ಶ್ರೀವಿದ್ಯಾ ಕಾಲೇಜಿಗೆ ಉತ್ತಮ ಫಲಿತಾಂಶ

ಕಲಬುರಗಿ:ಎ.23:ನಗರದ ಹೃದಯ ಭಾಗದಲ್ಲಿರುವ ಶ್ರೀವಿದ್ಯಾ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟನ ಸಂಸ್ಥೆಯ ಅಡಿಯಲ್ಲಿ ಬರುವ ಶ್ರೀವಿದ್ಯಾ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದು, ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿ ಪ್ರವೀಣಕುಮಾರ ಎನ್. ಭೋಸ್ಲೆ (569) ಹಾಗೂ ವಾಣಿಜ್ಯ ವಿಭಾಗದಲ್ಲಿ ನಂದಿನಿ ನಾಗೇಂದ್ರ (503) ಇವರು ಕಾಲೇಜಿಗೆ ಪ್ರಥಮ ಸ್ಥಾನದಲ್ಲಿ ಹೊರಹೊಮ್ಮಿದ್ದಾರೆ. ಕಾಲೇಜಿನ ಒಟ್ಟು ವಿದ್ಯಾರ್ಥಿಗಳಲ್ಲಿ 13 ಅಗ್ರ ಶ್ರೇಣಿ, 43 ಪ್ರಥಮ ದರ್ಜೆ ಮತ್ತು 08 ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿರುತ್ತಾರೆ.
ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ವಿಶ್ವನಾಥ ರೆಡ್ಡಿ(563), ಅಭಿಶೇಕ್ ಪವಾರ್(546), ಶ್ರೀಹರಿ ದೇಸಾಯಿ(545), ಲಕ್ಷ್ಮೀ ಭೀಮರೆಡ್ಡಿ(543), ಆಕಾಶ ರಾಜಕುಮಾರ(537), ಅಖಿಲೇಶ್ ನಿಂಗಣ್ಣ (535), ಓಂಕಾರ ರಾಣೋಜಿ (529), ಭಾಗ್ಯಶ್ರೀ ರವೀಂದ್ರ(524), ಸರ್ವಾತ ಸಮೀನ್ (521), ಶರಣಕುಮಾರ ಧನ್ನು (521), ರಂಜೀತಾ ರಾಜೇಶ (517) ಭೀಮಶಾ ಮಲ್ಲಿಕಾರ್ಜುನ (517), ರಾಕೇಶ ರಮೇಶ (503), ಅರವಿಂದ ಚತ್ರು (500), ಶರಬಣ್ಣ ಶರಣಪ್ಪ (497), ನಿಖಿಲ್ ವೀರಣ್ಣ (495), ಶಶಾಂಕ ಶಂಕರ್ (492), ಸಂದೀಪ ನಾಮದೇವ (487), ಸಾಯಿಪ್ರಸಾದ ರುದ್ರಗೌಡ (487), ವಿವೇಕ ಸಿದ್ದಪ್ಪ(486), ಭಾಗ್ಯಶ್ರೀ ದಿಲೀಪ (482) ಮತ್ತು ತ್ರಿವೇಣಿ ಪರಮಣ್ಣ (480) ಅಂಕಗಳನ್ನು ಪಡೆದಿದ್ದಾರೆ.
ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಐಶ್ವರ್ಯ ಬಸವರಾಜ (458), ಪಾಯಲ್ ವಿಠಲ್ (447), ರಾಹುಲ್ ವಸಂತ್ (432) ಮತ್ತು ಅಭಿಶೇಕ್ ಬಸವರಾಜ (421) ಅಂಕಗಳನ್ನು ಪಡೆದಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅದ್ಯಕ್ಷರಾದ ಡಾ|| ಪ್ರಮೋದ ಇಟಗಿ, ಸದಸ್ಯರು, ಕಾಲೇಜಿನ ಪ್ರಾಚಾರ್ಯರು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.