ಶ್ರೀ ಅಯ್ಯಪ್ಪ ದೇವಸ್ಥಾನದ ನೂತನ ಪಧಾಧಿಕಾರಿಗಳ ನೇಮಕ

ಲಿಂಗಸುಗೂರು.ಜು.೨೧- ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಪ್ರತಿ ಶನಿವಾರ ಸಾಯಂಕಾಲ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ. ಅಯ್ಯಪ್ಪಸ್ವಾಮಿ ಮಾಲೆಧಾರಿಗಳು, ಭಕ್ತಾಧಿಗಳು, ಸಾರ್ವಜನಿಕರು ಎರಡು ದಿನ ಮುಂಚಿತವಾಗಿ ಆಯಪ್ಪಸ್ವಾಮಿ ದೇವಸ್ಥಾನದ ಕಾರ್ಯಾಲಯದಲ್ಲಿ ನೋಂದಾಯಿಸಬಹುದು ಹಾಗೂ ಭಕ್ತರು ಮಾಲೆದಾರಿಗಳು ಹುಟ್ಟು ಹಬ್ಬದ ನಿಮಿತ್ಯ ಅಭಿಷೇಕ ಮಾಡಲಾಗುವುದು, ಒಂದು ದಿನ ಮುಂಚವಾಗಿ ಕಾರ್ಯಾಲಯದಲ್ಲಿ ರಶೀದಿ ಪಡೆಯಬಹುದು ಆವರಣದಲ್ಲಿ ಸಣ್ಣ ಪುಟ್ಟ ಕಾರ್ಯಕ್ರಮಗಳು ಮಾಡಲು ಮತ್ತು ನಮ್ಮ ದೇವಸ್ಥಾನದ ಅನುಕೂಲ ಇರುತ್ತದೆ. ಸಾರ್ವಜನಿಕರು
ಸದುಪಯೋಗ ಪಡಿಸಿಕೊಳ್ಳಬೇಕು. ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ ನೂತನ ಅಧ್ಯಕ್ಷರಾಗಿ, ಮನೋಹರ, ರಡ್ಡಿ ಮುನ್ನೂರು, ಗೌರವ ಅಧ್ಯಕ್ಷರನ್ನಾಗಿ ಡಾ.ನಡುವಿನ ಮನಿ ಉಪಾಧ್ಯಕ್ಷರನ್ನಾಗಿ ಬಸವರಾಜ್ ಗಣೇಕಲ್
ಪ್ರಧಾನ ಕಾರ್ಯದರ್ಶಿ ಈರಣ್ಣ ಗುರುಸ್ವಾಮಿ ಖಜಾಂಚಿ ಯಾಗಿ ಬಾಲನ್. ಸಹ ಖಜಾಂಚಿ ಯಾಗಿ .ಯಮನಪ್ಪ ದೇಗಲಮರಡಿ, ಕಾರ್ಯದರ್ಶಿ ಯಾಗಿ .ಸುಧೀರ ಶ್ರೀವಾಸ್ತವ ಸಹ ಕಾರ್ಯದರ್ಶಿ ಯಾಗಿ
ಶ್ರೀಧರ ಕಿರಗಿ, ಮಲ್ಲಿಕಾರ್ಜುನ ಕೆಂಬಾವಿ, ನಿರ್ದೇಶಕರಾಗಿ ರಾಜಶೇಖರ ಪಲ್ಲೇದ ಸಿದ್ದು ಬಡಿಗೇರ, ಅಶೋಕ ದಿಗ್ಗಾವಿ, ಬಾಬುರೆಡ್ಡಿ ರಡ್ಡಿ, ಮುನ್ನೂರ ನೇಮಕವಾಗಿದ್ದರೆ ಎಂದು ಲಿಂಗಸುಗೂರ ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ನೂತನ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷರಾದ ಮನೋಹರ ರೆಡ್ಡಿ ಮುನ್ನೂರು ಹೇಳಿದರು.
ಈ ಸಂದರ್ಭದಲ್ಲಿ ಸಿದ್ದು ಬಡಿಗೇರ್, ಅಶೋಕ ದಿಗ್ಗಾವಿ, ಬಾಲನ್, ಈರಣ್ಣ ಗುರುಸ್ವಾಮಿ, ಮಲ್ಲಿಕಾರ್ಜುನ ಕೆಂಬಾವಿ ಉಪಸ್ಥಿತರಿದ್ದರು.