ಶ್ರೀಶೈಲ ಜಗದ್ಗುರುಗಳ ಪೀಠಾರೋಹಣ ಮಹೋತ್ಸವ ಕುರಿತು ಸಭೆ

ತಾಳಿಕೋಟೆ:ಜು.25: ಶ್ರೀ ಮದ್ ಗೀರಿರಾಜ ಸೂರ್ಯ ಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರ ದ್ವಾದಶ ಪೀಠಾರೋಹಣ ಹಾಗೂ ಜನ್ಮ ಸುವರ್ಣ ಮಹೋತ್ಸವ ಅಂಗವಾಗಿ ಶ್ರೀಕ್ಷೇತ್ರ ಶ್ರೀಶೈಲದಲ್ಲಿ ಜರುಗುವ ರಾಷ್ಟ್ರೀಯ ಜನಜಾಗೃತಿ ಸಮಾರಂಭದ ಚಿಂತನೆ ಕುರಿತು ಸ್ಥಳೀಯ ಶ್ರೀ ಖಾಸ್ಗತೇಶ್ವರ ಮಠದಲ್ಲಿ ಹರಗುರು ಚರಮೂರ್ತಿಗಳೊಂದಿಗೆ ರವಿವಾರರಂದು ಸಭೆ ಜರುಗಿತು.

  ಇದೇ ದಿ. 27 ಬುಧವಾರರಂದು ಬೆಳಿಗ್ಗೆ 10 ಗಂಟೆಗೆ ಸ್ಥಳೀಯ ಶ್ರೀ ಸಂಗಮೇಶ್ವರ ಸಭಾ ಭವನದಲ್ಲಿ ಜರುಗಲಿರುವ ಈ ಸುವರ್ಣ ಮಹೋತ್ಸವ ಹಾಗೂ ದ್ವಾದಶ ಪೀಠಾರೋಹಣದ ಕುರಿತು ಈ ಪೂರ್ವಭಾವಿ ಸಭೆ ಜರುಗುವ ಕುರಿತು ಈ ಸಭೆಯಲ್ಲಿ ಚರ್ಚಿಸಲಾಯಿತು.
  ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿಯಾದ ವೇ.ಮುರುಘೇಶ ವಿರಕ್ತಮಠ ಅವರ ದಿವ್ಯ ಸಾನಿದ್ಯದಲ್ಲಿ ಜರುಗಿದ ಈ ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯರು ಮಾತನಾಡಿ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು ಪೀಠದ ಕರ್ಣದಾರತ್ವವನ್ನು ವಹಿಸಿಕೊಂಡು ಕಳೆದ ಫೇಬ್ರವರಿ 8-2022 ನೇ ಸಾಲಿಗೆ 12 ವರ್ಷಗಳು ಪೂರ್ಣಗೊಳ್ಳುತ್ತವೆ 1971ರಂದು ನವ್ಹೇಂಬರ ತಿಂಗಳಲ್ಲಿ ಜನಿಸಿದ ಜಗದ್ಗುರುಗಳಿಗೆ 50 ವರ್ಷ ಪೂರ್ಣಗೊಳ್ಳುತ್ತವೆ ಶ್ರೀಕ್ಷೇತ್ರ ಯಡಿಯೂರದಿಂದ 29-10-2022ರಿಂದ ಶ್ರೀ ಕ್ಷೇತ್ರ ಶ್ರೀಶೈಲದ ವರೆಗೆ ನವ್ಹೇಂಬರ್ 30-2022ರವರೆಗೆ ಲೋಕ ಕಲ್ಯಾಣಾರ್ಥವಾಗಿ ಜಗದ್ಗುರುಗಳು ಪಾದಯಾತ್ರೆ ಕೈಕೊಳ್ಳಲಿದ್ದಾರೆಂದು ಹೇಳಿದರು.

