ಶ್ರೀವೀರಭದ್ರೇಶ್ವರ ಕೋ ಆಪರೇಟಿವ್ ಬ್ಯಾಂಕಿನ ಸೇವೆ ಶ್ಲಾಘನೀಯ: ಸಚಿವ ಡಾ.ಶರಣಪ್ರಕಾಶ ಪಾಟೀಲ

ಚಿಂಚೋಳಿ,ಆ.31- ಗ್ರಾಮೀಣ ಪ್ರದೇಶದ ಶ್ರೀ ವೀರಭದ್ರೇಶ್ವರ ಕೋ ಆಪರೇಟಿವ್ ಬ್ಯಾಂಕ್ ನ ಎಲ್ಲ ನಿರ್ದೇಶಕರು ಒಳ್ಳೆಯ ರೀತಿಯಿಂದ ನಡೆದುಕೊಂಡು ಬರುವದರಿಂದ ಬ್ಯಾಂಕನಲ್ಲಿ ಉತ್ತಮ ವಾತಾವರಣವನ್ನು ಸೃಷ್ಟಿಸಿ ಇಷ್ಟು ವರ್ಷಗಳ ಕಾಲ ನಿರಂತರ ಸೇವೆ ನೀಡುತ್ತಿರುವುದು ಸಂತಸ ವಿಶೇಯ ಎಂದು ಸಚಿವ ಡಾ ಶರಣಪ್ರಕಾಶ ಪಾಟೀಲ ಹೇಳಿದರು.
ಪಟ್ಟಣದ ಶ್ರೀ ವೀರಭದ್ರೇಶ್ವರ ಕೋ ಆಪರೇಟಿವ್ ಬ್ಯಾಂಕ್ 25 ನೇ ಬೆಳ್ಳಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶ್ರೀ ವೀರಭದ್ರೇಶ್ವರ ಬ್ಯಾಂಕ್ ಇನ್ನೊಷ್ಟು ಬೆಳೆಯಲಿ ಎಂದು ಶುಭಹೈರೆಸಿದರು.
ಕಾಂಗ್ರೆಸ್ ಸರಕಾರ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ನಡದಿದೆ ಈಗಾಗಲೇ ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ನಾಲ್ಕು ಗ್ಯಾರೆಂಟಿಗಳು ಜಾರಿಯಲ್ಲಿ ತಂದಿದ್ದಾರೆ, ಡಿಸೆಂಬರನಲ್ಲಿ ಯುವ ನಿಧಿ ಆರಂಭ ಮಾಡುತ್ತೇವೆ, ಚಿಂಚೋಳಿ ಮತ್ತು ಸೇಡಂ ತಾಲೂಕು ಅಭೀವೃದ್ಧಿಗೆ ನಾನು ಬಂಧ ಎಂದು ಹೇಳಿದರು.
ವೀರಭದ್ರೇಶ್ವರ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಮಾಲಿ ಮಾತನಾಡಿ 1997 ರಲ್ಲಿ ದಿ. ಮಾಜಿ ಮುಖ್ಯಮಂತ್ರಿ ವಿರೇಂದ್ರ ಪಾಟೀಲ ಅವರ ಮಾರ್ಗ ದರ್ಶನ್ಲಲಿ ಆರಂಭವಾದ ಈ ಬ್ಯಾಂಕಗೆ 25 ವರ್ಷ ಪೂರ್ತಿಗೊಂಡಿವೆ, ಬ್ಯಾಂಕನಲ್ಲಿ ಮೊದಲ ಖಾತೆ ಹಾರಕೂಡ ಚನ್ನವೀರ ಶಿವಾಚಾರ್ಯರದೆ ಇದೆ, ರಿಸರ್ವೆ ಬ್ಯಾಂಕ್ ನಮ್ಮ ಬ್ಯಾಂಕ್ ಗೆ ಲೈಸೆನ್ಸ ನೀಡಿ ನಂತರ ಯಾವುದೆ ಕೋ ಆಪರೇಟಿವ್ ಬ್ಯಾಂಕ್ ಲೈಸೆನ್ಸ್ ನೀಡುವುದು ಬಂದ್ ಮಾಡಿದೆ, ಉತ್ತಮ ತಂಡವು ಈ ಬ್ಯಾಂಕಯನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದು ಜನ ಸಾಮಾನ್ಯರ ಬ್ಯಾಂಕ್ ಆಗಿದೆ. ಮಧ್ಯಮ ವರ್ಗದ ಜನರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಜನರ ಮನಸ್ಸಿನಲ್ಲಿ ಮನೆ ಮಾಡಿದೆ ಎಂದರು.
