
ಬೀದರ:ಸೆ.14:ಆಂದ್ರ ಪ್ರದೇಶದ ಶ್ರೀಶೈಲ ಮಹಾಕ್ಷೇತ್ರದಲ್ಲಿ ತಲೆ ಎತ್ತಿ ನಿಂತಿರುವ ಶ್ರೀ ಅಕ್ಕ ಮಹಾದೇವಿ ಚೈತನ್ಯ ಪೀಠವು ಕನ್ನಡಿಗರ ಹೆಮ್ಮೆ ಮತ್ತು ಅಭಿಮಾನದ ಸಂಕೇತವಾಗಿದೆ ಎಂದು ಕೇಂದ್ರ ರಸಾಯನಿಕ ರಸಗೊಬ್ಬರ ಖಾತೆ ಸಚಿವರಾದ ಶ್ರೀ ಭಗವಂತ ಖೂಬಾರವರು ಅಭಿಮಾನದಿಂದ ಹೇಳಿದರು. ಅವರು ಪವಿತ್ರ ಶ್ರಾವಣ ಮಾಸದ ಅಂಗಗವಾಗಿ ಪರಿವಾರದೊಂದಿಗೆ ಶ್ರೀಶೈಲದ ದರ್ಶನಕ್ಕೆ ಆಗಮಿಸಿದ ಸಂದರ್ಭದಲ್ಲಿ ಚೈತನ್ಯ ಪೀಠಕ್ಕೆ ಭೇಟಿ ನೀಡಿ ಶ್ರೀ ಅಕ್ಕಮಹಾದೇವಿಯ ಹಾಗೂ ಮಹಾತಪಸ್ವಿ ಪೂಜ್ಯ ಶ್ರೀ ಕರುಣಾದೇವಿ ಮಾತಾರವರ ದರ್ಶನಾಶೀರ್ವಾದ ಪಡೆದುಕೊಂಡ ಸಂದರ್ಭದಲ್ಲಿ ಮಾತಾನಾಡುತ್ತ ಹೇಳಿದರು.
ಈ ಮಹಾನ್ ಕಾರ್ಯವು ಕನ್ನಡದ ವೀರ ಕುವರಿ “ಮಹಾತಪಸ್ವಿ ಪೂಜ್ಯ ಶ್ರೀ ಕರುಣಾದೇವಿ ಮಾತಾರವರ ಕಠೋರ ತಪಸ್ಸಿನ ಫಲವಾಗಿದೆ. ಭೂ ಕೈಲಾಸವಾಗಿರುವ ಶ್ರೀ ಶೈಲ ಮಹಾಕ್ಷೇತ್ರದಲ್ಲಿ ನಿವೇಶನ ಸಿಗುವುದು ಅಸಾಧ್ಯವಾದ ಮಾತು. ಎಷ್ಟೋ ಜನಗಳು ಕೈಯಲ್ಲಿ ಕೋಟಿ ಕೋಟಿ ರೂಪಾಯಿಗಳನ್ನು ಹಿಡಿದುಕೊಂಡು ನಿವೇಶನಕ್ಕಾಗಿ ಪ್ರಯತ್ನ ಮಾಡಿದರೂ ಈ ಕಾರ್ಯರ್ಯವು ಅಸಾಧ್ಯವಾಗಿದೆ. ಒಂದು ನಯಾ ಪೈಸೆಯೂ ಇಲ್ಲದೆಯೂ ಶ್ರೀ ಮಾತಾ ಅವರಿಗೆ ಅರ್ಧ ಎಕರೆ ನಿವೇಶನ ಸಿಕ್ಕಿರುವುದು ಕೇವಲ ಅವರು ಮಾಡಿದ ಕಠೋರ ತಪಸ್ಸೆ ಕಾರಣವೆಂದು ಹೇಳಬಹುದು. ಶ್ರೀ ಮಾತಾರವರು ನನ್ನ ಮತ ಕ್ಷೇತ್ರ ಬೀದರ ಜಿಲ್ಲೆಯವರೆಂಬುದು ಅಭಿಮಾನದಿಂದ ಹೇಳಬಹುದು.
ಪೂಜ್ಯ ಶ್ರೀ ಮಾತಾರವರು ಭವ್ಯವಾದ ಶಿವಯೋಗ ಮಂಟಪವನ್ನು ನಿರ್ಮಾಣ ಮಾಡಿ ಅದರಲ್ಲಿ ಆಳೆತ್ತರದ ಸುಂದರವಾದ ವರದ ಹಸ್ತ ಶ್ರೀ ಅಕ್ಕಮಹಾದೇವಿಯವರ ಭವ್ಯವಾದ ಮೂರ್ತಿಯನ್ನು ಸ್ಥಾಪನೆ ಮಾಡಿದ್ದು ನೋಡಿಯೇ ಆನಂದಿಸಬೇಕು.
ಮೂರ್ತಿ ಸ್ಥಾಪನಾ ಕಾರ್ಯದಲ್ಲಿ ಕಾರ್ಯ ಬಾಹುಳ್ಯದಿಂದ ನನಗೆ ಬರಲು ಆಗಿರಲಿಲ್ಲ. ಆ ಕೊರತೆಯು ಮನದಲ್ಲಿ ಕಾಡುತ್ತಿತ್ತು. ಅಕ್ಕಳ ಹಾಗೂ ಶ್ರೀ ಮಾತಾರವರ ದರ್ಶನದಿಂದ ಆ ಕೊರತೆವು ದೂರಾಗಿ ಸಂತಸ ಮೂಡಿಸಿದೆ. ಸದರಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರ ನೀಡುವೆಂದು ಹೇಳಿದ ಸಚಿವರು ಶ್ರೀ ಮಾತಾರವರಿಗೆ ಗೌರವಿಸಿ ದರ್ಶನವನ್ನು ಪಡೆದರು. ಪೂಜ್ಯ ಶ್ರೀ ಮಾತಾರವರು ಕೇಂದ್ರ ಸಚಿವರಾದ ಶ್ರೀ ಭಗವಂತ ಖೂಬಾ ದಂಪತಿಗಳಿಗೆ ಸತ್ಕರಿಸಿ ಆಶೀರ್ವದಿಸಿದರು ಶ್ರೀಮತಿ ಶೀಲಾ ಖೂಬಾ, ಕು, ಮಣಿಕರ್ಣಿಕಾ ಖೂಬಾ, ನ್ಯಾಯವಾದಿ ಶಕುಂತಲಾ ತಂಬಾಕೆ, ದೇವಕ್ಕ ಮುಂತಾದವರು ಇದ್ದರು.