ಶ್ರೀಶೈಲ ಪಾದಯಾತ್ರೆ ಹೊರಟ ಯುವಕ ಮೃತ್ಯು

(sಸಂಜೆವಾಣಿ ವಾರ್ತೆ)
ರಾಯಚೂರು, ಮಾ.೩೧-
ಶ್ರೀಶೈಲಕ್ಕೆ ಪಾದಯಾತ್ರೆ ಹೊರಟಿದ್ದ ಯುವಕ ವಿಶ್ರಾಂತಿ ವೇಳೆ ಕುಳಿತ ಸ್ಥಳದಲ್ಲಿ ಹೃದಯಘಾತದಿಂದ ಮೃತಪಟ್ಟಿರುವ ಘಟನೆ ಮಾನ್ವಿ ತಾಲೂಕಿನ ಚಿಕ್ಕಕೋಟ್ನೆಕಲ್ ಗ್ರಾಮದ ಬಳಿ ನಡೆದಿದೆ. ಮೃತ ಯುವಕ (೨೨) ಶ್ರೀಶೈಲ ಎಂದು ಗುರುತಿಸಲಾಗಿದೆ. ಬಾಗಲಕೋಟೆ ಮೂಲದ ಯುವಕ ಎಂದು ಮಾಹಿತಿ ಲಭ್ಯವಾಗಿದೆ. ತಮ್ಮ ಸ್ವ ಗ್ರಾಮದಿಂದ ಯುಗಾದಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಊರಿನ ಜನರೊಂದಿಗೆ ತೀವ್ರ ಬೀಸಲಿನ ಮದ್ಯೆ ಹೊರಟ ಪಾದಯಾತ್ರೆ ಮಾನ್ವಿ ತಾಲೂಕಿನ ಚಿಕ್ಕಕೋಟ್ನೆಕಲ್ ಗ್ರಾಮಕ್ಕೆ ಬಂದು ತಲುಪಿತ್ತು. ಈ ಹಿನ್ನಲೆ ಬಿಸಲಿನ ವೇಗಕ್ಕೆ ಸುಸ್ತಾದ ಯುವಕ ಗ್ರಾಮದ ಬಳಿ ವಿಶ್ರಾಂತಿ ಪಡೆಯಲು ಕುಳಿತ ಸ್ಥಳದಲ್ಲಿ ಹೃದಯಘಾತದಿಂದ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಮಾನ್ವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮಾನ್ವಿ ತಾಲೂಕು ಸರಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.