಶ್ವರಿ ದೇವಸ್ಥಾನದ ಗೋಲಕ ಹಣ ಎಣಿಕೆ

ಚಾಮರಾಜನಗರ, ಮಾ. 18- ತಾಲೂಕಿನ ಉಮ್ಮತ್ತೂರು ಶ್ರೀ ಉರುಕಾತೇಶ್ವರಿ ಅಮ್ಮನವರ ದೇವಸ್ಥಾನದ ಗೋಲಕದಲ್ಲಿ ಸಂಗ್ರಹವಾಗಿದ್ದ ಹಣವನ್ನು ಉಪತಹ ಶೀಲ್ದಾರ್ ಪರಮೇಶ್ ನೇತೃತ್ವದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಎಣಿಕೆ ಮಾಡಲಾಯಿತು.
ಗೋಲಕದಲ್ಲಿ 8,46,580 ರೂ.ಗಳು ಸಂಗ್ರಹ ವಾಗಿದ್ದು, ಈ ಹಣವನ್ನು ನಗರದ ಕಾರ್ಪೋರೇಷನ್ ಬ್ಯಾಂಕ್‍ನಲ್ಲಿರುವ ಖಾತೆಗೆ ಜಮಾ ಮಾಡಲಾಗಿದೆ. ಈ ಹಿಂದೆ ಗೋಲಕದಲ್ಲಿ ಸಂಗ್ರಹವಾಗಿದ್ದ 32,52,351 ರೂ ಸೇರಿ ಒಟ್ಟು 40,98,931 ರೂ.ಗಳು ಬ್ಯಾಂಕ್ ಖಾತೆಯಲ್ಲಿದೆ ಎಂದು ಉಪತಹಶೀಲ್ದಾರ್ ಪರಮೇಶ್ ತಿಳಿಸಿದರು.
ದೇವಸ್ಥಾನದ ಅವರಣದಲ್ಲಿ ನಡೆದ ಎಣಿಕೆ ಕಾರ್ಯದಲ್ಲಿ ಕುದೇರು ಪೊಲೀಸ್ ಠಾಣೆ ಎಎಸ್‍ಐ ಶಶಿಧರ್, ಉಮ್ಮತ್ತೂರು ಗ್ರಾಮ ಲೆಕ್ಕಿಗ ದಿಲೀಪ್ ಕುಮಾರ್, ಸಂತೇಮರಹಳ್ಳೀ ವೃತ್ತದ ಗ್ರಾಮ ಲೆಕ್ಕಿಗರಾದ ಉಲ್ಲಾಸ್, ಉಜ್ವಾಲ್, ರೇವಣ್ಣ, ಕಿರಣ್, ಗ್ರಾಮ ಸಹಾಯಕರು ಇದ್ದರು.
ಗ್ರಾಮದ ಮುಖಂಡರಾದ ಎಸ್. ಗುರುಮಲ್ಲಪ್ಪ, ಡಿ. ಪುಟ್ಟಣ್ನ, ಕೆ. ರಾಮಣ್ಣ, ಮಹದೇವಪ್ಪ, ಎಸ್. ಪ್ರಭುಸ್ವಾಮಿ, ಮಹೇಶ್, ಬಸವನಾಯಕ, ಇತರರು ಭಾಗಿಯಾಗಿದ್ದರು.