ಶ್ರೀಸುಂಕ್ಲಮ್ಮದೇವಸ್ಥಾನದಲ್ಲಿ ಅನ್ನಸಂತರ್ಪಣೆ


ಸಂಜೆವಾಣಿ ವಾರ್ತೆ
ಕುರುಗೋಡು.ಆ.5  ಪಟ್ಟಣದ ಆರಾದ್ಯದೇವತೆ ಶ್ರೀಸುಂಕ್ಲಮ್ಮದೇವಿ ದೇವಸ್ಥಾನದಲ್ಲಿ ಶ್ರಾವಣಮಾಸದ 2 ನೇ ಶುಕ್ರವಾರದಂದು ಕುರುಗೋಡು ಮಾಜಿ ಶಾಸಕ ನಾರಾಸೂರ್ಯನಾರಾಯಣರೆಡ್ಡಿಯವರ ನೇತೃತ್ವದಲ್ಲಿ ಭಕ್ತರಿಗಾಗಿ ಅನ್ನಸಂತರ್ಪಣೆ ಹಾಗು ವಿಶೇಷ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 
ನಂತರ ಕುರುಗೋಡು ಮಾಜಿಶಾಸಕ ನಾರಾ ಸೂರ್ಯನಾರಾಯಣರೆಡ್ಡಿಯವರು ಮಾತನಾಡಿ,  ಕುರುಗೋಡು ಶಕ್ತಿದೇವತೆ ಶ್ರೀಸುಂಕ್ಲಮ್ಮದೇವಿಯು ನಾಡಿನ ಎಲ್ಲಾ ರೈತರಿಗೆ ಉತ್ತಮ ಮಳೆ, ಬೆಳೆ ನೀಡಲೆಂದು ರೈತರ ಪರವಾಗಿ ದೇವಿಯಲ್ಲಿ ಪ್ರಾರ್ಥಿಸಿದರು. ಜೊತೆಗೆ ಶ್ರೀಸುಂಕ್ಲಮ್ಮದೇವಿ ದೇವಸ್ಥಾನದ ಅಭಿವೃದ್ದಿಗೆ ಸ್ವಇಚ್ಚೆಯಿಂದ ಸಹಾಯ-ಸಹಕಾರ ನೀಡುವುದಾಗಿ ಮಾಡುವುದಾಗಿ ಭರವಸೆ ನೀಡಿದರು. ಶ್ರಾವಣಮಾಸದ 2ನೇ ಶುಭ ಶುಕ್ರವಾರದ ನಿಮಿತ್ತ ದೇವಸ್ಥಾನದ ಅರ್ಚಕರಿಂದ [ಪೂಜಾರಿ] ಎಲೆಪೂಜೆ, ಕುಂಕುಮಾರ್ಚನೆ, ಮಂಗಳಾರುತಿ ಸೇರಿದಂತೆ ಇತರೆ ಕಾರ್ಯಗಳು ಧಾರ್ಮಿಕ ವಿಧಿ-ವಿದಾನಗಳಿಂದ ಸಾಂಗಪವಾಗಿ ಜರುಗಿದವು. ನಂತರ ಕುರುಗೋಡು ಮಾಜಿಶಾಸಕ ನಾರಾಸೂರ್ಯನಾರಾಯಣರೆಡ್ಡಿಯವರು ದೇವಸ್ಥಾನದ ದರ್ಶನಕ್ಕೆ ಬಂದಂತಹ ಭಕ್ತಾದಿಗಳಿಗೆ ಅನ್ನವನ್ನು ನೀಡುವುದರ ಮೂಲಕ ಅನ್ನಸಂತರ್ಪಣೆಗೆ ಚಾಲನೆ ನೀಡಿದರು, ನಂತರ ಸಾಲು-ಸಾಲಾಗಿ ಬಂದ ಭಕ್ತರು ಅನ್ನಸಂತರ್ಪಣೆ ಮಾಡಿ ಶ್ರೀಸುಂಕ್ಲಮ್ಮದೇವಿಯ ಕೃಪೆಗೆ ಪಾತ್ರರಾದರು. 
ಅತಸಂತರ್ಪಣೆ  ಹಾಗು ವಿಶೇಷ ಪೂಜಾಕಾರ್ಯಕ್ರಮದಲ್ಲಿ ಮಾಜಿಶಾಸಕ ಸೂರ್ಯನಾರಾಯಣರೆಡ್ಡಿ ಅಭಿಮಾನಿ ಬಳಗದ ಕಾರ್ಯಕರ್ತರು, ಹಾಗು ಊರಿನ ಮುಖಂಡರು ಇದ್ದರು. ಮತ್ತು ದೇವಸ್ಥಾನದ ಸೇವಾಸಮಿತಿ ಮಖಂಡರು ಇದ್ದರು.