
ಸಿರವಾರ.ಮಾ೧೩- ಯುಗಾದಿ ಅಂಗವಾಗಿ ಶ್ರೀಶೈಲಾ ಮಲ್ಲಿಕಾರ್ಜುನ ಭಕ್ತರು, ಶಿವಮಾಲೆದಾರಿಗಳು ಶ್ರೀಶೈಲಾಕ್ಕೆ ಪಾದಯಾತ್ರೆಯನ್ನು ಭಾನುವಾರ ಪ್ರಾರಂಭಿಸಿದರು.
ಕಳೆದ ೨೦ ದಿನಗಳಿಂದ ಶಿವಮಾಲೆಧಾರಣೆ ಮಾಡಿಕೊಂಡ ಭಕ್ತರು, ನಿತ್ಯ ಮಡಿಯಿಂದ ಪೂಜೆಯನ್ನು ಕೈಗೊಳುತ್ತಿದ್ದರು. ಯುಗಾದಿ ಹಬ್ಬಕ್ಕೆ ಶ್ರೀಶೈಲಾಕ್ಕೆ ತಲುಪಬೇಕಾಗಿರುವುದರಿಂದ ಭಾನುವಾರ ಬೆಳಗ್ಗೆ ಗುರುಸ್ವಾಮಿಗಳ ನೇತೃತ್ವದಲ್ಲಿ ಇರುಮುಡಿಯನ್ನು ಕಟ್ಟಿಕೊಂಡು, ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆಯನ್ನು ದೇವಸ್ಥಾನದಿಂದ ಡೋಳು, ಭಜಾಭಜಂತ್ರಿ, ಮುತೈದೆಯರು ಕಳಸೊಂದಿಗೆ ಪ್ರಾರಂಭಿಸಿ, ರಾಯಚೂರು-ಲಿಂಗಸುಗೂರು ಮುಖ್ಯರಸ್ತೆಯ ಮಾರ್ಗವಾಗಿ ಪಟ್ಟಣದ ಹೊರವಲಯದವರೆಗೂ ಸಾಗಿ ಬೀಳ್ಕೊಡಲಾಯಿತು.
ದಾರಿಯೂದಕ್ಕೂ ಭಕ್ತರು ಹಣ್ಣು, ಮಜ್ಜಿಗೆಯನ್ನು ನೀಡುತ್ತಿದ್ದರು. ಸುಮಾರ ೮೦ ಕ್ಕೂ ಅಧಿಕ ಶಿವಮಾಲೆಧಾರಿಗಳು, ಭಕ್ತ ಸಮೂಹ ಪಾದಯಾತ್ರೆ ಕೈಗೊಂಡರು.