ಶ್ರೀ ಅರವಿಂದರ ದಿವ್ಯಜೀವನ ಹಾಗೂ ಸುಪ್ರಮಾನಪ ಕುರಿತು ರಚಿಸಿದ ರೇಖೆ ಮತ್ತು ವರ್ಣ ಡಿಜಿಟಲ್ ಕಲಾಕೃತಿಗಳ ಪ್ರದರ್ಶನ

ಕಲಬುರಗಿ,ಅ.15: ಕಲಬುರಗಿ ವಿಶ್ವೇಶ್ವರಯ್ಯ ನಗರದ ಚೈತನ್ಯಮಯಿ ಆರ್ಟ ಗ್ಯಾಲರಿಯಲ್ಲಿ ಚೈತನ್ಯಮಯಿ ಟ್ರಸ್ಟ (ರಿ) ಕಲಬುರಗಿ, ಶ್ರೀ ಅರವಿಂದರ 151 ಜನ್ಮ ವಾರ್ಷಿಕೋತ್ಸವ ಸಮಾರಂಭವನ್ನು ಆಚರಿಸಲಾಯಿತು. ಹಿರಿಯ ಚಿತ್ರಕಲಾವಿದ ಹಾಗೂ ಗ್ಯಾಲರಿಯ ನಿರ್ದೇಶಕ ಡಾ. ಎ. ಎಸ್. ಪಾಟೀಲ ರಚಿಸಿದ ಶ್ರೀ ಅರವಿಂದರ ದಿವ್ಯಜೀವನ ಹಾಗೂ ಸುಪ್ರಮಾನಪ ಕುರಿತು ರಚಿಸಿದ ರೇಖೆ ಮತ್ತು ವರ್ಣ ಡಿಜಿಟಲ್ ಕಲಾಕೃತಿಗಳ ಪ್ರದರ್ಶನ ಏಪಡಿಸಲಾಗಿತ್ತು.
ಮಂಗಳವಾರ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಇಂಡಸ್ಟ್ರೀಜ ಅಧ್ಯಕ್ಷ ಶಶಿಕಾಂತ ಪಾಟೀಲ ದೀಪ ಬೆಳಗುವುದರೊಂದಿಗೆ ಉದ್ಘಾಟಿಸಿ ಕಲಾಕೃತಿಗಳನ್ನು ಆಸಕ್ತಿಯಿಂದ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕಲಾಕೃತಿಗಳು ಮನಸ್ಸಿಗೆ ಸಮಾಧಾನ ಶಾಂತಿ ಸಂತೃಪ್ತಿ ತಂದು ಕೊಟ್ಟಿವು ಎಂದು ಅಭಿಪ್ರಾಯಪಟ್ಟರು.
ವಿಜಯಪೂರ ಜಿಲ್ಲೆ ಹಲಸಂಗಿ ಶ್ರೀ ಅರವಿಂದ ಮಂಡಳ ಕಾರ್ಯದರ್ಶಿ ಜಗದೇವ ಎಸ್.ಗಲಗಲಿಅವರು ಶ್ರೀ ಅರವಿಂದರು ಮತ್ತು ಶ್ರೀಮಧುರಚನ್ನರು ಕುರಿತು ಅವರ ಸಾಧನೆ ಸಿದ್ದಿಗಳ ಸಾಮ್ಯತೆ ಕುರಿತು ಸ್ವಾರಸಕರವಾಗಿ ಮಾತಾಡಿದರು. ಹಲಸಂಗಿಯನ್ನು ಮಿನಿ ಪಾಂಡಿಚೇರಿ ಮಾಡಿದ ಶ್ರೇಯಸ್ಸು ಮಧುಗಿರಿ ಚೆನ್ನರಿಗೆ ಸಲ್ಲುತ್ತದೆ. ಎಂದು ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಗೌರವ ಡಾಕ್ಟರೇಟ್ ಪುರಸ್ಕ್ರತ 2023 ಶಿಲ್ಪಿ ಡಾ. ಮಾನಯ್ಯ ನಾಗಣ್ಣಾ ಬಡಿಗೇರ ಅವರಿ ಸನ್ಮಾನಿಸಲಾಯಿತು. ಅವರು ಕಲಾಗ್ಯಾಲಗಳು ಮತ್ತು ಸಂಘ ಸಂಸ್ಥೆಗಳು ಕಲಾವಿದರಿಗೆ ವೇದಿಕೆ ಒದಗಿಸಿಕೊಡುವುದರಿಂದ ಕಲಾಕ್ಷೇತ್ರಗಳು ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಲಬುರಗಿ ಕೆ.ಕೆ.ಸಿ.ಸಿ. ಮತ್ತು ಆಯ್ ಕಾರ್ಯದರ್ಶಿ ಮಂಜುನಾಥ ಜೇವರಗಿ, ಮಾಜಿ ಅಧ್ಯಕ್ಷ ಪ್ರಶಾಂತ ಮಾನಕರ ಇತರ ಸದ್ಯಸರು ಹಾಗು ಕಲಾವಿದರಾದ ಮಹ್ಮಮದ ಅಯ್ಯಾಜುದ್ದೀನ ಪಟೇಲ್, ಡಾ. ಎಸ್. ಎಂ.ನೀಲಾ, ಡಾ. ಶಾಹೀದ ಪಾಶಾ, ವಿ.ಬಿಬಿರಾದಾರ, ನಾರಾಯಣ.ಎಂ ಜೋಶಿ, ಸಂಘದ ಸದ್ಯಸರು ಹಾಜರಿದ್ದರು. ದಿನೇಶ ಪಾಟೀಲ ಸ್ವಾಗತಿಸಿದರು. ಡಾ ಎ.ಎಸ್. ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಡಾ ಸುಜಾತಾ ಪಾಟೀಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಚಿತ್ರಕಲಾ ಪ್ರದರ್ಶನ ಅಗಸ್ಟ್ 31 ರವರೆಗೆ ಸಮಯ ಸಂಜೆ 5 ರಿಂದ 8 ರವರೆಗೆ ಸಾರ್ವಜನಿಕರು ವೀಕ್ಷಿಸಬಹುದು.