ಶ್ರೀಶೈಲ ಪಾದಯಾತ್ರಿಗಳಿಗೆ ಅನ್ನ ಸಂತರ್ಪಣೆ

ಗುಳೇದಗುಡ್ಡ, ಮಾ31: ಎಪ್ರಿಲ್ 13 ರಂದು ಆಂದ್ರಪ್ರದೇಶದ ಶ್ರೀಶೈಲದಲ್ಲಿ ನಡೆಯುವ ಮಲ್ಲಿಕಾರ್ಜುನ ದೇವರ ಜಾತ್ರಯಲ್ಲಿ ಭಾಗವಹಿಸಲು ನೂರಾರು ಪಾದಯಾತ್ರಿಗಳ ಭಕ್ತರು ಸಮೀಪದ ಶಿರೂರ-ಕಮತಗಿ ರಸ್ತೆ ಮಾರ್ಗದ ಮೂಲಕ ಸೋಮವಾರ ತೆರಳಿದರು. ಬೆಳಗಾಂವ ಜಿಲ್ಲೆಯ ರಾಯಬಾಗ, ಊಗಾರ, ಜಮಖಂಡಿ ತಾಲ್ಲೂಕಿನ ಮರೆಗುದ್ದಿ, ಹುಲ್ಯಾಳ, ಸಿದ್ದಾಪೂರ, ಹುನ್ನೂರ, ಕಡಪಟ್ಟಿ, ಮಳಲಿ, ಮುಧೋಳ ತಾಲ್ಲೂಕಿನ ಕಣ್ಣೂರ, ಶಿರೂಳ, ಮಹಾಲಿಂಗಪೂರ, ರಬಕವಿ-ಬನಹಟ್ಟಿ, ಕುಂಚನೂರ, ಗುಳೇದಗುಡ್ಡ ತಾಲ್ಲೂಕಿನ ಪರ್ವತಿ, ಖಾಜಿಬೂದಿಹಾಳ ಗ್ರಾಮದ ನೂರಾರು ಶ್ರೀಶೈಲ ಪಾದಯಾತ್ರಿಗಳ ಭಕ್ತರು ಮಲ್ಲಯ್ಯನ ಕಂಬಿಗಳನ್ನು ಹೊತ್ತುಕೊಂಡು ಮಲ್ಲಯ್ಯ ಮಲ್ಲಯ್ಯ ಎಂದು ಘೋಷಣೆ ಹಾಕುತ್ತ ತೆರಳಿದರು.
ಶಿರೂರ-ಕಮತಗಿ ಹಾಗೂ ಅಮೀನಗಡ ರಸ್ತೆ ಮಾರ್ಗದಲ್ಲಿ ಶ್ರೀಶೈಲ ಪಾದಯಾತ್ರಿಗಳ ಭಕ್ತರಿಗೆ ಗುಳೇದಗುಡ್ಡ-ಪರ್ವತಿ ಶ್ರೀಶೈಲ ಮಲ್ಲಿಕಾರ್ಜುನ ಗ್ರಾಮೀಣಾಭಿವೃದ್ಧಿ ಹಾಗೂ ಸಾಂಸ್ಕøತಿಕ ಸೇವಾ ಸಂಘ ಮತ್ತು ಶಿರೂರ, ಕಮತಗಿ ಜನರು ಕಬ್ಬಿನಕಣಿವೆಯ ಹತ್ತಿರ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿದ್ದರು. ಮಾರ್ಗದ ಮಧ್ಯದಲ್ಲಿ ಅನೇಕ ಯುವ ಸಂಘಟಿಕರು ಉಪಹಾರ, ಬೆಳಿಗ್ಗೆ ಉಪ್ಪಿಟ್ಟು, ಶಿರಾ, ಹೋಳಿಗೆ, ಅವಲಕ್ಕಿ ಮೊಸರು, ಚುರುಮರಿ, ಅಂಬಲಿ, ಅನ್ನಸಾಂಬರ ಜೊತೆಗೆ ಬಿಳಿಜೋಳದ ರೊಟ್ಟಿ ವ್ಯವಸ್ಥೆ ಮಾಡಲಾಗಿತ್ತು. ಕೆಲವರು ಪಾದಯಾತ್ರಿಗಳಿಗೆ ಉಚಿತ ಆರೋಗ್ಯ ಸೇವೆ, ಬಿಸಿ ನೀರಿನ ವ್ಯವಸ್ಥೆ, ಬಿಸ್ಕಿಟ್, ಚಹಾ, ಬಾಳೆಹಣ್ಣು, ನಿಂಬಿಹಣ್ಣು, ಪಾನಕಾ, ಮಜ್ಜಿಗಿ ವಿತರಿಸುತ್ತಿರುವ ದೃಶ್ಯಗಳು ಕಂಡು ಬಂದಿತು.
ಶಿವಪುತ್ರಪ್ಪ ಮ್ಯಾದಾರ, ಕಣ್ಣೂರಿನ ಹನಮಂತ ಭೀರಪ್ಪ ಗಾಡದ, ಬಸಪ್ಪ ಸೋಮಪ್ಪ ಮುಗಳಕೋಡ, ಸಂಗಪ್ಪ ಶಿರೂರ, ಸಂಗಯ್ಯ ಹಿರೇಮಠ, ಶ್ರೀಕಾಂತ ಸರಗಣಾಚಾರಿ, ಗುರುಬಸವ ಮುರಗೋಡ, ನೀಲಪ್ಪ ವಾಳದ, ಹಂಗರಗಿ, ಕಾಂತು ಭಾವಿಕಟ್ಟಿ ಇದ್ದರು.