ಶ್ರೀಸದ್ಗುರು ಮಹಾಂತೇಶ್ವರ ಮಠದಲ್ಲಿ ಭಜನೆ

ಚಿಂಚೋಳಿ,ಸೆ.29- ಇಲ್ಲಿನ ಶ್ರೀ ಸದ್ಗುರು ಮಹಾಂತೇಶ್ವರ ಮಠದಲ್ಲಿ ಪ್ರತಿ ವರ್ಷ ದಂತೆ ಈ ವರ್ಷವೂ ಕೂಡ ಶ್ರಾವಣ ಮಾಸದ ಮುಗಿದ ನಂತರ ಶ್ರೀ ಸದ್ಗುರು ಮಹಾಂತೇಶ್ವರ ಮಠದಲ್ಲಿ ಏಳು ದಿವಸಗಳ ಸತತವಾಗಿ ಭಜನೆ ಸಪ್ತಾಹ ನಡೆಸಲಾಯಿತು.
ವಿವಿಧ ಭಜನಾ ಮಂಡಳಿಗಳು ಭಜನೆ ಸಪ್ತಾಹದಲ್ಲಿ ಭಾಗವಹಿಸಿದ್ದವು, ಮತ್ತು ಮಠದಲ್ಲಿ ಏಳು ದಿನ ತನಕ ನಿತ್ಯ ಅನ್ನ ದಾಸೋಹ ಕೂಡ ದಿವನ 24 ಗಂಟೆ ವರೆಗೂ ಇರಲೆಂದು ಅಕ್ಟೋಬರ್ 2 ನೇ ತಾರಿಕ ರಂದು ಸತ್ತ ಭಜನೆ ಕೊನೆ ದಿನವಾಗಿದ್ದು, ಅಂದು ಮುಂಜಾನೆ ಬೆಳಗ್ಗೆ ಕುಂಭಮೇಳ ಮತ್ತು ರುದ್ರ ಅಭಿಷೇಕ ಮತ್ತು ವಿವಿಧ ಪೂಜೆ ಹಾಗೂ ಮಧ್ಯಾಹ್ನ ಪ್ರಸಾದ ವಿತರಣೆ ಕಾರ್ಯಕ್ರಮ ಎಂದು ಮಹಾಂತೇಶ್ವರ ಮಠದ ಆಡಳಿತ ಮಂಡಳಿ ವ್ಯವಸ್ಥಾಪಕರಾದ ಸಂಗಪ್ಪ ಮಾಸ್ಟರ್ ಪಲಮೂರ, ಶಾಂತವೀರಯ್ಯ ಸುಂಕದ, ಸೋಮಯ್ಯ ಮಡಪತಿ, ಶಂಕರ ಗೌಡ ಅಲ್ಲಾಪುರ್, ಶಂಕರ್ ನಾರ, ವೀರೇಂದ್ರ ಜಾಬಶೆಟ್ಟಿ, ದತ್ತು, ತಿಳಿಸಿದ್ದಾರೆ.