ಪಾದಯಾತ್ರೆ ಮಾರ್ಗದಲ್ಲಿ ಧರ್ಮ ಜಾಗೃತಿ, ಲಿಂಗದೀಕ್ಷೆ, ಆರೋಗ್ಯ ಅರಿವು ಅಭಿಯಾನದ ಜೊತೆಗೆ ಮಾರ್ಗದ ಎರಡೂ ಬದಿಗಳಲ್ಲಿ ರುಕ್ಷಗಳನ್ನು ನೆಡುವ ಕಾರ್ಯಕ್ರಮ ಈಗಾಗಲೇ ಪ್ರಾರಂಭಗೊಂಡಿದೆ ಎಂದು ಹೇಳಿದರು. ಡಿಸೇಂಬರ್ ಮೊದಲನೇ ವಾರದಲ್ಲಿ ಜಗದ್ಗುರು ಪಂಡಿರಾದ್ಯ ಲಿಂಗೋದ್ಬವ ಮೂರ್ತಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಜಗದ್ಗುರುಗಳವರ ಇಷ್ಟಲಿಂಗ ಮಹಾ ಪೂಜೆ, ತುಲಾ ಭಾರ, ರುದ್ರ ಹೋಮ, ಅನ್ನದಾನ ಕಾರ್ಯಕ್ರಮಗಳನ್ನು ಶ್ರೀಶೈಲ ಕ್ಷೇತ್ರದಲ್ಲಿ ಆಯೋಜಿಸಲಾಗಿದೆ ಎಂದರು.

ಇನ್ನೋರ್ವ ಉಪಸ್ಥಿತ ಹಿರೂರ ಅನ್ನದಾನೇಶ್ವರ ಮಠದ ಶ್ರೀ ಜಯಸಿದ್ದೇಶ್ವರ ಮಹಾಸ್ವಾಮಿಗಳು ಮಾತನಾಡಿ ಜನೇವರಿ 1-2023ರಿಂದ 15-1-2023ರವರೆಗೆ ಅಖೀಲ ಭಾರತ ವೀರಶೈವ ಮಹಾ ಸಭೆಯ ಅಧಿವೇಶನ, ರಾಷ್ಟ್ರೀಯ ವೇದಾಂತ ಸಮ್ಮೇಳನ, ರಾಷ್ಟ್ರೀಯ ವಚನ ಸಮ್ಮೇಳನ, ರಾಷ್ಟ್ರೀಯ ವೀರಶೈವಾಗಮ ಸಮಾವೇಶ ಮತ್ತು ತಲಗು, ಕನ್ನಡ, ಹಾಗೂ ಮರಾಠಿ ವೀರಶೈವ ಸಾಹಿತ್ಯ ಗೋಷ್ಠಿ ಅಲ್ಲದೇ ಉಚಿತ ಸಾಮೂಹಿಕ ವಿವಾಹ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಶ್ರೀಶೈಲ ಕ್ಷೇತ್ರದಲ್ಲಿ ಸಂಯೋಜಿಸಲಾಗಿದೆ ಎಂದರು. ಆಂದ್ರ ಪ್ರದೇಶದ ಸರ್ಕಾರ ಶ್ರೀಶೈಲ ಪೀಠಕ್ಕೆ ಈಗಾಗಲೇ ಮಂಜೂರು ಮಾಡಿ ಹಸ್ತಾಂತರಿಸಿರುವ 5 ಏಕರೆ ಭೂಮಿಯಲ್ಲಿ ಪ್ರತಿ ವರ್ಷ ಶ್ರೀಕ್ಷೇತ್ರ ಶ್ರೀಶೈಲದ ಯುಗಾದಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಎಲ್ಲ ಕಂಬಿಗಳ ಭಕ್ತರ ದರ್ಶನಕ್ಕಾಗಿ ಕಂಬಿ ಮಂಟಪ ನಿರ್ಮಾಣ ಹಾಗೂ ಲಕ್ಷಾಂತರ ಭಕ್ತರಿಗೆ ಸುವ್ಯವಸ್ಥಿತ ವಸತಿ ಸೌಕರ್ಯ ಕಲ್ಪಿಸಲು 500 ಕೊಟ್ಟಡಿಗಳ ಯಾತ್ರಿ ನಿವಾಸಿ, ಗುರುಕುಲ ಮಾದರಿಯ ವಸತಿ ಶಾಲೆಗಳನ್ನು ನಿರ್ಮಾಣ ಮಾಡುವ ಸಂಕಲ್ಪ ಶ್ರೀ ಜಗದ್ಗುರುಗಳವರದ್ದಾಗಿದೆ ಎಂದರು.

