
ಅಫಜಲಪುರ:ಆ.20: ತಾಲೂಕಿನ ಅತನೂರು-ಅಂಕಲಗಾ ಹಿರೇಮಠದ ಪೂಜ್ಯರಾದ ಶ್ರೀ ಅಭಿನವ ಗುರುಬಸವ ಶಿವಾಚಾರ್ಯರ ಜನ್ಮದಿನದ ಅಂಗವಾಗಿ ಶ್ರೀಶೈಲದ ಗುರುಕುಲಕ್ಕೆ ಅತನೂರು ಗ್ರಾಮದ ಭಕ್ತಾದಿಗಳು ಅನ್ನ ಸಂತರ್ಪಿಸಿ ಭಕ್ತಿ ತೋರಿದರು.
ಈ ವೇಳೆ ಗ್ರಾಮಸ್ಥರಾದ ರಾಜು ಶೆಟ್ಟಿ, ಚಂದ್ರಕಾಂತ ಆನೂರ, ಮಲ್ಲಿಕಾರ್ಜುನ ಎಸ್. ಖರ್ಗೆ, ಶಂಕರ ಶೆಟ್ಟಿ, ರಾಜು ಪವಾಡಿ ,ಶ್ರೀಶೈಲ ನಂದಿಕೋಲ, ಮಹಾಂತಪ್ಪ ನಾವಿ, ಮಲಕಣ್ಣಾ ಹೂಗಾರ, ಮಂಜುನಾಥ ಅಂಕಲಗಿ, ಶಿವಪ್ರಸಾದ ಹೂಗಾರ, ಗಜಾನಂದ ಹಿರೇಮಠ, ಮಡಿವಾಳಪ್ಪ ಎಸ್. ಹೂಗಾರ ಇತರರಿದ್ದರು.