ಶ್ರೀಶೈಲ ಮಹಾಕ್ಷೇತ್ರದಲ್ಲಿ ಮಾ. 1 ರಿಂದ 11 ರವರೆಗೆ  ಮಹಾಶಿವರಾತ್ರಿ ಬ್ರಹ್ಮೋತ್ಸವ

ಸಂಜೆವಾಣಿ ವಾರ್ತೆ

ದಾವಣಗೆರೆ.ಫೆ.27: ಆಂದ್ರ ಪ್ರದೇಶದ ಶ್ರೀ ಶೈಲ ಮಹಾಕ್ಷೇತ್ರದಲ್ಲಿ ಮಾ.01 ರಿಂದ 11ರವರೆಗೆ ಮಹಾಶಿವರಾತ್ರಿ ಬ್ರಹ್ಮೋತ್ಸವಗಳು ನಡೆಯಲಿವೆ. ಈ ಉತ್ಸವಗಳ ನಿರ್ವಹಣೆಗಾಗಿ ವಿವಿಧ ವಿಸ್ತೃತವಾದ ಏರ್ಪಾಡುಗಳನ್ನು ಮಾಡಲಾಗುತ್ತದೆ ಎಂದು ಆಂದ್ರ ಪ್ರದೇಶ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಶ್ರೀಶೈಲಂ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಉಪ ಕಲೆಕ್ಟರ್ ಡಿ.ಪೆದ್ದಿರಾಜು ಪ್ರಕಟಣೆ ಮೂಲಕ ತಿಳಿಸಿದ್ದಾರೆ.ಬ್ರಹ್ಮೋತ್ಸವಗಳಲ್ಲಿ ಭಕ್ತರ ದಟ್ಟಣೆಯ ಕಾರಣದಿಂದ ಮಾರ್ಚ್ 1 ರಿಂದ 11  ರವರೆಗೆ  ಶ್ರೀ ಸ್ವಾಮಿಯ ಅಲಂಕಾರ ದರ್ಶನವನ್ನು ಮಾತ್ರ ಕಲ್ಪಿಸಲಾಗುತ್ತದೆ. ಭಕ್ತರಿಗಾಗಿ ಉಚಿತ ದರ್ಶನವಲ್ಲದೇ ಶೀಘ್ರ ದರ್ಶನ ಮತ್ತು ಅತೀ ಶೀಘ್ರ ದರ್ಶನಗಳಿಗೆ ಕೂಡ ಅವಕಾಶ ಕಲ್ಪಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.ಶೀಘ್ರ ದರ್ಶನಕ್ಕೆ 200 ರೂ. ಮತ್ತು ಅತೀ ಶೀಘ್ರ ದರ್ಶನಕ್ಕೆ 500 ರೂ.ಗಳ ಶುಲ್ಕವನ್ನು ಭಕ್ತಾಧಿಗಳು ಪಾವತಿ ಮಾಡಬೇಕು. ಇದಕ್ಕಾಗಿ ಈ ಟೆಕೇಟ್ ಗಳನ್ನು ಆನ್ ಲೈನ್ ವಿಧಾನದಲ್ಲಿ ದೇವಸ್ಥಾನದ ವೆಬ್ ಸೈಟ್  www.srishiladevasthanam.org ಮೂಲಕ ಮುಂಚಿತವಾಗಿ ಪಡೆಯುವ ವ್ಯವಸ್ಥೆ ಕಲ್ಲಿಸಲಾಗಿದೆ. ಅಲ್ಲದೆ ಭಕ್ತರು ಈ ಟಿಕೇಟ್ ಗಳನ್ನು ಕೂಡ ದೇವಸ್ಥಾನದ ಕರೆಂಟ್ ಬುಕಿಂಗ್ ಮೂಲಕ  ಕಾಲಕಾಲಕ್ಕೆ ತಕ್ಷಣವೇ ಹೊಂದುವ ಅವಕಾಶವನ್ನು ಕೂಡ ಮಾಡಲಾಗಿದೆ. ಬ್ರಹ್ಮೋತ್ಸವಗಳ ಪ್ರಾರಂಭದಲ್ಲಿ   ಮಾರ್ಚ್ 1 ರಿಂದ 5 ರವರೆಗೆ 5 ದಿನಗಳ ಕಾಲ ಜ್ಯೋತಿರ್ಮುಡಿ (ಇರುಮುಡಿ) ಇರುವ ಶಿವದೀಕ್ಷಾ ಭಕ್ತರಿಗೆ ಹಂತ ಹಂತಗಳಾಗಿ ನಿರ್ಧಿಷ್ಟ ಸಮಯಗಳಲ್ಲಿ ಮಾತ್ರವೇ ಸ್ವಾಮಿಯವರ ಉಚಿತ ಸ್ಪರ್ಶ ದರ್ಶನ ಕಲ್ಪಿಸಲಾಗುತ್ತದೆ.ಮಾರ್ಚ್ 5 ರ ರಾತ್ರಿ 7 ರಿಂದ ಮಾರ್ಚ್ 11 ರ ರಾತ್ರಿವರೆಗೆ ಭಕ್ತರೆಲ್ಲರಿಗೂ ಕೂಡ ಶ್ರೀ ಸ್ವಾಮಿಯ ಅಲಂಕಾರ ದರ್ಶನಕ್ಕೆ ಮಾತ್ರವೇ ಅವಕಾಶ ನೀಡಲಾಗಿದೆ.ಮಾರ್ಚ್ 1 ರಿಂದ 11 ರವರೆಗೆ ಎಲ್ಲಾ ಅರ್ಜಿತ (ಸಂಚಿತ) ಸೇವೆಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ.ಅದ್ದರಿಂದ ಭಕ್ತಾಧಿಗಳೆಲ್ಲರೂ ಕೂಡ ಈ ಮೇಲಿನಂತೆ ಕಲ್ಲಿಸಲಾಗಿರುವ ಶ್ರೀ ಸ್ವಾಮಿಯ ದರ್ಶನ ಏರ್ಪಾಡುಗಳನ್ನು ಗಮನಿಸುವಂತೆ ಶ್ರೀಶೈಲಂ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಉಪ ಕಲೆಕ್ಟರ್ ಡಿ.ಪೆದ್ದಿರಾಜು ಪ್ರಕಟಣೆ ಮೂಲಕ ತಿಳಿಸಿದ್ದಾರೆ.