ಈ ಸಂದರ್ಭದಲ್ಲಿ ಹಾರಕೂಡ ಚೆನ್ನವೀರ ಶಿವಾಚಾರ್ಯರು ಸಾನಿಧ್ಯವಹಿಸಿದರು, ಮಾಜಿ ಶಾಸಕ ಕೈಲಾಸನಾಥ ಪಾಟೀಲ, ಸುಭಾಸ ರಾಠೋಡ, ಬಾಬುರಾವ ಪಾಟೀಲ, ಸೈಯದ್ ಮಹಮೂದ್ ಪಟೇಲ್, ಭೀಮರಾವ ತೇಗಲತಿಪ್ಪಿ, ಬಸವರಾಜ ಮಾಲಿ, ಮಸ್ತಾನ್ ಅಲಿ ಪಟ್ಟೆದ್ದಾರೆ, ಬಸಯ್ಯ ಗುತ್ತೇದಾರ, ವೀರಭದ್ರೇಶ್ವರ ಕೋ ಆಪರೇಟಿವ್ ಬ್ಯಾಂಕಿನ ಉಪಾಧ್ಯಕ್ಷರಾದ ಸುಭಾಶ ಸೀಳಿನ್, ವೀರಭದ್ರೇಶ್ವರ ಕೋ ಆಪರೇಟಿವ್ ಬ್ಯಾಂಕಿನ ನಿರ್ದೇಶಕರಾದ ಬಸವಣ್ಣ ಪಾಟೀಲ್, ನಾಗರಾಜ್ ಕಲ್ಬುರ್ಗಿ, ಸುಭಾಷ್ ಚಂದ್ರ ಯ0ಪಳ್ಳಿ, ಸುಪುತ್ರ ಸೀಳಿನ್, ಬಸವರಾಜ ಯಲಾಲ್, ಜ್ಯೋತಿ ಕೃಷ್ಣ ಅಗ್ನಿಹೋದ್ರಿ, ಜಗದೇವಿ ಸೀಳಿನ್, ಮಲ್ಲೇಶ್ವರಿ ಜಾಬಶೆಟ್ಟಿ, ಮಾನಂದ ಸಪಗೋಳ, ಅನ್ನಪೂರ್ಣ ಕೋರವಾರ್, ಶರಣಮ್ಮ ಮಾಲಿ, ಸೋಮಶೇಖರ್ ಬುಶೆಟ್ಟಿ, ಶರಣಪ್ಪ ಪುಣಶೆಟ್ಟಿ, ಶರಣಪ್ಪ ಪೂಜಾರಿ, ಮಮ್ಮದ್ ಯುಸುಫ್ ಅಲಿ, ಜಗನ್ನಾಥ್ ರೆಡ್ಡಿ, ಬಿಜೆಪಿ ಪಕ್ಷದ ಮುಖಂಡರಾದ ಅಶೋಕ ಪಾಟೀಲ, ಶರಣ ಸಾಹಿತಿ ಪರಿಷತ್ತಿನ ಗೌರವಾಧ್ಯಕ್ಷರಾದ ಮಲ್ಲಿಕಾರ್ಜುನ ಪಾಲಾಮೂರ, ವೀರಭದ್ರೇಶ್ವರ ಕೋ ಆಪರೇಟಿವ್ ಬ್ಯಾಂಕಿನ ವ್ಯವಸ್ಥಾಪಕರಾದ ನಾಗಶೆಟ್ಟಿ ಮೈನಳ್ಳಿ, ಗೋವಿಂದ ರಾಠೋಡ, ಜಯರಾಮ ಅಗ್ನಿಹೋದ್ರಿ, ಶ್ಯಾಮರಾವ್ ಸಮನಾಯಕ್,
ಸೇರಿದಂತೆ ಬ್ಯಾಂಕಿನ ನಿರ್ದೇಶಕರು ನಿರ್ದೇಶಕರು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.