ಇನ್ನೋರ್ವ ಪಡೇಕನೂರ ಹಿರೇಮಠದ ಪೀಠಾಧಿಪತಿ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿ ಕಳೇದ 12 ವರ್ಷಗಳಿಂದ ಶ್ರೀಶೈಲ ಪೀಠಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡು 50 ವರ್ಷಗಳಿಂದ ಸಮಾಜದ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿರುವ ಪ್ರಸ್ತುತ ಜಗದ್ಗುರುಗಳವರ ಜನ್ಮ ಸುವರ್ಣ ಮಹೋತ್ಸವ ಹಾಗೂ ದ್ವಾದಶ ಪೀಠಾರೋಹಣವನ್ನು ವಿದ್ಯುಕ್ತವಾಗಿ ವಿದಾಯಕವಾಗಿ ಮತ್ತು ವೈವಿದ್ಯಮಯವಾಗಿ ನೇರವೇರಿಸಬೇಕೆಂಬ ಸದುದ್ದೇಶದಿಂದ ಪೂರ್ವಭಾವಿ ಸಭೆಯನ್ನು ಬುಧವಾರ ಇದೇ ದಿ. 27-2022 ಬೆಳಿಗ್ಗೆ 10 ಗಂಟೆಗೆ ಬ.ಬಾಗೇವಾಡಿ ರಸ್ತೆಯಲ್ಲಿರುವ ಸಂಗಮೇಶ್ವರ ಸಭಾಭವನದಲ್ಲಿ ಜರುಗಿಸಲು ನಿರ್ದರಿಸಿದ್ದು ಯಾವುದೇ ಜಾತಿ ಬೇದವಿಲ್ಲದೇ ಎಲ್ಲ ಸದ್ಬಕ್ತರು ಪಾಲ್ಗೊಂಡು ಶ್ರೀಶೈಲ ಜಗದ್ಗುರುಗಳ ಆಶಿರ್ವಾದ ಪಡೆಯಬೇಕೆಂದರು.

ಇನ್ನೋರ್ವ ಚಬನೂರ ಜ್ಯೋತಿಷ್ಯ ರತ್ನ ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು ಹಾಗೂ ಸ್ಥಳೀಯ ವೇ.ವಸಂತಬಟ್ ಜೋಶಿ ಅವರು ಉಪಸ್ಥಿತ ತಾಳಿಕೋಟೆ ಪಟ್ಟಣದ ಗಣ್ಯಮಾನ್ಯರಿಗೆ ಹಾಗೂ ಎಲ್ಲ ಭಕ್ತ ಸಮೂಹಕ್ಕೆ ದಿ.27 ರಂದು ಜರುಗಲಿರುವ ಶ್ರೀಶೈಲ ಜಗದ್ಗುರುಗಳ ಸಮ್ಮುಖದಲ್ಲಿಯ ಪೂರ್ವಭಾವಿ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಾಳಿಕೋಟೆಯ ಸಮಸ್ತ ಜನತೆ ಪಾಲ್ಗೊಂಡು ಉಪಸ್ಥಿತ ಎಲ್ಲ ಶ್ರೀಗಳಿಗೆ ಗೌರವ ಸಮರ್ಪಿಸಬೇಕೆಂದರು.

ಈ ಸಮಯದಲ್ಲಿ ರಾಮನಗೌಡ ಪಾಟೀಲ, ಎಸ್.ಎಂ.ಸಜ್ಜನ, ಸಾಹೇಬಗೌಡ ಪಾಟೀಲ, ಭೀಮನಗೌಡ ಪಾಟೀಲ, ಪ್ರಕಾಶ ಕಟ್ಟಿಮನಿ, ದಿನಕರ ಜೋಶಿ, ನಾಗಪ್ಪ ಚಿನಗುಡಿ, ಮಲಕಾಜಪ್ಪಗೌಡ ಪಾಟೀಲ, ಬಿ.ಎಸ್.ಗಬಸಾವಳಗಿ, ಪ್ರಭುಗೌಡ ಮದರಕಲ್ಲ, ರಮೇಶ ಸಾಲಂಕಿ, ಜೈಸಿಂಗ್ ಮೂಲಿಮನಿ, ಓಂಪ್ರಕಾಶ ಡೋಣೂರಮಠ, ಬಿ.ಎಸ್.ಇಸಾಂಪೂರ, ರಾಜು ಅಲ್ಲಾಪೂರ, ಎಸ್.ಎನ್.ಗುಡ್ಡಣ್ಣವರ, ಕೆ.ಸಿ.ಸಜ್ಜನ, ಎಂ.ಎಸ್.ಸರಶೆಟ್ಟಿ, ಕುಮಾರಸ್ವಾಮಿ ಹಿರೇಮಠ, ಮೊದಲಾದವರು ಉಪಸ್ಥಿತರಿದ್ದರು.