ಶ್ರೀಶಂಕರ ತತ್ವ ಪ್ರಸಾರ ಅಭಿಯಾನದ ಉದ್ಘಾಟನೆ

ಬಾದಾಮಿ,ಏ19: ತಾಲೂಕಿನ ಶಕ್ತಿ ಪೀಠಗಳಲ್ಲಿ ಒಂದಾದ ಸುಕ್ಷೇತ್ರ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ರವಿವಾರ ಶ್ರೀ ದಕ್ಷಿನಾಮನಾಯ ಶೃಂಗೇರಿಯ ಶ್ರೀಶೃಂಗೇರಿ ಶಾರದಾ ಪೀಠ, ಶ್ರೀ ಶಂಕರ ತತ್ವ ಜಪ ಪಠಣ ಉದ್ಘಾಟನೆ ಕಾರ್ಯಕ್ರಮ ನೆರವೇರಿತು.
ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ, ಶ್ರೀ ವಿದುμÉೀಖರ ಭಾರತಿ ಮಹಾಸ್ವಾಮಿಗಳವರ ಭಾವಚಿತ್ರಕ್ಕೆ ಪೂಜಾವಿಧಿ ವಿಧಾನಗಳನ್ನು ಅರ್ಚಕ ರಾಮ್ ಭಟ್ ಜೋಶಿ ನೆರವೇರಿಸಿ ನಮಃ ಶಂಕರಾಯ ಜಪಯಜ್ಞದ ಬಗ್ಗೆ ವಿವರವಾದ ಮಾಹಿತಿ ನೀಡಿ ಎಲ್ಲರೂ ಮನೆಮನೆಗಳಲ್ಲಿ ನಮಃ ಶಂಕರಾಯ ಜಪ ಪ್ರಾರಂಭ ಮಾಡಲು ಈ ಕಾರ್ಯಕ್ರಮದ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಕರಪತ್ರಗಳನ್ನು ಎಲ್ಲರಿಗೂ ವಿತರಿಸಿ ನಮಃ ಶಂಕರಾಯ ಜಪದ ಮಂತ್ರಗಳನ್ನು ಪಠಣ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಉದ್ಘಾಟಕರಾಗಿ ರಮೇಶ ಭಟ್ ಪೂಜಾರ ಆಗಮಿಸಿದ್ದರು. ಈ ಸಂದರ್ಭದಲ್ಲಿ ವಸಂತ ಭಟ್ ಪೂಜಾರ, ವಿದ್ಯಾಧರ ಪೂಜಾರ, ಆನಂದ್ ಭಟ್ ಜೋಶಿ, ಪೂರ್ಣಿಮಾ ದೀಕ್ಷಿತ, ಮುತ್ತಲಗೇರಿ ಗ್ರಾಮದ ಶಾರದಾ ಶಂಕರ ಭಜನಾ ಮಂಡಳಿಯ ಸದಸ್ಯರು, ರಾಮಭಟ್ ಜೋಶಿ, ಶಶಿಕಾಂತ ಕುಲಕರ್ಣಿ, ವಿಕ್ರಂ ಪೂಜಾರ, ಉದಯರಘುವಿರಮಠ, ದೇಶಪಾಂಡೆ, ಜೋಶಿ, ಕುಲಕರ್ಣಿ, ದೀಕ್ಷಿತ್ ಬಂಧುಗಳು ಹಾಗೂ ಸಕಲ ಸದ್ಭಕ್ತರು ಉಪಸ್ಥಿತರಿದ್ದರು.