ಶ್ರೀಸಾಮಾನ್ಯರ ಕೈಗೆಟುಕುವ ಶ್ರಾವ್ಯ ಮಾಧ್ಯಮದ ಬಳಕೆ

ಮೈಸೂರು:ಏ:03: ಕನ್ನಡ ಕಾಯಕ ವರ್ಷ 2020-21 ಬಾರಿಸು ಕನ್ನಡ ಡಿಂಡಿಮವ ಅಭಿಯಾನ 5 ಮೈಸೂರು ಮಹಾನಗರ ಪಾಲಿಕೆ ಕನ್ನಡ ಜಾಗೃತಿ ಸಮಿತಿ ಇಂದ ಇಂದು ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಇರುವ 93.5 ರೆಡ್ ಎಫ್ ಎಂ ಕಚೇರಿಗೆ ಭೇಟಿ ನೀಡಿ ಕಾರ್ಯಕ್ರಮದಲ್ಲಿ ಶುದ್ದ ಕನ್ನಡ ಭಾಷೆ ಬಳಸುವಂತೆ ಹಕ್ಕೊತ್ತಾಯ ಮಾಡಲಾಯಿತು.
ನಾಲ್ಕೈದು ದಶಕದಿಂದ ಗ್ರಾಮೀಣ ಪ್ರದೇಶದ ಜನರ ಮನೆಯಲ್ಲಿ ಮತ್ತು ತಮ್ಮ ಕೆಲಸ ಮಾಡುವ ಸ್ಥಳಗಳಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಕೂಡ ಶ್ರೀ ಸಾಮಾನ್ಯರ ಕೈಗೆಟುಕುವ ಹಾಗೆ ಶ್ರವ್ಯ ಮಾಧ್ಯಮದ ಬಳಕೆ ಇದ್ದು ಸುಮಾರು ಒಂದು ದಶಕದಿಂದ ಇತ್ತೀಚೆಗೆ ಪ್ರವಾಸದಲ್ಲಿ, ಕಚೇರಿಗೆ ಹೋಗುವಾಗ ತಮ್ಮ ವಾಹನಗಳಲ್ಲಿ, ಮುಂಜಾನೆ ಮತ್ತು ಸಂಜೆಯ ವಾಯು ವಿಹಾರದಲ್ಲಿ, ಶ್ರೀ ಸಾಮಾನ್ಯರಿಗೆ ಹತ್ತಿರವಾಗಿ ಶ್ರವ್ಯ ಮಾಧ್ಯಮ ಬಳಕೆ ಹೆಚ್ಚು ಆದ್ದರಿಂದ ತಾವು ಎಲ್ಲಾ ವರ್ಗದ ಜನರಿಗೂ ಬೇಗ ತಲುಪುವ ಕೊಂಡಿಯಾದ್ದರಿಂದ ತಾವು ಕಾರ್ಯಕ್ರಮಗಳಲ್ಲಿ ಎರಡೆರಡು ಅರ್ಥ ಬರದ ಹಾಗೆ ಕುಟುಂಬದವರು ಆಲಿಸುವಾಗ ಮುಜುಗರ ಪಡದಂತೆ ಯುವ ಸಮೂಹ ಅರ್ಥೈಸಿಕೊಳ್ಳುವಾಗ ದ್ವಂದ್ವ ಅರ್ಥಕ್ಕೆ ಅವಕಾಶ ಕೊಡದೆ ಆಂಗ್ಲ ಭಾಷೆಯ ಬಳಕೆ ಆದಷ್ಟು ಕಡಿಮೆ ಮಾಡಿ ಕನ್ನಡವನ್ನು ಹೆಚ್ಚು ಸ್ಪಷ್ಟವಾಗಿ ಸರಿಗನ್ನಡ ಬಳಸಿದರೆ ಕನ್ನಡ ಬಳಕೆ ಹೆಚ್ಚು ಪರಿಣಾಮಕಾರಿಯಾಗಿ ಶ್ರವ್ಯ ಮಾಧ್ಯಮ ಜನ-ಮನ ಗೆಲ್ಲುವ ಅಶಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ್ದಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯಸ್ಥ ಸಂಜಯ್, ತಾಂತ್ರಿಕ ಅಭಿಯಂತರ ಸಂದೇಶ್‍ರವರುಗಳಿಗೆ ಕನ್ನಡ ಜಾಗೃತಿ ಸಮಿತಿ ವತಿಯಿಂದ ಹಕ್ಕೊತ್ತಾಯ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಎ.ಎಸ್ ನಾಗರಾಜ್, ಅರವಿಂದ್ ಶರ್ಮ, ಡಾ.ಮುಳ್ಳೂರು ನಂಜುಂಡಸ್ವಾಮಿ, ಸೌಗಂಧಿಕಾ ವಿ ಜೋಯಿಸ್, ಎನ್.ಜಿ ಗಿರೀಶ್ ಹಾಗೂ ಕನ್ನಡ ಜಾಗೃತಿ ಸಮಿತಿ ಜಿಲ್ಲಾ ಸದಸ್ಯರಾದ ಭೇರ್ಯ ರಾಮಕುಮಾರ್, ಡಾ.ವಿನೋದಮ್ಮ ಉಪಸ್ಥಿತರಿದ್ದರು.