ಶ್ರೀವಿಜಯದಾಸರು” ಆರಂಭ

ಆಧ್ಯಾತ್ಮದ ಕುರಿತ “ದಾಸವರೇಣ್ಯ ಶ್ರೀ ವಿಜಯದಾಸರು” ಚಿತ್ರದ ಮುಹೂರ್ತ ನೆರವೇರಿದೆ. ಧರ್ಮಗಿರಿ ಶ್ರೀ ಮಂಜುನಾಥಸ್ವಾಮಿ‌ ದೇವಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ  ಶಾಸಕ ಶಿವನಗೌಡ ನಾಯಕ್, ಪಂಡಿತ ಸತ್ತಧ್ಯಾನಾಚಾರ್ಯ ಕಟ್ಟಿ ಮೊದಲ ದೃಶ್ಯಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ವಿಜಯ ದಾಸರ ಪೂರ್ವಾರಾಧನೆ ದಿನದಂದು ಚಿತ್ರೀಕರಣ ಆರಂಭವಾಗಿದ್ದು ವಿಶೇಷ. ಈ ವೇಳೆ ಮಾತಿಗಿಳಿದ ನಿರ್ದೇಶಕ ಮಧುಸೂದನ್ ಹವಾಲ್ದಾರ್ ,ದಾಸವರೇಣ್ಯ ಪ್ರಸನ್ನ ವೆಂಕಟದಾಸರ ಕುರಿತ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈಗ ವಿಜಯದಾಸರ ಸಿನಿಮಾ ಆರಂಭವಾಗಿದೆ.  ಕನಕದುರ್ಗ, ಆನೆಗುಂದಿ ಹಾಗೂ ನವಬೃಂದಾವನದ ಸುತ್ತಮುತ್ತ ನಡೆಯಲಿದೆ ಎಂದರು.

ಸುಮಾರು 250 ವರ್ಷಗಳ ಹಿಂದಿನ ಜೀವನವನ್ನು ತೋರಿಸುವಾಗ ಎಚ್ಚರಿಕೆ ವಹಿಸಲಾಗಿದೆ ಎಲ್ಲರ ಸಹಕಾರವಿರಲಿ ಎಂದು ಕೇಳಿಕೊಂಡರು.

ನಿರ್ಮಾಪಕ ಹಾಗೂ ನಟ ತ್ರಿವಿಕ್ರಮ ಜೋಷಿ, ಇಂದಿನ ಯುವಪೀಳಿಗೆಗೆ ದಾಸರ ಜೀವನದ ಕುರಿತು ತಿಳಿಸುವುದಕ್ಕೆ ಇದು ಉತ್ತಮ ಮಾಧ್ಯಮ.  ಸರಸ್ವತಿ ಹಾಗೂ ಶ್ರೀಪ್ರಹ್ಲಾದಾಚಾರ್ಯ ಜೋಷಿ ಹೆಸರಿನಲ್ಲಿ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ. ವಿಜಯದಾಸರ ಪಾತ್ರದಲ್ಲಿ  ಕಾಣಿಸಿಕೊಳ್ಳುತ್ತಿದ್ದೇನೆ ಎಂದರು.

ಪಂಡಿತ ಸತ್ಯಧ್ಯಾನಾಚಾರ್ಯ ಕಟ್ಟಿ,ಕನ್ನಡ ಸಾಹಿತ್ಯವನ್ನು ಅನೇಕ ಶತಮಾನದಿಂದ ಹರಿದಾಸರು ಶ್ರೀಮಂತಗೊಳಿಸಿದ್ದಾರೆ. ದಾಸರ ಕೊಡುಗೆ ಹೊರತುವ ಪ್ರಯತ್ನ. ಇನ್ನೂ ಹೆಚ್ಚು ನಡೆಯಬೇಕು ಎನ್ನುವ ಸಲಹೆ ನೀಡಿದರು. ವಿಜಯಕೃಷ್ಣ ಸಂಗೀತ ನಿರ್ದೇಶನ ಹಾಗೂ ನಾರಾಯಣ್ ಛಾಯಾಗ್ರಹಣ ಚಿತ್ರಕ್ಕಿದೆ.

ವಿಜಯದಾಸರ ಪಾತ್ರದಲ್ಲಿ ತ್ರಿವಿಕ್ರಮ ಜೋಷಿ ಅಭಿನಯಿಸುತ್ತಿದ್ದಾರೆ. ಶರತ್ ಜೋಷಿ, ಪ್ರಭಂಜನ ದೇಶಪಾಂಡೆ, ವಿಷ್ಣು ತೀರ್ಥ ಜೋಷಿ, ಪದ್ಮಕಲಾ ಮುಂತಾದವರು  ಚಿತ್ರದ ತಾರಾಬಳಗದಲ್ಲಿದ್ದಾರೆ.