ಶ್ರೀ ಅಂಜನೇಯ್ಯ ದೇವಸ್ಥಾನ : ೬ ಲಕ್ಷ ರೂ. ದೇಣಿಗೆ ಕೆ.ಶಿವನಗೌಡ ನಾಯಕ

ಅರಕೇರಾ.ಆ.೦೬-ದೇವದುರ್ಗ ತಾಲ್ಲೂಕಿನ ಮಲ್ಲಾಪೂರು ಗ್ರಾಮದಲ್ಲಿನ ಶ್ರೀ ಅಂಜನೇಯ್ಯದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ೬ ಲಕ್ಷ ರೂ. ದೇಣಿಗೆಯನ್ನು ಶಾಸಕರು ಹಾಗೂ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಕೆ.ಶಿವನಗೌಡನಾಯ ರವರು ತಮ್ಮ ನಿವಾಸದಲ್ಲಿ ದೇವಸ್ಥಾನದ ಸಮಿತಿಯವರಿಗೆ ದೇಣಿಗೆ ನೀಡಿದರು.
ಸಂದರ್ಭದಲ್ಲಿ ಬಸವರಾಜ ಪೂಜಾರಿ, ಅಂಜನೇಯ್ಯ ದಳವಾಯಿ.ಶೇಖರಪ್ಪ ಗೌಡಮಾಲಿಪಾಟೀಲ ಅರಕೇರಾ ಹನುಮಗೌಡ, ಹನುಮಂತ್ರಾಯ ಪೋಲಿಸ್ ಪಾಟೀಲ್,ಪದ್ದಯ್ಯ ಮಾಲಿ ಪಾಟೀಲ್,ಗ್ರಾಮ ಪಂಚಾಯತಿ ಸದ್ಯಸರುಗಳಾದ ವೀಠೋಬಗಾಲಿ,ಅಂಜನೇಯ್ಯಪೂಜಾರಿ. ಲಚಮಯ್ಯ ,ಆಂಜನೇಯ್ಯ ಸರಗಿನ ನರಸಯ್ಯ ಇರಬಗೇರಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.