ಶ್ರೀವಾಸವಿ ವಿದ್ಯಾಲಯದಲ್ಲಿ ರಾಜ್ಯೋತ್ಸವ


ಸಂಜೆವಾಣಿ ವಾರ್ತೆ
ಬಳ್ಳಾರಿ, ನ.2: ಶ್ರೀ ವಾಸವಿ ಎಜ್ಯುಕೇಷನ್ ಟ್ರಸ್ಟ್ (ರಿ) ನೇತೃತ್ವದ ಶ್ರೀ ವಾಸವಿ ವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. “ಅಸತೋಮ ಸದ್ಗಮಯ, ತಮಸೋಮ ಜ್ಯೋತಿರ್ಗಮಯ, ಮೃತ್ಯೋರ್ಮ ಅಮೃತಂಗಮಯ” ಎಂಬಂತೆ ಜ್ಯೋತಿ ಬೆಳೆಗುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಕೆ. ಬಿ. ಸಂಜೀವ್ ಪ್ರಸಾದ್, ಸಹಾಯಕ ಅಭಿಯಂತರರು, ಬಳ್ಳಾರಿ. ಶ್ರೀ ವಾಸವಿ ಎಜ್ಯುಕೇಷನ್ ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ಅಗಡಿ ಗವಿಸಿದ್ದೇಶ್ವರ ಪ್ರಸಾದ್, ಉಪಾಧ್ಯಕ್ಷರುಗಳಾದ ಶ್ರೀ ನರಸಪಲ್ಲಿ ನಾಗರಾಜ, ಶ್ರೀ ಪೋಲಾ ಬಸವರಾಜ, ಕಾರ್ಯದರ್ಶಿ ಶ್ರೀ ಪಿ. ಎನ್. ಸುರೇಶ್, ಜಂಟಿ ಕಾರ್ಯದರ್ಶಿಗಳಾದ ಶ್ರೀ ಬಿಂಗಿ ಸುರೇಶ್, ಕಾರ್ಯದರ್ಶಿಗಳಾದ ಶ್ರೀ ಮುರಳಿ ಕೃಷ್ಣ, ಸದಸ್ಯರುಗಳಾದ ಶ್ರೀ ಪಿ. ಜಿ. ಗುಪ್ತಾ, ಶ್ರೀ ವೆಂಕಟೇಶ್, ಶ್ರೀ ಮುದುಗಲ್ ಸುಭಾಷ್ ಚಂದ್ರ, ಶಾಲೆಯ ಮುಖ್ಯೋಪಾಧ್ಯಯರಾದ ಶ್ರೀ ವೀರೇಶ್, ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳು ಹಾಗೂ ಇತರೇ ಗಣ್ಯರು ಸೇರಿ ಧ್ವಜಾರೋಹಣ ಮಾಡಿದರು. ಶ್ರೀ ಕೆ. ಬಿ. ಸಂಜೀವ್ ಪ್ರಸಾದ್ ರವರು ಕನ್ನಡ ಭಾಷೆಯ ಮಹತ್ವ, ರಾಜ ಮನೆತನಗಳು, ಪ್ರಾಂತ್ಯಗಳ ವಿಂಗಡನೆ, ಜ್ಞಾನಪೀಠ ಪ್ರಶಸ್ತಿಗಳು, ಕರ್ನಾಟಕ ಏಕೀಕರಣದಲ್ಲಿ ಶ್ರೀ ವಾಸವಿ ಎಜ್ಯುಕೇಷನ್ ಟ್ರಸ್ಟ್ನ ಸದಸ್ಯರ ಕೊಡುಗೆ, ನಮ್ಮ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಪ್ರದಾಯ, ತಂತ್ರಜ್ಞಾನ, ಆಚರಣೆಗಳ ಬಗ್ಗೆ ಸಂಕ್ಷಿಪ್ತವಾಗಿ ತಮ್ಮ ಭಾಷಣದಲ್ಲಿ ತಿಳಿಸಿದರು.
ಶಾಲೆಯ 5ನೇ ತರಗತಿಯ ವಿದ್ಯಾರ್ಥಿನಿಯಾದ ಕುಮಾರಿ ಸ್ಪಂದನಾ ಕರ್ನಾಟಕದ ಏಕೀಕರಣದ ಬಗ್ಗೆ ತಮ್ಮ ಭಾಷಣದಲ್ಲಿ ತಿಳಿಸಿಕೊಟ್ಟರು. ಅದೇ ರೀತಿ 8ನೇ ತರಗತಿಯ ವಿದ್ಯಾರ್ಥಿನಿಯಾದ ಕುಮಾರಿ ಅನುಷರವರು ನಾಡಿನ ಗತವೈಭವ, ಕಲಾರಸಿಕರು, ಕವಿಗಳ ಬಗ್ಗೆ ತಮ್ಮ ಭಾಷಣದಲ್ಲಿ ಸ್ಮರಿಸಿದರು.
ಶಾಲೆಯ ಸಹಶಿಕ್ಷಕಿಯರು ಭಾವಗೀತೆ ಹಾಗೂ ನಾಡಗೀತೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದರು. ಶಾಲೆಯ ಸಹಶಿಕ್ಷಕಿ ಶ್ರೀಮತಿ ಬಸವರಾಜೇಶ್ವರಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ರೂಪರವರು ಸ್ವಾಗತಿಸಿದರು. ಶ್ರೀಮತಿ ಶಶಿಕಳಾರವರು ಸರ್ವರನ್ನು ವಂದಿಸಿದರು.