ಶ್ರೀಶಿರಡಿ ಸಾಯಿಬಾಬಾ ದೇವತಾ ಸ್ವರೂಪಿಯಾಗಿದ್ದರು:ಜೋಶಿ

ತಾಳಿಕೋಟೆ:ಮಾ.31: ಭಜನೆ, ದ್ಯಾನ, ಜಪ, ತಪದೊಂದಿಗೆ ದೇವರ ನಾಮಸ್ಮರಣೆ ಮಾಡುವದೇ ಮಾನವ ಜನ್ಮಕ್ಕೆ ಅಗತ್ಯವಾಗಿದ್ದು ಇದರಿಂದ ಮೋಕ್ಷದ ಮಾರ್ಗವು ಅನುಸರಿಸಲು ಅನುಕೂಲವಾಗಲಿದೆ ಎಂದು ಶ್ರೀ ಶಿವಭವಾನಿ ಮಂದಿರದ ಅರ್ಚಕರಾದ ವೇ.ಸಂತೋಷಬಟ್ ಜೋಶಿ ಅವರು ನುಡಿದರು.

ಗುರುವಾರರಂದು ಸ್ಥಳೀಯ ಶ್ರೀ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ ವತಿಯಿಂದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾದ ಶ್ರೀ ಶಿರಡಿ ಸಾಯಿಬಾಬಾರವರ ಜಯಂತಿ ಉತ್ಸವ ಹಾಗೂ 19ನೇ ವಾರ್ಷಿಕೋತ್ಸವ ಸಮಾರಂಭದ ದಿವ್ಯ ಸಾನಿದ್ಯವಹಿಸಿ ಸಾಯಿಬಾಬಾರವರ ಕಥಾಮೃತವನ್ನು ಭಕ್ತಸಮೂಹಕ್ಕೆ ಉಣಬಡಿಸಿ ಮಾತನಾಡುತ್ತಿದ್ದ ಅವರು ಮನುಷ್ಯರಾದ ನಾವು ಗುರುಹಿರಿಯರ ಕಥೆಗಳನ್ನು ಕೇಳಬೇಕು ಇದರಿಂದ ಮೋಕ್ಷಕ್ಕೆ ದಾರಿ ಲಬಿಸುತ್ತದೆ ಎಂದರು. ಆಪತಪ ಮಾಡುವದರಿಂದ ಶ್ರೀ ಸಾಯಿಬಾಬಾರವರ ಕೃಪೆಯಾಗಲಿದೆ ಅದರ್ಮ ತಾಂಡವ ಆಡುತ್ತಿದ್ದಾಗ ಭಕ್ತರನ್ನು ರಕ್ಷೀಸಲು ಕಾಪಾಡಲು ಭಗವಂತ ಅವತರಿಸಿ ಬರುತ್ತಾನೆ ಈ ಹಿಂದೆ ಅವತರಿಸಿ ಬಂದಂತಹ ಶ್ರೀರಾಮ, ಕೃಷ್ಣ, ಶಂಕರಾಚಾರ್ಯರು, ವಿವೇಕಾನಂದರು, ಶಿವಾಜಿ ಮಹಾರಾಜರು ಕಾಲ ಕಾಲಕ್ಕೆ ಜನ್ಮತಾಳಿ ಇವರು ಧರ್ಮೋದ್ದಾರ ಮಾಡಿದವರಾಗಿದ್ದಾರೆ ಅಂತಹ ಮಹಾನ್ ಸಂತರಲ್ಲಿ ಶಿರಡಿ ಸಾಯಿಬಾಬಾರೊಬ್ಬರಾಗಿದ್ದಾರೆಂದರು. ಬಾಬಾ ಅವರಿಗೆ ತಂದೆ ತಾಯಿ ಎಂಬುದೇ ಗೊತ್ತಿಲ್ಲಾ ಹೆಸರು, ಜಾತಿ ಗೊತ್ತಿಲ್ಲಾ ದೇವತಾ ಸ್ವರೂಪಿಯಾಗಿದ್ದ ಸಾಯಿಬಾಬಾರವರು ಚಿಕ್ಕರಿರುವಾಗಲೇ ಅನೇಕ ಪವಾಡ ಲೀಲೆಗಳನ್ನು ಗೈದು ಭಕ್ತರಿಗೆ ಉದ್ದರಿಸುತ್ತಾ ಸಾಗಿಬಂದಿದ್ದಾರೆಂದರು. ಬಾಬಾರವರು ಗೀತಾ ರಾಮಾಯಣ ಗ್ರಂಥವನ್ನು ಪಠಣ ಮಾಡುತ್ತಿದ್ದರಲ್ಲದೇ ಸಬ್ ಕಾ ಮಾಲಿಕ್ ಏಕ ಹೈ ಎಂದು ಹೇಳಿ ಜಾತಿ ಬೇದವೆಂಬುದನ್ನು ಕಿತ್ತೊಗೆಯಲು ಪ್ರಯತ್ನಿಸಿದ್ದರೆಂದು ಹೇಳಿದ ಜೋಶಿ ಅವರು ಎಲ್ಲರು ಭಗವಂತನ ದೃಷ್ಠಿಯಲ್ಲಿ ಸಮಾನರು ಯಾವಾಗಲು ಶ್ರದ್ದೆ ನಂಬಿಕೆ ಎಂಬುದು ಇರಬೇಕು ಅಂತಹ ಭಕ್ತರನ್ನು ರಕ್ಷೀಸುತ್ತೇನೆಂದು ಸಾಯಿಬಾಬಾರವರು ಹೇಳಿದ್ದಾರೆ ಅಹಂಕಾರ, ಆಸೆ, ಅಮೀಷೆ, ವ್ಯಾಮೋಹ, ಕಾಮ ಕ್ರೋದ, ಮದ, ಮಸ್ತರಗಳನ್ನು ಬಿಟ್ಟು ದ್ಯಾನಿಸಿದ ಭಕ್ತರನ್ನು ಉದ್ದರಿಸುತ್ತಾ ಸಾಗಿದ್ದಾರೆಂದ ಅವರು ಶ್ರೀ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ ನೂತನವಾಗಿ ಸಾಯಿ ಮಂದಿರವನ್ನು ನಿರ್ಮಿಸಲು ಸಜ್ಜಾಗಿರುವ ಕುರಿತು ಭಕ್ತಸಮೂಹಕ್ಕೆ ವಿವರಿಸಿದರು.

