ಶ್ರೀಲೋಕೇಶ್ವರ ಅವದೂತರ 60ನೇ ಆರಾಧನೆ ಅಂಗವಾಗಿ ಭಜನೆ

ಸಿರುಗುಪ್ಪ,ನ.20- ನಗರದ ಶ್ರೀಶಂಭುಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿರುವ ಶ್ರೀಲೋಕೇಶ್ವರ ಅವದೂತರ 60ನೇ ಆರಾಧನೆಯ ಅಂಗವಾಗಿ ಶ್ರೀಹುಚ್ಚೀರಪ್ಪ ಮಠದ ಭಜನಾ ಮಂಡಳಿಯವರು ರಾತ್ರಿ ಭಜನೆ ನಡೆಸಿದರು.
ಭಜನಾ ಕಾರ್ಯಕ್ರಮದಲ್ಲಿ ಹೊನ್ನೂರಪ್ಪ, ವೆಂಕಟೇಶಪ್ಪ, ರಾಜಶೇಖರಸ್ವಾಮಿ, ಸಿದ್ದಲಿಂಗಯ್ಯಸ್ವಾಮಿ, ಗಾದಿಲಿಂಗಪ್ಪ, ಪಕ್ಕೀರಪ್ಪ ಆಚಾರಿ, ಓಂಕಾರಪ್ಪ, ದತ್ತವೀರೇಶ ಸೇರಿದಂತೆ ಇತರರು ಇದ್ದರು.