ಶ್ರೀ ಈರಮ್ಮ ದೇವಿ ಪಲ್ಲಕ್ಕಿ ಸೇವೆ

ಅರಕೇರಾ,ಆ.೨೨-
ತಾಲೂಕಿನ ಯರಮರಸ್ ಗ್ರಾಮದ ಆರಾಧ್ಯ ದೇವಿ ಶ್ರೀ ಈರಮ್ಮ ದೇವಿ ಜಾತ್ರಾ ಮಹೋತ್ಸವದ ರುದ್ರಾಭಿಷೇಕ ಹಾಗೂ ಪಲ್ಲಕ್ಕಿ ಸೇವಾ ಕಾರ್ಯಕ್ರಮ ಆ.೨೨ ರಂದು ನೆರವೇರಲಿದೆ ಎಂದು ಸದ್ಭಕ್ತ ಮಂಡಳಿ ತಿಳಿಸಿದೆ.
ಅಂದು ಬೆ.೮ ಕ್ಕೆ ರುದ್ರಾಭಿಷೇಕ, ಮಧ್ಯಾಹ್ನ ೧೨ ಕ್ಕೆ ಗಣಾರಾಧನೆ ನಂತರ ಮಹಾಪ್ರಸಾದ, ಸಾಯಂಕಾಲ ೫ ಕ್ಕೆ ಪಲ್ಲಕ್ಕಿ ಮಹೋತ್ಸವ ಜರುಗುವುದು. ನೀಲಗಲ್ ಬೃಹನ್ಮಠದ ಪಂಚಾಕ್ಷರ ಶಿವಾಚಾರರ್ಯರು ಸಾನಿಧ್ಯ ವಹಿಸಲಿದ್ದಾರೆ.
ನವಲಕಲ್ ಬೃಹನ್ಮಠದ ಶ್ರೀ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮಿಜಿ, ಯರಮರಸ್ ಗ್ರಾಮದದ ಚರಬಸವ ಸ್ವಾಮಿಜಿ, ನಿವೃತ್ತ ಎಎಸ್‌ಐ ವೇ.ಮೂ ಚನ್ನಬಸ್ಸಯ್ಯ ಸ್ವಾಮಿಜಿ, ಹೆಗ್ಗಡದಿನ್ನಿ ಮಹಾಮಠದ ವೇ.ಮೂ. ಕಲಿಗಣನಾಥ ಸ್ವಾಮಿಜಿ ನೇತೃತ್ವ ವಹಿಸಲಿದ್ದಾರೆ. ರಾತ್ರಿ ೯ ರಿಂದ ಸಕಲ ಭಕ್ತಾದಿಗಳಿಂದ ಅಖಂಡ ಭಜನೆ ಕಾರ್ಯಕ್ರಮ ನೆರವೇರಲಿದೆ.