ಶ್ರೀವಿದ್ಯಾಕಣ್ವ ವಿರಾಜತೀರ್ಥರ ದಂಡೋದಕ ಸ್ನಾನ

ಸುರಪುರ :ಸೆ.10:ತಾಲೂಕಿನ ಹುಣಸಿಹೊಳೆ ಶ್ರೀಮತ್ ಕಣ್ವಮಠ ಪೀಠಾಧಿಪತಿಗಳಾದ ಶ್ರೀ ಶ್ರೀ 1008 ಶ್ರೀ ವಿದ್ಯಾಕಣ್ವ ವಿರಾಜತೀರ್ಥ ಶ್ರೀಪಾದಂಗಳವರ ತೃತೀಯ ಚಾತುರ್ಮಾಸ್ಯ ವೃತಾಚರಣೆಯ ಸೀಮೋಲ್ಲಂಘನ ಶುಭದಿನದಂದು, ವೀರಘಟ್ಟದ ಕೃಷ್ಣಾ ನದಿ ತಟದಲ್ಲಿ
ಅಭಿಮಾನಿಗಳು ಸಮಸ್ತ ಶಿಷ್ಯ ವರ್ಗದವರು, ಸ್ವಶಾಕಖಿಯರು, ಶ್ರೀ ವಿಠ್ಠಲಕೃಷ್ಣನ ಭಕ್ತರೊಂದಿಗೆ ದಂಡೋಧಕಸ್ನಾನ ಮಾಡಿ ದಂಡೋಧಕ ಪೆÇ್ರೀಕ್ಷಣೆ ಮಾಡಿದರು ಚಾತುರ್ಮಾಸ್ಯ ವೃತಾಚರಣೆಯ ಫಲ ಪ್ರಾಪ್ತವಾಗಲಿ, ಗಂಗಾದಿ ಸರ್ವತೀರ್ಥ ಫಲಪ್ರಾಪ್ತಿರಸ್ತು, ಸಕಲ ಸದ್ಭಕ್ತರ ಇಷ್ಟಾರ್ಥಗಳು ಸಿದ್ಧಿಸಲಿ ಎಂದು ಶ್ರೀಗಳು ಅನುಗ್ರಹಿಸಿದರು.

ವೇದಮೂರ್ತಿಗಳಾದ ಶ್ರೀ ಜಗನ್ನಾಥಾಚಾರ್ಯ ಜೋಶಿ, ಕೊಡೆಕಲ್, ಶ್ರೀ ರಾಜೇಂದ್ರಾಚಾರ್ಯ ಬುದ್ದಿನ್ನಿ ಶ್ರೀ ವಿಷ್ಣುಪ್ರಕಾಶ ಜೋಶಿಯವರ ವೈದಿಕತ್ವದಲ್ಲಿ ಶಾಸ್ತ್ರೋಕ್ತವಾಗಿ ದಂಡೋಧಕ ಸ್ನಾನದ ಸಂಕಲ್ಪ ನೆರವೇರಿತು. ಶೇಷಾಂಶ ಸಂಭೂತರಾದ ಶ್ರೀಮನ್ ಮಾಧವ ತೀರ್ಥರು ತಪೆÇೀಭೂಮಿಯಲ್ಲಿ ಶೇಷ ರೂಪದಲ್ಲಿ ದರ್ಶನ ನೀಡಿದರು, ವೃತ್ತಿಕ ಬೃಂದಾವನ ದರ್ಶನ ಪಡೆದು ಮಂಗಳಾರತಿ ಮಾಡಿದರು. ವಾದ್ಯ ಮೇಳಗಳೊಂದಿಗೆ ಭಕ್ತರ ವೇದಘೋಷ ಗ್ರಾಮಸ್ಥರು ಜಯ ಘೋಷಗಳೊಂದಿಗೆ ಹುಣಸಿಹೊಳೆ ಗ್ರಾಮ ಪೂರಪ್ರವೇಶ ಮಾಡಿದರು.

ಟ್ರಸ್ಟನ ಅಧ್ಯಕ್ಷರಾದ ಶ್ರೀ ಮನೋಹರ ಮಾಡಿಗೇರಿ ದಿವಾನರಾದ ಸುರೇಶ್ ಕುಲಕರ್ಣಿ, ಕೃಷ್ಣಚಾರ್ಯರ ತುರುಡಗಿ, ರಾಜು ಜೋಶಿ, ಪ್ರಸನ್ನ ಅಲಂಪಲ್ಲಿ, ವಿನುತ ಏಸ್ ಜೋಶಿ, ಹಾಗೂ ಪ್ರಮುಖರಾದ ಔದುಂಬರಭಟ್ ಜೋಶಿ, ಮಧುಸೂಧನಾಚಾರ್ಯ ಜೋಶಿ, ಕೃಷ್ಣದೇಸಾಯಿ ಜಾವುರು, ಭಿಮಾಚಾರ್ಯ ಜೋಶಿ, ನರಸಿಂಹಾಚಾರ್ಯರು ಜೋಶಿ ವನದುರ್ಗ, ಮಂಡಳಿಯ ಸದಸ್ಯರು ಮಹಿಳೆಯರು ಭಕ್ತರು ಉಪಸ್ಥಿತರಿದ್ದರು.