ಶ್ರೀಶೈಲಂಗೆ ತೆರಳುವ ಪಾದ ಯಾತ್ರಾರ್ಥಿ ಭಕ್ತಾದಿಗಳಿಗೆ ಮನವಿ

ವಿಜಯಪುರ, ಮಾ.23-ಎಪ್ರೀಲ್ ಮಾಹೆಯಲ್ಲಿ ನಡೆಯುವ ಯುಗಾಧಿ ಉತ್ಸವಕ್ಕೆ ಕರ್ನಾಟಕದಿಂದ ಅಪಾರ ಪ್ರಮಾಣದ ಭಕ್ತಾದಿಗಳು ಶ್ರೀಶೈಲಂ ದೇವಸ್ಥಾನಕ್ಕೆ ತೆರಳುವ ಹಿನ್ನೆಲೆ ಯಲ್ಲಿ ಕೊರೊನಾ ಮುಂಜಾಗೃತ ಕ್ರಮಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಆಂಧ್ರಪ್ರದೇಶ ಮತ್ತು ಕರ್ನಾಟಕದ ಗಡಿಭಾಗದಲ್ಲಿ ಕರೊನಾ ಪ್ರಮಾಣ ಪತ್ರವನ್ನು ತೆಗೆದುಕೊಂಡು ಬರಬೇಕು ಎಂದು 1008 ಚನ್ನಸಿದ್ಧರಾಮ ಶಿವಾಚಾರ್ಯ ಪಂಡಿತಾರಾಧ್ಯ ಶ್ರೀಶೈಲ ಪೀಠ, ಶ್ರೀಶೈಲ ತೆರಳುವ ಪಾದ ಯಾತ್ರಾರ್ಥಿ ಭಕ್ತಾದಿಗಳಿಗೆ ಮಾಧ್ಯಮದ ಮೂಲಕ ಮನವಿ ಮಾಡಿದರು.
ಇಂದು ಬೆಳಿಗ್ಗೆ 10-30 ಗಂಟೆಗೆ ನಗರದ ಎ.ಪಿ.ಎಮ್.ಸಿ ಕಲ್ಯಾಣ ಮಂಟಪದಲ್ಲಿ ಶ್ರೀಶೈಲಂ ದೇವಸ್ಥಾನದ ರೂಪಕ ವಾಹನದ ಮೆರವಣಿಗೆಯ ಸಂದರ್ಭದಲ್ಲಿ ಮಾತನಾಡಿದ ಅವರು ಕಳೆದ ವರ್ಷ ಕರೋನಾ ಸಂದರ್ಭದಲ್ಲಿ ನಿಬರ್ಂಧಿಸಲಾದ ಸ್ಪರ್ಶ ದರ್ಶನವನ್ನು ಈ ವರ್ಷವೂ ಕೂಡ ದೇವಸ್ಥಾನದ ಸ್ಪರ್ಶ ದರ್ಶನವು ಮಾಡಲಿಕ್ಕೆ ಅವಕಾಶ ಇಲ್ಲ. ಹಾಗೂ ಪಾತಾಳ ಗಂಗೆಯಲ್ಲಿ ಸ್ನಾನ ಮಾಡಲು ಕೂಡ ಅವಕಾಶವಿಲ್ಲ ಎಂದು ಅವರು ತಿಳಿಸಿದರು.
ನಗರದ ಎ.ಪಿ.ಎಮ್.ಸಿ ಕಲ್ಯಾಣ ಮಂಟಪದಲ್ಲಿ ಶ್ರೀಶೈಲಂ ದೇವಸ್ಥಾನದ ರೂಪಕ ವಾಹನದ ಮೆರವಣಿಗೆಗೆ 1008 ಚನ್ನಸಿದ್ಧರಾಮ ಶಿವಾಚಾರ್ಯ ಪಂಡಿತಾರಾಧ್ಯ ಶ್ರೀಶೈಲ ಪೀಠ, ಹಾಗೂ ಆಂಧ್ರಪ್ರದೇಶ ಸರ್ಕಾರದ ವಿಶೇಷ ಡೆಪ್ಯೂಟಿ ಕಲೆಕ್ಟರ್ ಹಾಗೂ ಕಾರ್ಯನಿರ್ವಹಣಾಧಿಕಾರಿಗಳಾದ ಕೆ.ಎಸ್. ರಾಮ್ ರಾವ ಅವರು ರೂಪಕ ವಾಹನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ರವಿ ಬಿಜ್ಜರಗಿ, ನೀಲೇಶ್ ಶಹಾ, ನೀಲಕಂಠೇಶ್ವರ ಪಾದಯಾತ್ರೆಯ ಕಮಿಟಿ ಅಧ್ಯಕ್ಷರು ಸತೀಶ್ ಗಾಯಕ ವಾಡ್, ಉಪಾಧ್ಯಕ್ಷರು ಈರಣ್ಣ, ಹಾಗೂ ಕಮಿಟಿಯ ಪ್ರಮುಖರು ಭಕ್ತಾದಿಗಳು ಉಪಸ್ಥಿತರಿದ್ದರು.