ಶ್ರೀವಿದ್ಯಾಕಣ್ವ ವಿರಾಜತೀರ್ಥ ಶ್ರೀಪಾದರ ಚಾತುರ್ಮಾಸ ಸೀಮೋಲ್ಲಂಘನ

ಕಲಬುರಗಿ:ಸೆ.8:ಹುಣಸಿಹೊಳೆಯ ಶ್ರೀಮತ್ ಕಣ್ವ ಮಠದಲ್ಲಿ ಕಳೆದ ಕೆಲವು ದಿನಗಳಿಂದ ತುಂಬಿರುವ ಸಂಭ್ರಮಕ್ಕೆ ಈ ವಾರ ಇನ್ನಷ್ಟು ಮೆರಗು ಬರಲಿದೆ. ಶುಭಕೃತ ನಾಮ ಸಂವತ್ಸರದಲ್ಲಿ ಶ್ರೀ ಶ್ರೀ 1008 ಶ್ರೀ ವಿದ್ಯಾಕಣ್ವ ವಿರಾಜತೀರ್ಥ ಶ್ರೀಪಾದರು ತಮ್ಮ ತೃತೀಯ ಚಾತುರ್ಮಾಸ್ಯ ವ್ರತವನ್ನು ಶ್ರೀಮಠದಲ್ಲಿ ಕೈಗೊಂಡಿದ್ದರು ಕಳೆದ 48 ದಿನಗಳಿಂದ ನಿರಂತರವಾಗಿ ಜಪ-ತಪಾದಿ ಅನುಷ್ಠಾನವನ್ನು ಹಾಗೂ ಜ್ಞಾನಸತ್ರದಲ್ಲಿ ತೊಡಗಿಸಿಕೊಂಡಿದ್ದರು, ಲೋಕಕಲ್ಯಾಣಕ್ಕಾಗಿ ಶ್ರೀವಿಠ್ಠಲ ಕೃಷ್ಣನ ಅನುಗ್ರಹಕ್ಕಾಗಿ ಪ್ರಾರ್ಥಿಸಿದ್ದ ಶ್ರೀಪಾದರು ಶನಿವಾರ, ದಿನಾಂಕ 10 ಸೆಪ್ಟೆಂಬರ್ 2022ರಂದು ಚಾತುರ್ಮಾಸ್ಯ ದೀಕ್ಷೆಯನ್ನು ಸಮಾಪನಗೊಳಿಸಲಿದ್ದಾರೆ.

ಶುಕ್ರವಾರ ದಿನಾಂಕ 9 ಸೆಪ್ಟೆಂಬರ್ 2022ರಂದು ಅನಂತ ಚತುರ್ದಶಿ ಅಂಗವಾಗಿ ಶ್ರೀಗಳ ದಿವ್ಯೋಪಸ್ಥಿತಿಯಲ್ಲಿ ವೇದಮೂರ್ತಿಗಳಾದ ಶ್ರೀ ಜಗನ್ನಾಥಾಚಾರ್ಯ ಜೋಶಿ, ಕೊಡೆಕಲ್, ಶ್ರೀ ಮಾರುತಿ ಆಚಾರ್ಯ ಬೈಚಬಾಳ್ ಹಾಗೂ ಶ್ರೀ ವಿಷ್ಣುಪ್ರಕಾಶ್ ಜೋಶಿಯವರ ವೈದಿಕತ್ವದಲ್ಲಿ ಹೋಮ ಹವನ ಮತ್ತು ಪಂಡಿತರಿಂದ ಅನಂತ ಚತುರ್ದಶಿ ವ್ರತ ಕಥಾಶ್ರಮಣ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಶನಿವಾರ ದಿನಾಂಕ 10 ಸೆಪ್ಟೆಂಬರ್ 2022 ಅನಂತ ಹುಣ್ಣಿಮೆಯಂದು ಚಾತುರ್ಮಾಸ್ಯ ಸೀಮೋಲ್ಲಂಘನದ ನಿಮಿತ್ಯ ವೀರಘಟ್ಟದ ಕೃಷ್ಣಾ ನದಿಯಲ್ಲಿ ದಂಡೋದಕ ಸ್ನಾನ, ಶೋಭಾಯಾತ್ರೆ, ಶ್ರೀಗಳಿಂದ ಆಶೀರ್ವಚನ, ತಪ್ತಮುದ್ರಾಧಾರಣೆ, ಸಾಮೂಹಿಕ ಪಾದಪೂಜೆ, ತುಲಾಭಾರ, ಶ್ರೀಮತ್ ಕಣ್ವಮಠಕ್ಕೆ ವಿಶೇಷ ಸೇವೆ ಸಲ್ಲಿಸಿದ ವಿವಿಧ ಜಿಲ್ಲೆಗಳ ಗಣ್ಯರಿಗೆ ಶ್ರೀಪಾದರು ಸನ್ಮಾನಿಸಿ ಆಶೀರ್ವದಿಸುವರು ನಂತರ, ಸಂಸ್ಥಾನ ಪೂಜೆಯೊಂದಿಗೆ ಚಾತುರ್ಮಾಸ್ಯ ಸಮಾರಂಭವು ಸಂಪನ್ನಗೊಳ್ಳುವುದೆಂದು ವಿನುತ ಎಸ್ ಜೋಶಿ ತಿಳಿಸಿದ್ದಾರೆ.

ಟ್ರಸ್ಟನ ಅಧ್ಯಕ್ಷರಾದ ಶ್ರೀ ಮನೋಹರ್ ಮಡಗೇರಿ, ದಿವಾನರಾದ ಸುರೇಶ್ ಕುಲಕರ್ಣಿ, ಪ್ರಲ್ಹಾದ ಕನಸಾವಿ, ರಾಜು ಜೋಷಿ, ಸುಭಾಷ್ ಮಾಡಿಗೇರಿ, ರಾಘವೇಂದ್ರ ವಕೀಲ, ಮಲ್ಹಾರರಾವ ಗಾರಂಪಳ್ಳಿ ವಿನುತ ಏಸ್ ಜೋಶಿ ಹಾಗೂ ಟ್ರಸ್ಟನ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಶ್ರೀ ಸಂಸ್ಥಾನದ ಶಿಷ್ಯವರ್ಗ ಭಕ್ತರಲ್ಲರು ಭಾಗವಹಿಸಿ ಶ್ರೀಯೋಗೀಶ್ವರ ಯಾಜ್ಞವಲ್ಕ್ಯ ಮಹರ್ಷಿಗಳ ಹಾಗೂ ಸಮಸ್ತ ಯತಿಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕೋರಲಾಗಿದೆ, ಹೆಚ್ಚಿನ ಮಾಹಿತಿ ಮೋ:9822504100 ಮತ್ತು 9986974100 ತಿಳಿಸಿದ್ದಾರೆ.