ಬೀದರ:ಎ.27:ಜಿಲ್ಲಾಡಳಿತದಿಂದ ಕರ್ನಾಟಕ ಸರ್ಕಾರದ ಪರವಾಗಿ ಶ್ರೀ ಆಂದಿಶಂಕರಾಚಾರ್ಯ ಜಯಂತಿ ಜಿಲ್ಲಾಧಿಕಾರಿಗಳ ಕಚೇರಿ ಸಭಾ ಭವನದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿಗಳು ಶ್ರೀ ಶಿವಕುಮಾರ ಶೀಲವಂತ ರವರು ಶ್ರೀ ಆದಿಶಂಕರಾಚಾರ್ಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ದೀಪ ಪ್ರಜ್ವಲಿಸುವ ಮೂಲಕ ಜಯಂತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ತದನಂತರ ವಿಪ್ರ ಸಮಾಜದ ಹಿರಿಯರು ಹಾಗೂ ಶ್ರೀ ಆದಿಶಂಕರಾಚಾರ್ಯ ಸೇವಾ ಸಮಿತಿ, ಬೀದರ ಮುಖಂಡರುಗಳಾದ ಶಾಮಕಾಂತ ಕುಲಕರ್ಣಿ, ಆದಿಶಂಕರಾಚಾರ್ಯ ಜೀವನದ ಬಗ್ಗೆ ಸಂಕ್ಷಿಪ್ತದಲ್ಲಿ ಉಪನ್ಯಾಸ ನೀಡಿದರು. ಈ ಒಂದು ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಶ್ರೀ ಶಿವಶರಣಪ್ಪ ವಾಲಿ ಅವರು ಭಾಗವಹಿಸಿ, ಕಾರ್ಯಕ್ರಮಕ್ಕೆ ಶೋಭೆ ತಂದರು ಮತ್ತು ಅವರ ಸಹ ಶ್ರೀ ಆದಿಶಂಕರಾಚಾರ್ಯರ ಬಗ್ಗೆ ಮಾತನಾಡಿದರು.
ಅದೇ ತರಹ ಈ ಕಾರ್ಯಕ್ರಮಕ್ಕೆ ವಿಪ್ರ ಸಮಾಜದ ಮನೋಹರ ದಂಡೆ ಮಾಜಿ ನಗಸಭೆ ಸದಸ್ಯರು, ಮಧುಕರರಾವ ನ್ಯಾಲಕಲ, ಎಂ.ಜಿ. ದೇಶಪಾಂಡೆ ಹಿರಿಯ ಸಾಹಿತಿಗಳು, ವಿನೋದ ಕುಲಕರ್ಣಿ ಮತ್ತು ಪುರುಷೋತ್ತಮ ಪುರೋಹಿತ ಇವರುಗಳು ಭಾಗಿಯಾಗಿ ಈ ಕಾರ್ಯಕ್ರಮ ಸರಳ ರೀತಿಯಲ್ಲಿ ಶ್ರೀ ಆದಿಶಂಕರಾಚಾರ್ಯ ಜಯಂತಿ ಆಚರಿಸಲಾಯಿತು.