ಶ್ರೀ ಅಮರೇಶ್ವರ ಆಸ್ಪತ್ರೆ: ಉಚಿತ ಕ್ಯಾನ್ಸರ್ ಪತ್ತೆ ಶಿಬಿರ

ರಾಯಚೂರು,ನ.೨೧- ನಗರದ ಶ್ರೀ ಅಮರೇಶ್ವರ ಆಸ್ಪತ್ರೆಯಲ್ಲಿ ಉಚಿತ ಕ್ಯಾನ್ಸರ್ ಪತ್ತೆ ಶಿಬಿರ ಆಯೋಜಿಸಲಾಗಿತ್ತು . ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನ್ಯೂರೋ ಸರ್ಜನ್ ಡಾ . ಬಸನಗೌಡ ಪಾಟೀಲ ಹಾಗೂ ಗುಲಬರ್ಗಾದ ಎಚ್‌ಸಿಜಿ ಕ್ಯಾನಸರ್ ಆಸ್ಪತ್ರೆ ಆಂಕೋಲಾಜಿಸ್ಟ್ ಡಾ.ಶಾಂತಲಿಂಗ ನಿಗುಡಗಿ ಮಾತನಾಡಿದರು.
ಅಮರೇಶ್ವರ ಆಸ್ಪತ್ರೆ ಇಂಟರ್ನಲ್ ಮೆಡಿಸಿನ್‌ನ ಡಾ.ಅಮರಜೀತ್ ಪಾಟೀಲ್ ರೋಟರಿ ಕ್ಲಬ್‌ನ ಅಸಿಸ್ಟೆಂಟ್ ಗವರ್ನರ್ ನಿಜಾ ನಂದರೆಡ್ಡಿ , ಜಿಲ್ಲಾ ಕಾರ್ಯದರ್ಶಿ ಎಸ್.ಬಿ.ಪಾಟೀಲ್ ,ರೋಟರಿ ಕಾಟನ್ ಸಿಟಿ ಅಧ್ಯಕ್ಷ ಎನ್.ಬಾಬು ಗೌಡ , ಪ್ರೊಜೆಕ್ಟ್ ಚೇರ್ಮನ್‌ಗಳಾದ ಡಾ.ಶಾಮಣ್ಣ ಮಾಚನೂರು,ರಾಘ ವೇಂದ್ರ ಸ್ವಾಮಿ , ಬಾಬುಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿವಗಿರೀಶ್ ಸಮಾರಂಭದ ನೇತೃತ್ವವಹಿಸಿದ್ದರು.ರೋಟರಿ ಸೆಂಟ್ರಲ್ ಅಧ್ಯಕ್ಷ ಮಂಜುನಾಥ ವಟಗಲ್ ಸ್ವಾಗತಿಸಿ ವಂದಿಸಿದರು.ರಾಯಚೂರು ಕ್ಲಬ್ ಗಳಾದ ರಾಯಚೂರು ಸೆಂಟ್ರಲ್ ,ರಾಯಚೂರು ಕಾಟನ್ ಸಿಟಿ ರಾಯ ಚೂರು ಈಸ್ಟ್ , ರಾಯಚೂರು ಮೇನ್ , ರಾಯಚೂರು ಕೃಷ್ಣ ತುಂಗೆ,ಏಇಎ ಕ್ಯಾನ್ಸರ್ ಆಸ್ಪತ್ರೆ,ಗುಲ್ಬರ್ಗ ಮತ್ತು ಶ್ರೀ ಅಮರೇಶ್ವರ ಆಸ್ಪತ್ರೆ ರಾಯ ಚೂರು ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿತ್ತು. ರೋ ಟರಿ ಕ್ಲಬ್‌ಗಳ ಸದಸ್ಯರು ಭಾಗವಹಿಸಿದ್ದರು .