`ಶ್ರೀವಿಜಯದಾಸರು’ ಸಿಡಿ ಬಿಡುಗಡೆ

“ದಾಸವರೇಣ್ಯ ಶ್ರೀವಿಜಯದಾಸರು”  ಚಿತ್ರದ ಹಾಡುಗಳು ಮತ್ತು  ದ್ವನಿಸುರುಳಿ ಬಿಡುಗಡೆಯಾಗಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಸೇರಿದಂತೆ ಗಣ್ಯಾತಿ ಗಣ್ಯರು ಆಗಮಿಸಿ ಚಿತ್ರಕ್ಕೆ ಶುಭಹಾರೈಸಿದರು.

ಈ ವೇಳೆ ಪ್ರಹ್ಲಾದ ಜೋಷಿ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸುವುದೇ ದಾಸ ಸಾಹಿತ್ಯ.ಈರೀತಿಯ ಚಿಂತನೆಗಳು ಜಗತ್ತಿಗೆ ಅಗತ್ಯವಿದೆ ಎಂದರು. ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್. ಎಂ ಸುರೇಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಲಹರಿ ಸಂಸ್ಥೆಯ ವೇಲು ಸೇರಿದಂತೆ ಅನೇಕರು ಈ ಕ್ಷಣಕ್ಕೆ ಸಾಕ್ಷಿಯಾದರು.ಚಿತ್ರದಲ್ಲಿ 9 ಹಾಡುಗಳಿದ್ದು ಅದರಲ್ಲಿ ಐದು ಹಾಡುಗಳನ್ನು ಪ್ರದರ್ಶಿಸಲಾಯಿತು.

ನಿರ್ಮಾಪಕ ತ್ರಿವಿಕ್ರಮ ಜೋಷಿ ಪ್ರತಿಕ್ರಿಯಿಸಿ ಚಿತ್ರದಲ್ಲಿ ವಿಜಯದಾಸರು ಪಾತ್ರ ತಾವೇ ಮಾಡಿದ್ದೇವೆ. ಜೀವನದ ಸಂದೇಶ ಕೊಡುವ ಚಿತ್ರ ಮಾಡಿದರೆ ಮಕ್ಕಳಿಗೂ ಅನುಕೂಲವಾಗಲಿದೆ. ಜಗನ್ನಾಥದಾಸರು ಚಿತ್ರಕ್ಕೆ ಕ್ಲಾಪ್ ಮಾಡಲು ಬಂದು ನಾನೇ ನಿರ್ಮಾಪಕ, ನಟನೂ ಆಗಿದ್ದೇನೆ. ದಾಸಸಾಹಿತ್ಯದಲ್ಲಿ ಹತ್ತು ಚಿತ್ರ ನೀಡುವ ಉದ್ದೇಶವಿದೆ.ಈಗಾಗಲೂ ಮೂರು ಚಿತ್ರ ಮಾಡಿದ್ದೇನೆ.ಮುಂದೆ ಗೋಪಾಲದಾಸರು ಸೇರಿದಂತೆ ಅನೇಕ ದಾಸವರೇಣ್ಯರ ಚಿತ್ರಗಳನ್ನು ತೆರೆಗೆ ತರುವ ಉದ್ದೇಶ ಹೊಂದಲಾಗಿದೆ.ಎಲ್ಲರ ಸಹಕಾರ ಬೇಕು, ಈ ರೀತಿಯ ಚಿತ್ರಗಳಿಂದ ಹಣ ಬರುವುದಿಲ್ಲ. ಬದಲಾಗಿ ವಿಚಾರವನ್ನು ತಿಳಿಸುವ ಉದ್ದೇಶ ನಮ್ಮದು ಎಂದು ಮಾಹಿತಿ ಹಂಚಿಕೊಂಡರು. ನಿರ್ದೇಶಕ ಡಾ.ಮಧುಸೂದನ್ ಹವಾಲ್ದಾರ್ ,ಸಂಗೀತ ನಿರ್ದೇಶಕ ವಿಜಯ ಕೃಷ್ಣ ಸೇರಿದಂತೆ ಚಿತ್ರತಂಡದ ಅನೇಕರು ಉಪಸ್ಥಿತರಿದ್ದರು.