ಶ್ರೀವೀರಾಂಜನೇಯ್ಯಸ್ವಾಮಿ ದೇವಸ್ಥಾನ : ನವಗ್ರಹ ಪ್ರತಿಷ್ಠಾಪನೆ

ರಾಯಚೂರು,ಏ.೦೫-
ನಗರದ ಗದ್ವಾಲ್ ರಸ್ತೆಯಲ್ಲಿರುವ ಮಡ್ಡಿಪೇಟೆಯಲ್ಲಿರುವ ಪ್ರಥಮ ವರ್ಷದ ಶ್ರೀವೀರಾಂಜನೇಯ ಸ್ವಾಮಿಯ ಮಹಾ ರಥೋತ್ಸವ, ನವಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮ ಇಂದು ಅದ್ದೂರಿಯಿಂದ ಜರುಗಿತು ಟ್ರಸ್ಟ್ ಅಧ್ಯಕ್ಷರಾದ ಯು.ಲಿಂಗಾರೆಡ್ಡಿ ಅವರು ಪೂಜಾ ಕಾರ್ಯಕ್ರಮವನ್ನು ನೆರೆವೇರಿಸಿದರು.
ಇಂದು ನಡೆದ ನವಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಎ. ಪಾಪರೆಡ್ಡಿ, ಮುನ್ನೂರು ಕಾಪು ಸಮಾಜದ ಬೆಲಂ ನರಸರೆಡ್ಡಿ,ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್, ಮಾಜಿ ಶಾಸಕರಾದ ತಿಪ್ಪರಾಜ್ ಹವಾಲ್ದಾರ್,ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಎರಡು ದಿನದ ಕಾರ್ಯಕ್ರಮಕ್ಕೆ ಹಲವಾರು ಭಕ್ತರು ಆಗಮಿಸುವರು ಅವರಿಗೆ ಪ್ರಸಾದದ ವ್ಯವಸ್ಥೆ, ಎಲ್ಲವನ್ನು ಅಚ್ಚುಕಟ್ಟಾಗಿ,ಶ್ರಮ ಪಡುತ್ತಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಸಮಿತಿ ಸೇವಾ ಟ್ರಸ್ಟ್ ಅಧ್ಯಕ್ಷರಾದ, ಯು. ಲಿಂಗಾರೆಡ್ಡಿ, ಪ್ರಧಾನ ಕಾರ್ಯದರ್ಶಿಗಳಾದ ಬಿ. ಶೇಖರ್ ರೆಡ್ಡಿ, ಖಜಾಂಚಿಯಾದ ಪುಂಡ್ಲ ರಾಜೇಂದ್ರ ರೆಡ್ಡಿ, ಜಂಟಿ ಕಾರ್ಯದರ್ಶಿಯಾದ ಬಿ. ಗೋಪಾಲರೆಡ್ಡಿ, ಸಹಕಾರ್ಯದರ್ಶಿ ಪಾಳ್ಯಾಮ್ ಮಲ್ಲೇಶ, ಯು. ಗೋವಿಂದ ರೆಡ್ಡಿ ಫಕೀರಪ್ಪಗಾರು ವೀರಪ್ಪ, ಉಪಾಧ್ಯಕ್ಷರಾದ, ಕೊಜ್ಜ ರಾಜೇಂದ್ರ ರೆಡ್ಡಿ,ಟಿ.ಶ್ರೀನಿವಾಸ್ ರೆಡ್ಡಿ,ಪಾಳ್ಯ೦ ನರಸಾರೆಡ್ಡಿ,ಜಿ ಎಸ್ ನರಸರೆಡ್ಡಿ, ದಾಸರುಯ್ಯಗಾರು ಗೋಪಾಲರೆಡ್ಡಿ, ಕೊಂದೋಡ್ಡಿ ವೆಂಕಪ್ಪ ಶ್ರೀಪಾಳ್ಯ೦ ಲಕ್ಷ್ಮಿ ರೆಡ್ಡಿ, ಬಾಯಕಾಡ ಆಂಜನೇಯ, ಸದಸ್ಯರುಗಳಾದ ಬಾಯಿಕಾಡ ಸಣ್ಣ ನರಸರೆಡ್ಡಿ (ಬುಡ್ಡಣ)ಉಪ್ಪೆಟ್ ಸಾಯಿರೆಡ್ಡಿ, ಗುಡಿಸಿ ಮುನೆಪ್ಪ, ದ್ಯಾಪಲ್ಲಿ ಹನುಮಂತರೆಡ್ಡಿ, ಗಂಗನ್ನಗಾರು ದೊಡ್ಡ ನರಸರೆಡ್ಡಿ, ಕುಂಪಟಿ ಅಂಜಿನಯ್ಯ, ಭೀಮ್ ಪುರಂ ಬಸವರಾಜ್, ಕೆ, ತಿಪ್ಪಣ್ಣ, ಮಲ್ಲೇಶ್ ನಾಯಕ, ಶಿವಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಮುನ್ನೂರು ಕಾಪು ಸಮಾಜದ ಸರ್ವ ಮುಖಂಡರು, ಸಮಾಜದ ಮುಖಂಡರು ಎಲ್ಲಾ ಭಕ್ತರು ಉಪಸ್ಥಿತರಿದ್ದರು.
ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನ ಸಮಿತಿ ಸೇವಾ ಟ್ರಸ್ಟ್ ವತಿಯಿಂದ ಎಲ್ಲಾ ಭಕ್ತರ ಸಹಕಾರದಿಂದ ಎರಡು ದಿನಗಳ ಕಾಲ ಅದ್ದೂರಿಯಾಗಿ ಮಹಾ ರಥೋತ್ಸವ, ನವಗ್ರಹ ಪ್ರತಿಷ್ಟಾಪನೆ, ರಥಕ್ಕೆ ಪ್ರಾಣ ಪ್ರತಿಷ್ಟಾಪನಾ ಕಾರ್ಯಕ್ರಮ, ನಾಳೆ ಸಂಜೆ ೬ ಗಂಟೆಗೆ ಮಹಾರಥೋತ್ಸವ ಹಾಗೂ ಮಹಾ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ ಎಂದು ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದರು.