
ಲಿಂಗಸೂಗೂರು,ಏ.೨೩- ಪಟ್ಟಣದ ಸತತ ಮೂರು ವರ್ಷಗಳಿಂದ ದ್ವಿತಿಯ ಪಿ ಯು ಸಿ ಪರೀಕ್ಷೆಯಲ್ಲಿ ಶ್ರೀ ಉಮಾಮಹೇಶ್ವರಿ ಪದವಿ ಪೂರ್ವ ಕಾಲೇಜು ಲಿಂಗಸೂಗೂರು ಜಿಲ್ಲೆಯಲ್ಲಿಯೇ ,೨೦೨೩ ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ರಾಯಚೂರು ಜಿಲ್ಲೆಗೆ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ವರ್ಷಾ ತಂದೆ ಶಶಿಕಾಂತ ೫೮೮ ( ೯೮%) ಪಡೆದುಕೊಂಡಿದ್ದಾಳೆ ಹಾಗೂ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನವನ್ನು ವೈಷ್ಣವಿ ತಂದೆ ರಾಮಕ್ರಿಷ್ಣ – ೫೮೩ (೯೭.೧೬%) ಪಡೆದುಕೊಂಡು, ನಮ್ಮ ಕಾಲೇಜಿನ ವಿದ್ಯಾರ್ಥಿಗಳು, ಸಾಧನೆಗೈದಿದ್ದಾರೆ , ವಿಜ್ಞಾನ ವಿಭಾಗದಲ್ಲಿ ೧೦೭ ವಿದ್ಯಾರ್ಥಿಗಳು ಡಿಸ್ಟಿಂಕಷನ್, ೧೪೦ ಪ್ರಥಮ ಶ್ರೇಣಿಯಲ್ಲಿ. ೩೫ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು ಕಲಾ ವಿಭಾಗದಲ್ಲಿ ೨೪ ಡಿಸ್ಟಿಂಕಷನ್, ೪೫ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತೀರ್ಣರಾಗಿರುತ್ತಾರೆ.
ಒಟ್ಟು ಕಾಲೇಜಿನ ಫಲಿತಾಂಶ ೯೯,೫೮ ಪಡೆದಿದೆ ಎಂದು ನಮ್ಮ ಸಂಸ್ಥೆಯ ಆಡಳಿತ ಅಧಿಕಾರಿಗಳಾದ ವಿನಯ್ ಗಣಚಾರಿ ಪ್ರತ್ರಿಕಾಗೊಷ್ಠಿಯಲ್ಲಿ ಮಾಹಿತಿಯನ್ನು ನೀಡಿದರು. ಸಾಧನೆ ಗೈದಾ ಸಮ್ ಕಾಲೇಜಿಗೆ, ಮತ್ತು ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಉಮಾಮಹೇಶ್ವರಿ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಹಾಗೂ ಸಿಬ್ಬಂಧಿ ವರ್ಗ , ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಕಾಲೇಜು ಪ್ರವೇಶ ಪಡೆಯುವ ಪತ್ರಕರ್ತರ ಮಕ್ಕಳಿಗೆ ಫೀಸ್‌ನಲ್ಲಿ ಶೇ.೧೫ ರಿಯಾಯಿತಿ ನೀ ಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶರಣಬಸವ ಗಾನಚಾರಿ ಜೆ.ಎ ಸುರೇಶ, ಶಂಕ್ರಪ್ಪ, ಬಸವರಾಜ ತಿಳಮತ ಜೀವನ ನಾಯಕ ಕನಕರಾಯ ಇದ್ದರು.