ಶ್ರೀಶೈಲ ಜಗದ್ಗುರುಗಳವರ ಆಶಿರ್ವಾದ ಪಡೆದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ

ದಾವಣಗೆರೆ.ಜೂ.೨೦-ಇತ್ತಿಚಿಗೆ ದಾವಣಗೆರೆ ನಗರಕ್ಕೆ ಆಗಮಿಸಿದ್ದ  ಶ್ರೀಶೈಲ ಮಹಾಪೀಠದ  ಡಾ.ಚನ್ನಸಿದ್ದರಾಮ ಪಂಡಿತರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳವರನ್ನು  ನೂತನ ಗಣಿ – ತೊಟಗಾರಿಕೆ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ಅವರು   ಭೇಟಿ ಮಾಡೀ ಆಶಿರ್ವಾದಪಡೆದರು.ಜಗದ್ಗುರುಗಳವರು ನೂತನ ಸಚಿವರಿಗೆ ತಮ್ಮ ಅಧಿಕಾರವದಿಯಲ್ಲಿ ರಾಜ್ಯದ ಮತ್ತು ದಾವಣಗೆರೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ಹೊಂದಲಿ ಎಂದು ಆಶಿರ್ವದಿಸಿದರು.ಈ ಸಂಧರ್ಭದಲ್ಲಿ ಯುವ ಮುಂಖಡರಾದ ಆರ್.ಟಿ ಪ್ರಶಾಂತ್ ದುಗ್ಗತ್ತಿಮಠ್,ವಕೀಲರಾದ ತ್ಯಾವಣಿಗಿ ಮಲ್ಲಿಕಾರ್ಜುನ ,ಮುಖಂಡರಾದ ಎನ್.ಎಂ.ತಿಪ್ಪೇಸ್ವಾಮಿ, ದೇವರಮನಿ ಯೋಗಿಶ್,ಗುರುರಾಜ್ ಅಥಣಿ ಮತ್ತು ಶ್ರೀಶೈಲ ಮಠದ ಬನ್ಯಯನವರು ಉಪಸ್ಥಿತರಿದ್ದರು.