ಶ್ರೀಶೈಲ ಶ್ರೀಗಳ ಭೇಟಿಯಾದ ಸೂರ್ಯನಾರಾಯಣ ರೆಡ್ಡಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏಪ್ರಿಲ್.10: ಶ್ರೀಶೈಲ ಪೀಠದ ಜಗದ್ಗುರುಗಳನ್ನು ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ಅವರು ನಗರದಲ್ಲಿಂದು ಭೇಟಿ ಮಾಡಿ ಆಶೀರ್ವಾದ ಪಡೆದರು.
ನಗರದ ವೀರಶೈವ ಲಿಂಗಾಯತ ಮುಖಂಡ ಮರಿಸ್ವಾಮಿಮಠದ ಮಹಾಲಿಂಗಯ್ಯ (ರಾಜಣ್ಣ) ಅವರ ನಿವಾಸಕ್ಕೆ ಶ್ರೀಗಳು ಭೇಟಿ ನೀಡಿದ್ದರು. ಈ ವೇಳೆ  ಸೂರ್ಯನಾರಾಯಣ ರೆಡ್ಡಿಯವರು ತಮ್ಮ ಬೆಂಬಲಿಗರೊಂದಿಗೆ ಜಗದ್ಗುರುಗಳನ್ನು ಭೇಟಿ ಮಾಡಿದರು.
ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಸೂರ್ಯನಾರಾಯಣ ರೆಡ್ಡಿ ಅವರಿಂದ ಶ್ರೀಗಳು ಮಾಹಿತಿ‌ ಪಡೆದು.  ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಬಗ್ಗೆ ಪ್ರಸ್ತಾಪಿಸಿ.  ಭರತ್ ರೆಡ್ಡಿ ಚುನಾವಣೆಯಲ್ಲಿ ಜಯಶೀಲರಾಗಲಿ ಎಂದು ಹಾರೈಸಿದರು.
ಈ ವೇಳೆ ಅಖಿಲ ಭಾರತ ವೀರಶೈವ ಮಹಾಸಭಾದ ಬಳ್ಳಾರಿ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್, ಮರಿಸ್ವಾಮಿಮಠದ ಮಹಾಲಿಂಗಯ್ಯ (ರಾಜಣ್ಣ), ಅಭಿನಂದನ್ ಮತ್ತಿತರರಿದ್ದರು.
ತದನಂತರ ಶ್ರೀಗಳು  ಆಂಧ್ರಪ್ರದೇಶದ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ದಂಡಿನ ಶಿವಾನಂದ ಅವರ ನಿವಾಸಕ್ಕೆ ಭೇಟಿ ನೀಡಿದರು. ವೀ.ವಿ.ಸಂಘದ ನೂತನ ಅಧ್ಯಕ್ಷ ರಾಮನಗೌಡ, ಕಾರ್ಯದರ್ಶಿ ಗುರುಸಿದ್ದಸ್ವಾಮಿ , ಜಂಟಿ ಕಾರಗಯದರ್ಶಿ ದರೂರು ಶಾಂತನಗೌಡ ಮೊದಲಾದವರು ಇದ್ದರು.