ಶ್ರೀವೀರಭದ್ರೇಶ್ವರ ಜೋತಿಷ್ಯಾಲಯದಿಂದ ಜ್ಯೋತಿಷ್ಯ ಕಾರ್ಯಾiಗಾರ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಸೆ.17: ಜ್ಯೋತಿಷ್ಯ ಕೇವಲ ಔಪಚಾರಿಕ ಹೇಳಿಕೆಯಾಗದೆ ಪ್ರತಿಯೊಬ್ಬರು ಜನಿಸಿದ ಸಮಯವನ್ನು ಬಳಸಿಕೊಂಡು ಕ್ರಮ ಬದ್ದತೆಯ ಮೂಲಕ ಮತ್ತು ಜ್ಯೋತಿಷ್ಯದಲ್ಲಿಯೇ ಪದವಿಯನ್ನು ಪಡೆಯುವ ಮೂಲಕ ಉತ್ತಮ ಜೀವನದ ಹಾದಿಯನ್ನು ತೋರಿಸಲು ಜ್ಯೋತಿಷ್ಯಾಲಯಗಳು ಸಹಕಾರಿಯಾಗಿವೆ ಎಂದು ಎಮ್ಮಿಗನೂರು ಹಂಪಿ ಸಾವಿರ ದೇವರ ಮಠದ ಪೀಠಾಧ್ಯಕ್ಷ ವಾಮದೇವಶಿವಾಚಾರ್ಯ ಶ್ರೀಗಳು ತಿಳಿಸಿದರು.
ನಗರದ ಸಕಲ ದೇವತಾ ಅಯ್ಯಪ್ಪಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಶ್ರೀವೀರಭದ್ರೇಶ್ವರ ಜ್ಯೋತಿಷ್ಯಾಲಯ ಹಮ್ಮಿಕೊಂಡಿದ್ದ ಮೊದಲ ಜ್ಯೋತಿಷ್ಯ ಕಾರ್ಯಗಾರ ಹಾಗೂ ಖ್ಯಾತ ಜ್ಯೋತಿಷಿ ಡಾ.ಚಂದ್ರಶೇಖರ್ ಬಣಗಾರ್ ರಚಿಸಿದ ಭಾವ ಅನುಸಂಧಾನ ಪದ್ದತಿ ಜ್ಯೋತಿಷ್ಯ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಈ ಹಿಂದೆ ಸಾಧಕರು ಹೇಳುವ ಜ್ಯೋತಿಷ್ಯದಲ್ಲಿ ಇದ್ದ ಶಕ್ತಿಯನ್ನು ಕೆಲವರು ಮೌಡ್ಯವನ್ನಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಜ್ಯೋತಿಷ್ಯ ಎಂದರೆ ಸುಳ್ಳು ಎನ್ನುವ ಭಾವನೆ ಮೂಡಸಲಾಗಿತು. ಆದರೆ ಇದೀಗಾ ಮೈಸೂರಿನಲ್ಲಿರುವ ಸಂಸ್ಕೃತಿಕ ಮತ್ತು ಜ್ಯೋತಿಷ್ಯ ವಿಶ್ವವಿದ್ಯಾಲಯದಲ್ಲಿ ಹಂತ ಹಂತವಾಗಿ ಪಠ್ಯಗಳ ಭೋದನೆಯ ಮೂಲಕ ಸಂಖ್ಯಾ ಶಾಸ್ತ್ರ ಮತ್ತು ಗ್ರಹಗತಿಗಳ ಲೆಕ್ಕಚಾರದಲ್ಲಿ ವೈಜ್ಞಾನಿಕವಾಗಿ ಪ್ರಸಕ್ತ ಪರಿಸ್ಥಿತಿಯನ್ನು ನಂಬಿ ಬರುವ ಜನರಿಗೆ ತಿಳಿಸುವ ಮೂಲಕ ಅವರಲ್ಲಿನ ನಕಾರತ್ಮಕ ಚಿಂತನೆಗಳನ್ನು ದೂರ ಮಾಡಿ ಸಕರಾತ್ಮಕತೆಯ ಚಿಂತನೆಗಳ ಮೂಲಕ ಉತ್ತಮ ಜೀವನದ ಹಾದಿಯನ್ನು ತಿಳಿಯಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಡಾ.ಚಂದ್ರಶೇಖರ್ ಬಣಗಾರ್, ಖಾಸಗಿ ವಾಹಿನಿಯ ಖ್ಯಾತ ಜ್ಯೋತಿಷಿ ರೇಣುಕಾರಾದ್ಯ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಿಮಾಂದ್ರದ ಕರ್ನೂಲಿನ ವಿಎಸ್‍ಎನ್ ಮೂರ್ತಿ, ಬೆಂಗಳೂರಿನ ಬ್ರಹ್ಮವೇದ್ ಗುರುಕುಲದ ಎ.ಪ್ರದೀಪ್, ಸಿರುಗುಪ್ಪದ ಪಂಚಾಚಾರ್ಯ ಜ್ಯೋತಿಷ್ಯ ಪಾಠ ಶಾಲೆ ಪ್ರಾಚಾರ್ಯ ಚಂದ್ರಮೌಳಿಶಾಸ್ತ್ರಿ ಸೇರಿದಂತೆ ಸ್ಥಳೀಯ ಜ್ಯೋತಿಷ್ಯಾಲಯದ ತರಭೇತಿದಾರರು ಸೇರಿದಂತೆ ಇತರರು ಇದ್ದರು.