ಶ್ರೀಶಿವಕುಮಾರಸ್ವಾಮಿಗವರ 4ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ


ಸಂಜೆವಾಣಿ ವಾರ್ತೆ
ಕುರುಗೋಡು.ಜ.22:  ಪಟ್ಟಣದ ಶ್ರೀರಾಘವಾಂಕಮಹಾಸ್ವಾಮಿಯವರ ಮಠದಲ್ಲಿ ಕರ್ನಾಟಕ ರತ್ನ, ನಡೆದಾಡುವ ದೇವರೆಂದೆ ಹೆಸರಾದ ಪರಮಪೂಜ್ಯ ಶ್ರೀ ಡಾ.ಶಿವಕುಮಾರಮಹಾಸ್ವಾಮಿಗಳವರ 4ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನು ಡಾ.ಶಿವಕುಮಾರಮಹಾಸ್ವಾಮಿಗಳ ಭಕ್ತರು ಹಾಗು  ಸಿದ್ದಗಂಗಾಮಠದ ಹಳೇವಿದ್ಯಾರ್ಥಿಗಳು ಸಮೂಹಿಕವಾಗಿ ಅವರ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ದಾ-ಭಕ್ತಿಯಿಂದ 4ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನು  ಸಡಗರ- ಸಂಬ್ರಮದಿಂದ ಆಚರಿಸಿದರು. ಪ್ರಾರಂಭದಲ್ಲಿ ಸಹಸ್ರಾರು ಸಂಖ್ಯೆಯ ಬಡವಿದ್ಯಾರ್ಥಿಗಳಿಗೆ ಅನ್ನ-ಅಕ್ಷರ-ದಾಸೋಹ ನೀಡಿದ ಮಹಾಚೇತನ  ಶ್ರೀ ಡಾ.ಶಿವಕುಮಾರಮಹಾಸ್ವಾಮಿಗಳವರಿಗೆ ಜಯವಾಗಲಿ, ಜಯವಾಗಲಿ ಎಂಬ ಜಯಘೋಷಣೆಗಳನ್ನು ಕೂಗುತ್ತಾ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಪೂಜೆ ಸಲ್ಲಿಸಿದರು.
ನಂತರ ಶ್ರೀ ಡಾ.ಶಿವಕುಮಾರಮಹಾಸ್ವಾಮಿಗಳವರ 4ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಕುರುಗೋಡಿನ ಶ್ರೀಶಿವಕುಮಾರಮಹಾಸ್ವಾಮಿಗಳ ಭಕ್ತರಿಂದ ಅನ್ನಸಂತರ್ಪಣೆಯನ್ನು ಮಾಡಲಾಗಿತ್ತು. ಅನ್ನಸಂತರ್ಪಣೆಯಲ್ಲಿ ಸುಮಾರು 3 ಸಾವಿರ ಮಂದಿ ಭಕ್ತರು ಪ್ರಸಾದಸ್ವೀಕರಿಸಿ, ಶ್ರೀ ಶಿವಕುಮಾರಮಹಾಸ್ವಾಮಿಗಳವರ ಕೃಪೆಗೆ ಪಾತ್ರರಾದರು.