
ಹುಮನಾಬಾದ್:ಮಾ.24: ಪಟ್ಟಣದ ನಗರೇಶ್ವರ ದೇವಸ್ಥಾನ ಹತ್ತಿರದ ಶ್ರೀ ಅನ್ನಪುರ್ಣೇಶ್ವರಿ ದೇವಿ ಮಹಿಳಾ ಟ್ರಸ್ಟ್ನ್ ಕಚೇರಿಯಲ್ಲಿ ಬುಧವಾರ ಅಂತ ರಾಷ್ಟಿಯ ಮಹಿಳಾ ದಿನಾಚಾರಣೆ ಹಾಗೂ ಯುಗಾದಿ ಹಬ್ಬದ ಕಾರ್ಯಕ್ರಮ ಬೇವು ಬೆಲ್ಲ ಸವಿಯುವ ಮೂಲಕ ಸಂಭ್ರಮದಿದ ಜರುಗಿತು.
ಶ್ರೀ ಅನ್ನಪುರ್ಣೇಶ್ವರಿ ದೇವಿ ಮಹಿಳಾ ಟ್ರಸ್ಟ್ನ ತಾಲ್ಲೂಕು ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಕಾಲದ ಮಹಿಳೆಯರು ಅಬಲೆಯಲ್ಲದೆ, ಸಬಲೆಯರಾಗಿ ಎಲ್ಲಾ ರಂಗಗಳಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸುವ ಮೂಲಕ ಪುರುಷರಿಗೆ ಸಮಾನವಾಗಿದ್ದಾರೆ ಎಂದರು.
ಭಾರತೀಯ ಪರಂಪರೆ ಮತ್ತು ಸಂಸ್ಕ್ರತಿಯತೆ ಯುಗಾದ ಹಬ್ಬದಿಂದಲೇ ಹೊಸ ವರ್ಷಾಚಾರಣೆ ಮಾಡಲಾಗುತ್ತಿದೆ. ಹಿಗಾಗಿ ಇಂದಿನ ಯುವ ಜನಾಂಗ ನಮ್ಮ ದೇಶದ ಸಾಹಿತ್ಯ, ಸಂಸ್ಕ್ರತಿ ಮತ್ತು ಪರಂಪರೆಯನ್ನು ಮರೆಯದೆ ಜೀವನದಲ್ಲಿ ಪಾಲಿಸಿಕೊಂಡ ಬರಬೇಕು, ಎಂದು ಸಲಹೆ ನೀಡಿದರು. ಶ್ರೀ ಅನ್ನಪುರ್ಣೇಶ್ವರಿ ದೇವಿ ಮಹಿಳಾ ಟ್ರಸ್‍ನ ತಾಲ್ಲೂಕು ಉಪಾಧ್ಯಕ್ಷೆ ಶೋಭಾ ಗುರಮಿಟಕಲ್, ಕಾರ್ಯದರ್ಶಿ ಸುರೇಖಾ ವಿಭೂತಿ, ಕೋಶಾಧ್ಯಕ್ಷೆ ಸುಧಾರಾಣಿ ಪುಜಾರಿ, ಸದಸ್ಯರಾದ್ ಅನಿತಾ ಚಿದ್ರಿ, ದ್ರೋಪತಿ ಶಮಶಾಬಾದೆ, ವಿಮಲಾ ಸಂಗಮಕರ್, ಅನಿತಾ ಅಶೋಕ, ಉಮಾ ಕುಲಕರ್ಣಿ, ಇದ್ದರು.