ಶ್ರೀ ಅಮರೇಶ್ವರ ಜಾತ್ರೆ:ಪರವಾನಿಗೆಗೆ ಮನವಿ

ಲಿಂಗಸೂಗೂರು.ಮಾ.೨೭-ಇಂದು ನಮ್ಮ ಪಕ್ಷದ ತಾಲೂಕು ಅಧ್ಯಕ್ಷರಾದ ನಾಗಭೂಷಣ ಅವರ ನೇತೃತ್ವದಲ್ಲಿ ಸಹಾಯಕ ಆಯುಕ್ತರು ಉಪವಿಭಾಗ ಲಿಂಗಸುಗೂರು ಇವರಿಗೆ ಶ್ರೀ ಅಮರೇಶ್ವರ ಜಾತ್ರೆ ಅಂಗಡಿ ಮುಂಗಟ್ಟುಗಳಿಗೆ ಪರವಾನಿಗೆ ಕೊಡಬೇಕೆಂದು ಮನವಿ ಸಲ್ಲಿಸಲಾಯಿತು.
ಕಳೆದ ವರ್ಷವೂ ಶ್ರೀ ಅಮರೇಶ್ವರ ಜಾತ್ರೆ ಯಾವುದೇ ವ್ಯಾಪಾರ ವಹಿವಾಟು ನೆಡೆದಿರುವುದಿಲ್ಲ ಕಾರಣ ಈ ವರ್ಷ ಅಂಗಡಿ ಮುಂಗಟ್ಟುಗಳಿಗೆ ಪರವಾಗಿ ಕೊಟ್ಟರೆ ಈ ಭಾಗದ ರೈತಾಪಿ ವರ್ಗದವರಿಗೆ ವ್ಯಾಪಾರ ವಹಿವಾಟುಗಳಿಗೆ ಹಾಗೂ ಬಡ ಕೂಲಿ ಕಾರ್ಮಿಕರಿಗೆ ಆರ್ಥಿಕ ಪರಿಸ್ಥಿತಿ ತುಂಬಾ ತೊಂದರೆಯಲ್ಲಿದ್ದಾರೆ.
ಮೊನ್ನೆ ದಿನ ಮಸ್ಕಿ ಉಪಚುನಾವಣೆ ಪ್ರಚಾರವನ್ನು ಮಾನ್ಯ ಮುಖ್ಯಮಂತ್ರಿಗಳೇ ಸುಮಾರು ೩೦ ಸಾವಿರ ಜನಸಂಖ್ಯೆ ಸೇರಿಸಿ ಪ್ರಚಾರ ಮಾಡಿದರು ಅಂದರೆ ಅವರಿಗೆ ಕೋವಿಡ್ ನಿಯಮಗಳು ಲೆಕ್ಕಕ್ಕಿಲ್ಲ ಕೇವಲ ಬಡಜನರಿಗೆ ಬಡ ಕೂಲಿ ಕಾರ್ಮಿಕರಿಗೆ ರೈತಾಪಿ ವರ್ಗದವರಿಗೆ ಮಾತ್ರ ಕೋವಿಡ್ ೧೯ ನಿಯಮ ಇದೇನಾ ಅಂತ ಅನುಮಾನ ವ್ಯಕ್ತವಾಗುತ್ತದೆ.
ಆದ ಕಾರಣ ತಾವು ಅಂಗಡಿ ಮುಂಗಟ್ಟುಗಳಿಗೆ ಪರವಾನಿಗೆ ಕೊಡಬೇಕೆಂದು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಾಗಭೂಷಣ ತಾಲೂಕ ಅಧ್ಯಕ್ಷರು, ಇಮ್ತಿಯಾಜ್ ಪಾಷಾ ಅಧ್ಯಕ್ಷರು, ಯುವ ಘಟಕ ಸಿದ್ದು ಬಡಿಗೇರ್, ಪ್ರ.ಕಾರ್ಯದರ್ಶಿ ವಿಜಯ ಪೂಜಾರಿ, ಅಧ್ಯಕ್ಷರು ನಗರ ಘಟಕ ಜಮೀರ್, ಮುಹೀನ್, ಪಟೇಲ್ ವಕೀಲರು, ಮುಸ್ತಫಾ, ಸ್ಲಂ ಅಧ್ಯಕ್ಷರು ಪರಶುರಾಮ್, ಕೆಂಭಾವಿ, ರಾಜಶೇಖರ್, ಅಧ್ಯಕ್ಷರು ರೈತರ ಸಂಘ ಜೆಡಿಎಸ್ ಹನುಮಂತು, ಬಾಲಪ್ಪ ಹಂಚಿನಾಳ, ಜೆಡಿಎಸ್ ಪಕ್ಷದ ಎಲ್ಲಾ ಕಾರ್ಯಕರ್ತರು ಮುಖಂಡರು ಭಾಗವಹಿಸಿದ್ದರು.ಶ್ರೀ ಅಮರೇಶ್ವರ ಜಾತ್ರೆ:ಪರವಾನಿಗೆಗೆ ಮನವಿ