ಶ್ರೀಶೈಲೇಶ್ವರ ವಿದ್ಯಾಕೇಂದ್ರದಲ್ಲಿ ತಾಯಂದಿರ ದಿನಾಚರಣೆ


ಸಂಜೆವಾಣಿ ವಾರ್ತೆ
ಸಂಡೂರು:ಮೇ:13:  ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎಂಬ ಉಕ್ತಿಯಂತೆ ಭಾರತದ ಸಂಸ್ಕೃತಿಯಲ್ಲಿ ತಾಯಂದಿರ ದಿನಕ್ಕೆ ವಿಶೇಷ ಗೌರವದ ಪ್ರಾಮುಖ್ಯತಯಿದೆ. ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು ಎಂಬಂತೆ ಎಲ್ಲ ಮಾತೆಯರು ತಮ್ಮ ಮಕ್ಕಳಿಗೆ ಎಳವೆಯಿಂದಲೇ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಕಲಿಸಬೇಕು ಎಂದು ಕಾರ್ಯದರ್ಶಿ ಚಿದಂಬರ ನಾನಾವಟೆ ಅಭಿಪ್ರಾಯಪಟ್ಟರು.
 ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಶೈಲೇಶ್ವರ ವಿದ್ಯಾ ಕೇಂದ್ರದ ಗೌರವಾಧ್ಯಕ್ಷೆ ಶ್ರೀಮತಿ ಲಕ್ಷ್ಮೀಬಾಯಿ ಬಾಯಿ ನಾನಾವಟೆ ಪ್ರಾಸ್ತಾವಿಕ ನುಡಿಗಳನಾಡುತ್ತ ರಾಷ್ಟ್ರ ನಿರ್ಮಾಣದಲ್ಲಿ ತಾಯಂದಿರ ಪಾತ್ರದ ಮಹತ್ವ ಕುರಿತು ಅತ್ಯಂತ ವಿಶದವಾಗಿ ಮಾತನಾಡಿದರು.
ಯಶೋಧೆಯು ಕೃಷ್ಣನನ್ನು, ಜೀಜಾಬಾಯಿಯು ಛತ್ರಪತಿ ಶಿವಾಜಿಯನ್ನು, ಕೌಶಲ್ಯಯು ರಾಮನನ್ನು ಬೆಳೆಸಿದಂತೆ ಎಲ್ಲ ತಾಯಂದಿರಿಗೆ ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನಗಳನ್ನು ನಿರ್ಮಾಣ ಮಾಡುವ ಶಕ್ತಿ ಇದೆ ಎಂದು ಆಡಳಿತಾಧಿಕಾರಿ ಕುಮಾರ್ ಎಸ್ ನಾನಾವಟೆ ನುಡಿದರು.
 ಸಭಾ ಕಾರ್ಯಕ್ರಮದ ನಂತರ ಮಾತೆಯರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು , ವಿಜೇತರಿಗೆ ಬಹುಮಾನವುಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಗುರು ಮಾತೆಯರಾದ ಶ್ರೀಮತಿ ಸುಜಾತ ಘೋರ್ಪಡೆ ,ಶ್ರೀಮತಿ ರುಕ್ಮಿಣಿ ಬಾಯಿ ಕದಂ, ಹಾಗೂ ಶ್ರೀಮತಿ ಮಾನಸ ಉಪಸ್ಥಿತರಿದ್ದರು.