ಶ್ರೀಲೀಲಾ ಔಟ್, ರಶ್ಮಿಕಾ ಇನ್

ಹೈದರಾಬಾದ್ ,ಸೆ.೨೬-ನಟಿ ಶ್ರೀಲೀಲಾ ರೌಡಿ ಸ್ಟಾರ್ ವಿಜಯ್ ದೇವರಕೊಂಡ ಎದುರು ನಟಿಸಲು ಸಜ್ಜಾಗಿದ್ದರು. ಈ ಸುದ್ದಿ ಬಂದಾಗ, ಈ ಚಿತ್ರ ಆಕೆಯ ವೃತ್ತಿಜೀವನದಲ್ಲಿ ಮಹತ್ವದ ಮೈಲಿಗಲ್ಲು ಎಂದು ಜನರು ಭಾವಿಸಿದ್ದರು. ಆದರೆ ಇತ್ತೀಚಿನ ವರದಿಗಳ ಪ್ರಕಾರ ಶ್ರೀ ಲೀಲಾ ಅವರು ದಿನಾಂಕಗಳನ್ನು ಹೊಂದಿಸಲು ಸಾಧ್ಯವಾಗದ ಕಾರಣ ಅವಕಾಶವನ್ನು ಕೈಬಿಡಬೇಕಾಯಿತು ಎಂದು ಚಿತ್ರದ ನಿರ್ದೇಶಕ ಗೌತಮ್ ತಿನ್ನನೂರಿ ಖಚಿತ ಪಡಿಸಿದ್ದಾರೆ.
ಈ ಮೊದಲು ವಿಜಯ್ ದೇವರಕೊಂಡ ಅವರ ಚಿತ್ರದಲ್ಲಿ ನಾಯಕಿಯಾಗಿ ಶ್ರೀ ಲೀಲಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿದ್ದವು. ಆದರೆ, ಮಾಧ್ಯಮಗಳಲ್ಲಿನ ಇತ್ತೀಚಿನ ವರದಿಯಂತೆ ಶ್ರೀ ಲೀಲಾ ಅವರ ಸ್ಥಾನಕ್ಕೆ ರಶ್ಮಿಕಾ ಮಂದಣ್ಣ ಅವರು ಆಗಮನವಾಗಿದೆ, ಇದರ ಪರಿಣಾಮವಾಗಿ ರಶ್ಮಿಕಾ ಅವರೊಂದಿಗೆ ವಿಜಯ್ ಮೂರನೇ ಬಾರಿಗೆ ಒಟ್ಟಾಗಿ ನಟಿಸುತ್ತಿದ್ದಾರೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ನಡುವಿನ ಆನ್-ಸ್ಕ್ರೀನ್ ಕೆಮಿಸ್ಟ್ರಿಯನ್ನು ಅಭಿಮಾನಿಗಳು ಬಹಳ ದಿನಗಳಿಂದ ಕಾತುರದಿಂದ ನಿರೀಕ್ಷಿಸುತ್ತಿದ್ದಾರೆ. ಗೀತಾ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ನಂತರ, ಈ ಜೋಡಿಯು ಮೂರನೇ ಬಾರಿಗೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಮುಂಬರುವ ಈ ಹೆಸರಿಡದ ಚಿತ್ರವು ಪ್ಯಾನ್-ಇಂಡಿಯನ್ ಎಂಟರ್ಟೈನರ್ ಆಗಿದ್ದು, ರಾಷ್ಟ್ರವ್ಯಾಪಿ ಪ್ರೇಕ್ಷಕರನ್ನು ಆಕರ್ಷಿಸುತ್ತದೆ.
ಶ್ರೀ ಲೀಲಾ ಪ್ರಸ್ತುತ ಹರೀಶ್ ಶಂಕರ್ ನಿರ್ದೇಶನದ ಪವನ್ ಕಲ್ಯಾಣ್ ಅವರ “ಉಸ್ತಾದ್ ಭಗತ್ ಸಿಂಗ್’, ತ್ರಿವಿಕ್ರಮ್ ಶ್ರೀನಿವಾಸ್ ಜೊತೆಗಿನ ಮಹೇಶ್ ಬಾಬು ಅವರ “ಗುಂಟೂರು ಕಾರಮ್’, ಬೋಯಪತಿ ಶ್ರೀನು ನಿರ್ದೇಶನದ ರಾಮ್ ಪೋತಿನೇನಿ ಅವರ “ಸ್ಕಂದ” ಸೇರಿದಂತೆ ಅನೇಕ ಪ್ರಾಜೆಕ್ಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಮತ್ತೊಂದೆಡೆ, ರಶ್ಮಿಕಾ ಪುಷ್ಪ: ದಿ ರೂಲ್ ಮತ್ತು ಅನಿಮಲ್ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.