ಇನ್ನೋರ್ವ ಸಾನಿದ್ಯ ವಹಿಸಿದ ವೇ.ವಸಂತಬಟ್ ಜೋಶಿ ಅವರು ಮಾತನಾಡಿ ಬ್ರಹ್ಮ, ವಿಷ್ಣು, ಮಹೇಶ್ವರ ಎಂಬವರ ವಿಷಯವನ್ನು ವಿವರಿಸಿ ಗುರು ಎಂದರೇನು, ಗುರುವಿನ ಶಕ್ತಿ ಕುರಿತು ತಿಳಿ ಹೇಳಿದರಲ್ಲದೇ ಭಕ್ತನಾದವನಲ್ಲಿ ಹೊಟ್ಟೆಕಿಚ್ಚು ಇರುವದಿಲ್ಲಾ ಸಿಟ್ಟು ಇರುವದಿಲ್ಲಾ ಒಳ್ಳೆಯ ವಿಚಾರ ಅವರಲ್ಲಿ ಇರುತ್ತದೆ ಅಂತಹ ಮಹತ್ವದ ವಿದ್ಯೆಯನ್ನು ಯಾರೂ ಕಸಿದುಕೊಳ್ಳಲು ಸಾದ್ಯವಿಲ್ಲವೆಂದು ಹೇಳಿದ ಅವರು ನಿಜ ಭಕ್ತರೊಂದಿಗೆ ಬಾಬಾರವರು ಸದಾ ಇರುತ್ತಾರೆ ತನುಮನದನದಿಂದ ನಾಮ ಸ್ಮರಣೆ ಮಾಡುವ ಭಕ್ತರನ್ನು ಕಾಪಾಡುತ್ತಾರೆಂದು ಗುರು ಶಿಷ್ಯರ ಸಂಬಂದ ಹೇಗಿರಬೇಕೆಂದು ಭಕ್ತರಿಗೆ ತಿಳಿ ಹೇಳಿದರು.

