ಶ್ರೀ ಈಶ್ವರ ದೇವಸ್ಥಾನದಲ್ಲಿ ವಿಜೃಂಭಣೆಯ ರಥೋತ್ಸವ


ಹುಬ್ಬಳ್ಳಿ,ನ.8: ಶಹರದ ಬಮ್ಮಾಪುರ ಓಣಿಯ ಶ್ರೀ ಈಶ್ವರ ದೇವಸ್ಥಾನದ ಶ್ರೀ ಸದ್ಗುರು ಸಿದ್ದಾರೂಢ ಸ್ವಾಮಿ ಸ್ಥಾಪಿಸಲ್ಪಟ್ಟಂತಹ ರಥೋತ್ಸವ ಅತಿ ವಿಜೃಂಭಣೆಯಿಂದ ನಿನ್ನೆ ಜರುಗಿತು.
ಇದು 97 ನೇಯ ವರ್ಷದ ರಥೋತ್ಸವ ಆಚರಣೆ ಆಗಿದ್ದು ಶ್ರೀ ಸದಾನಂದ ಸ್ವಾಮಿಗಳು ಸೂರ್ಯನಾರಾಯಣ ದೇವಸ್ಥಾನ ಕಿತ್ತೂರ್ ಇವರ ಸಾನಿಧ್ಯದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮದ್ವೀರಶೈವ ಸದ್ಬೋದನ ಸಂಸ್ಥೆಯ ಅಧ್ಯಕ್ಷರಾದ ಪ್ರಕಾಶ ಬೆಂಡಿಗೇರಿ ಪಾಲಿಕೆ ಸದಸ್ಯರಾದ ಶಿವು ಮೆಣಸಿನಕಾಯಿ ಎಸ್.ಎ.ಕೆ. ಸಮಾಜದ ಅಧ್ಯಕ್ಷರಾದ ರಾಘವೇಂದ್ರ ಮುರಗೋಡ ರಥೋತ್ಸವ ಸಮಿತಿಯ ಹಿರಿಯರು ಯುವಕರು ಮಹಿಳೆಯರ ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರಿತು.
ಬೆಳಿಗ್ಗೆ ರುದ್ರಾಭಿಷೇಕ, ಶ್ರೀ ಸತ್ಯನಾರಾಯಣ ಪೂಜೆಗಳೊಂದಿಗೆ ಪ್ರಾರಂಭಿಸಿ ಮಧ್ಯಾಹ್ನ ಸಾರ್ವಜನಿಕರಿಗೆ ಮಹಾಪ್ರಸಾದ ವಿತರಣೆ ನಡೆಯಿತು. ಸಾಯಂಕಾಲ 5:00 ಗಂಟೆಗೆ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಶ್ರೀ ಸದ್ಗುರು ಸಿದ್ದಾರೂಢ ಸ್ವಾಮಿ ಹಾಗೂ ಗುರುನಾಥರೂಢ ಸ್ವಾಮಿ ಮತ್ತು ಶ್ರೀ ಈಶ್ವರ ದೇವರ ರಥೋತ್ಸವವನ್ನು ನೆರವೇರಿಸಲಾಯಿತು. ಈ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಮಹೇಶ್ ಮುರಗೋಡ, ವಿನಾಯಕ ಮುರಗಡ, ವಿಶ್ವನಾಥ್ ಗುತ್ತಲ್, ಡಾ. ಮಧುಕರ ದೇವದಾಸ್, ವಿನಾಯಕ ಲದ್ವಾ ಇತರರು ಪಾಲ್ಗೊಂಡಿದ್ದರು.