
ಬಾದಾಮಿ,ಮಾ23: ಪಟ್ಟಣದ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಶ್ರೀ ಅಂಬಾಭವಾನಿ ದೇವಿಯ 14 ನೇ ವರ್ಷದ ವಾರ್ಷಿಕೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಸಂಗೀತ ವಾದ್ಯ ಮೇಳದೊಂದಿಗೆ ಹಾಗೂ ಸುಮಂಗಲೆಯರ ಪೂರ್ಣ ಕುಂಭ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಸಮಾಜ ಬಾಂಧವರು ಸಾಮೂಹಿಕ ನೃತ್ಯ ಮಾಡುವುದರ ಮೂಲಕ ಮೆರವಣಿಗೆಗೆ ಮೆರುಗು ನೀಡಿದರು. ಶ್ರೀ ಅಂಬಾಭವಾನಿ ದೇವಿಯ ಮೆರವಣಿಗೆ ಶಾಂತ ರೀತಿಯಿಂದ ದೇವಸ್ಥಾನ ತಲುಪುವುದರ ಮೂಲಕ ಮುಕ್ತಾಯಗೊಂಡಿತು. ಈ ಕಾರ್ಯಕ್ರಮದಲ್ಲಿ ಸಮಾಜದ ಎಲ್ಲ ಹಿರಿಯರು, ಯುವಕ – ಯುವತಿಯರು, ಹಾಗೂ ಸಮಾಜದ ಸರ್ವ ಬಾಂಧವರು ಭಾಗವಹಿಸಿದ್ದರು.