ಇನ್ನೋರ್ವ ಶ್ರೀ ಸಾಯಿ ಸೇವಾ ಟ್ರಸ್ಟ ಸದಸ್ಯರಾದ ಜಿ.ಟಿ.ಘೋರ್ಪಡೆ ಅವರು ಮಾತನಾಡಿ ಕಳೆದ 19ವರ್ಷಗಳಿಂದ ಸಣ್ಣ ಸ್ವರೂಪದಲ್ಲಿಯೇ ಪ್ರಾರಂಭಗೊಂಡ ಶ್ರೀ ಸಾಯಿ ಸೇವಾ ಸಮಿತಿಯು ಈಗ ಸೇವಾ ಟ್ರಸ್ಟ ಆಗಿ ಮಾರ್ಪಟ್ಟಿದೆ ಸದರಿ ಸಾಯಿ ಮಂದಿರ ನಿರ್ಮಾಣಕ್ಕಾಗಿ ಸಾಲಂಕಿ ಎಂಬವರು ತಮ್ಮ ಜಮೀನನ್ನು ಉಚಿತವಾಗಿ ನೀಡಿದ್ದಾರೆ ಅದೇ ಜಮೀನಿನಲ್ಲಿ ಸಾಯಿ ಮಂದಿರ ನಿರ್ಮಾಣಕ್ಕಾಗಿ ಸುಮಾರು 2.50 ಕೋಟಿ ರೂ. ಖರ್ಚು ವೆಚ್ಚ ತಗುಲಲಿದೆ ಈ ಕುರಿತು ನೀಲ ನಕ್ಷೆಯನ್ನೂ ಕೂಡಾ ತಯಾರಿಸಲಾಗಿದೆ ದಾನಿಗಳು ಮುಂದೆ ಬಂದು ಹೆಚ್ಚಿನ ದಾನ ನೀಡಿ ಅಲ್ಲಿ ನಡೆಯುತ್ತಿರುವಂತಹ ಕೋಣೆಯ ಕಟ್ಟಡ ಕಾರ್ಯಗಳಿಗೆ ತಕ್ಕಂತೆ ಖರ್ಚುವೆಚ್ಚ ನೀಡಿದರೆ ಅಂತವರ ಹೆಸರನ್ನು ಅದೇ ಕೊಣೆಯ ಮೇಲೆ ಕೆತ್ತನೆ ಮಾಡಲಾಗುವದೆಂದು ಹೇಳಿದ ಅವರು ಈಗಾಗಲೇ ಸುಮಾರು 5 ಲಕ್ಷ ರೂ. ವೆಚ್ಚದ ಸಭಾ ಭವನವನ್ನು ಸದರಿ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿದೆ ನೀಲ ನಕ್ಷೆಯ ಜಾಗೆಯ ಉದ್ದಳತೆ ಹಾಗೂ ಕಟ್ಟಡದ ಕಾರ್ಯ ಯಾವ ರೀತಿ ನಡೆಯುತ್ತದೆ ಎಂಬುದರ ಕುರಿತು ಪ್ರಕಟನೆ ಮೂಲಕ ತಿಳಿಸಲಾಗುವದೆಂದರು.

