ಶ್ರೀ’ಸ್ ಕಾಲೇಜು : ಯೋಗ ತರಬೇತಿ

ರಾಯಚೂರು,ಜು,೧೯- ನಗರದ ಶ್ರೀವಾರಿ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟನ ಶ್ರೀ’ಸ್ ಬಿ.ಕಾಂ ಕಾಲೇಜಿನಿವತಿಯಿಂದ ವಿಶೇಷವಾಗಿ ಶ್ರೀ’ಸ್ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಯೋಗ ತರಬೇತಿಯನ್ನು ಆಯೋಜಿಸಲಾಗಿತ್ತು.
ಬೆಂಗಳೂರಿನ ಶ್ರೀ ರವಿಶಂಕರ್ ಗುರೂಜಿಯವರ ಆರ್ಟ್ ಆಫ್ ಲಿವಿಂಗ್‌ನ ಹಿರಿಯ ತರಬೇತುದಾರರಾದ ಸಂದೀಪ್ ಜಿ ಅವರು ಯುತ್ ಹ್ಯಾಪಿನೆಸ್ ಪ್ರೋಗ್ರಾಮ್ ಅಡಿಯಲ್ಲಿ ನಾಲ್ಕು ದಿನಗಳು ಯೋಗ, ಪ್ರಾಣಯಾಮ, ಸುದರ್ಶನ ಕ್ರಿಯೆ ಮತ್ತಿತರ, ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವ ಚಟುವಟಿಕೆಗಳ ಬಗ್ಗೆ ತರಬೇತಿ ನೀಡಿದರು.
ಈ ಕಾರ್ಯಕ್ರಮವು ಯಶಸ್ವಿಯಾಗಲು ಕಾಲೇಜಿನ ಅಧ್ಯಕ್ಷರಾದ ಶ್ರೀಕಾಂತ್ ಚಾರ್ಟರ್ಡ್ ಅಕೌಂಟೆಂಟ್ ಅವರು, ರಾಯಚೂರಿನ ಆರ್ಟ್ ಆಫ್ ಲಿವಿಂಗ್‌ನ ತರಬೇತುದಾರರಾದ ರೂಪದೇವಿ ಅವರು ಹಾಗೂ ಸದಸ್ಯರಾದ ಲಿಖಿತ್ ಮೈಲಾಪುರ್ ಅವರು ಸಹಕರಿಸಿದರು.