ಶ್ರೀಶೈಲ ಪಾದಯಾತ್ರಿಗಳಿಗೆ ಪ್ರಸಾದ ಸೇವೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ.9 :- ಹೊನ್ನಾಳಿ  ಹಿರೇಕಲ್ ಮಠದ ಶ್ರೀಗಳ ನೇತೃತ್ವದಲ್ಲಿ ಶ್ರೀಶೈಲಕ್ಕೆ ಪಾದಯಾತ್ರೆ ತೆರಳುತ್ತಿರುವ ಹೊನ್ನಾಳಿಯ ಭಕ್ತಾದಿಗಳು
ಕಳೆದ ರಾತ್ರಿ ಕೂಡ್ಲಿಗಿಯ  ವಾಲ್ಮೀಕಿ ಭವನದಲ್ಲಿ  ತಂಗಿದ್ದು ಪಟ್ಟಣದ ಕೂಡ್ಲಿಗಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಿಂದ ಪಾದಯಾತ್ರಿ ಭಕ್ತಾಧಿಗಳಿಗೆ  ಕಳೆದ  ರಾತ್ರಿ ಪ್ರಸಾದದ ವ್ಯವಸ್ಥೆಯನ್ನು ಕಲ್ಪಿಸಿದರು ಮಕ್ಕಳು ಸಹ ಈ ಕಾರ್ಯದಲ್ಲಿ ತೊಡಗಿದ್ದರು.