ಕಾರ್ಯಕ್ರಮದ ಮೊದಲಿಗೆ ಶ್ರೀ ನಿಮಿಷಾಂಬಾದೇವಿ ಮಂದಿರದಿಂದ ಪ್ರಾರಂಭಗೊಂಡ ಶ್ರೀ ಸಾಯಿಬಾಬಾರವರ ಫಲ್ಲಕ್ಕಿ ಉತ್ಸವ ಶ್ರೀ ವಾಸವಿ ಕಲ್ಯಾಣ ಮಂಟಪಕ್ಕೆ ಆಗಮಿಸಿ ಅಲ್ಲಿ ಶ್ರೀ ಸಾಯಿಬಾಬಾರವರ ಭಾವಚಿತ್ರಕ್ಕೆ ಮಹಾ ಪೂಜೆ ಗೈದು ನಂತರ ಸುಮಂಗಲೆಯರಿಂದ ಬಾಬಾರವರ ತೋಟ್ಟಿಲು ಸೇವೆ ಜರುಗಿತಲ್ಲದೇ ಸೂರಜ ಶೆಟ್ಟಿ ದಂಪತಿಗಳು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸಾಯಿ ಭಕ್ತರಾದ ಸಂಗೀತ ಶಿಕ್ಷಕಿ ವಿಜಯಾದೇವಿ, ಶ್ರೀಮತಿ ಪ್ರೇಮಾ ಶೆಟ್ಟಿ, ಶ್ರೀ ಖಾಸ್ಗತೇಶ್ವರ ಸಂಗೀತ ಶಾಲೆಯ ಲಕ್ಷ್ಮಣಸಿಂಗ್ ವಿಜಾಪೂರ, ಶ್ರೀಮತಿ ಪ್ರೀಯಾ ವಿಶಾಲ ಗಡ್ಡಾಳೆ ಅವರು ಭಕ್ತಿಯ ಸಂಗೀತ ಸೇವೆ ಸಲ್ಲಿಸಿದರು.

ನಂತರ ಸಮಸ್ತ ಭಕ್ತಾಧಿಗಳಿಗೆ ಮಹಾ ಪ್ರಸಾದ ಜರುಗಿತು.

ಈ ಕಾರ್ಯಕ್ರಮದಲ್ಲಿ ಶ್ರೀ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ ಗೌರವಾಧ್ಯಕ್ಷರಾದ ಡಾ.ಎನ್.ಎಲ್.ಶೆಟ್ಟಿ, ಅಧ್ಯಕ್ಷರಾದ ಬಸನಗೌಡ ಮದರಕಲ್ಲ, ಉಪಾಧ್ಯಕ್ಷ ಎಂ.ಜಿ.ಪಾಟೀಲ, ಕಾರ್ಯದರ್ಶಿ ಸಿ.ಬಿ.ತಿಳಗೂಳ, ಜಿ.ಜಿ.ಕಾದಳ್ಳಿ, ಎಸ್.ಎಸ್.ಸಾಲಂಕಿ, ಡಿ.ಆರ್.ಲೋಕರೆ, ಎಸ್.ಎಸ್.ದಫೆದಾರ, ಕೆ.ಸಿ.ಸಜ್ಜನ, ಕೆ.ಆರ್.ಪಾಟೀಲ, ಶಿವಲಿಂಗ ಸಾಲಂಕಿ, ಹಾಗೂ ಆನಂದ ಕುಲಕರ್ಣಿ, ಡಾ.ಶ್ರೀಶೈಲ ಹುಕ್ಕೇರಿ, ಡಾ.ಗಂಗಾಂಬಿಕಾ ಪಾಟೀಲ, ಜಿ.ಜಿ.ಗಾರಂಪಳ್ಳಿ, ಸಂಗಮನಾಥ ಶೆಟ್ಟಿ, ಮುರುಳಿಧರ ಮಾನ್ವಿ, ದತ್ತಾತ್ರೇಯ ಹೆಬಸೂರ, ವಾಸು ಹೆಬಸೂರ, ಶ್ರೀಕಾಂತ ಶೆಟ್ಟಿ, ಪ್ರಲ್ಹಾದ ಮಾನ್ವಿ, ಕೃಷ್ಣಯ್ಯಾ ಮಾನ್ವಿ, ಹಾಗೂ ಸಮಸ್ತ ಸಾಯಿ ಭಕ್ತಸಮೂಹದವರು ಪಾಲ್ಗೊಂಡಿದ್ದರು.