ಶ್ರೀಲಕ್ಷ್ಮೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಪೂಜೆ

ಶ್ರೀದೇವಿ ಆರ್.ನಾಯಕ ಅವರಿಗೆ ಕೋರೊನಾ ಪಾಸಿಟಿ
ಗಬ್ಬೂರು.ಏ.೨೯-ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದ ರಾಜ್ಯ ಕೆ.ಪಿ.ಸಿ.ಸಿ ಮಹಿಳಾ ಘಟಕದ ಕಾರ್ಯದರ್ಶಿಯಾದ ಶ್ರೀದೇವಿ ಆರ್.ನಾಯಕ ಅವರಿಗೆ ನಿನ್ನೆ ಕೊರೊನಾ ಪಾಸಿಟಿವ್ ಬಂದಿದ್ದು ಅವರ ಶ್ರೀದೇವಿ ಆರ್.ನಾಯಕ ಅಭಿಮಾನಿಗಳ ಸಂಘದ ಬಳಗದಿಂದ ಜಾಲಹಳ್ಳಿ ಗ್ರಾಮದ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿಯ ದೇವಸ್ಥಾನದಲ್ಲಿ ಅಭಿಷೇಕ ಮಾಡಿಸಿ ಪೂಜೆ ಸಲ್ಲಿಸಿದರು.
ಕಳೆದ ಬಾರಿ ಕೊರೊನಾದ ಲಾಕ್ ಡೌನ್ ಸಂದರ್ಭದಲ್ಲಿ ದೇವದುರ್ಗ ತಾಲೂಕಿನಾದ್ಯಂತ ಸಂಕಷ್ಟದಲ್ಲಿ ಜನರಿಗೆ ನೆರೆವಿನ ಹಸ್ತ ಚಾಚಿ ಮನೆಮಾತಾಗಿದ್ದರು ಅಲ್ಲದೇ ಅವರ ಸೇವೆ ಇಡೀ ರಾಜ್ಯಕ್ಕೆ ಗುರುತಿಸಲ್ಪಡುವಂತಾಗಿ ಪ್ರಶಾಂಸಗೆ ಪಾತ್ರರಾಗಿದ್ದರು ಅಲ್ಲದೇ ದೇವದುರ್ಗ ತಾಲೂಕಿನ ಮನೆಮಗಳಾದರೂ ತಮ್ಮ ಜನಸೇವೆ ಹಾಗೂ ಜನಪರ ಕಾಳಜಿಯಿಂದ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿ ತಾಲೂಕಿನಲ್ಲಿ ತಮ್ಮದೆ ಹೆಸರಿನಲ್ಲಿ ಶ್ರೀದೇವಿ ಆರ್.ನಾಯಕ ಅಭಿಮಾನಿಗಳ ಬಳಗದ ಸಂಘ ಸ್ಥಾಪಿಸಿ ಅನೇಕ ಯುವಕರ ನೆಚ್ಚಿನ ನಾಯಕಿಯಾದರು ಅವರ ಈ ಅಬ್ಬರದ ಜನಪರ ಸೇವೆಯಲ್ಲಿ ತಮ್ಮ ಆರೋಗ್ಯ ಲೆಕ್ಕಿಸದ ಇಂದು ಮಹಾಮಾರಿ ಕೊರೊನಗೆ ತುತ್ತಾಗಿದ್ದಾರೆ.
ಅವರು ಈ ರೋಗದಿಂದ ಬೇಗ ಗುಣಮುಖರಾಗಲೆಂದು ಜಾಲಹಳ್ಳಿ ಹೋಬಳಿಯ ಶ್ರೀದೇವಿ ಆರ್.ನಾಯಕ ಅಭಿಮಾನಿಗಳ ಬಳಗದ ಅಧ್ಯಕ್ಷರಾದ ರಮೇಶ ಬಾಗೂರು ದೊಡ್ಡಮನಿ ಜಾಲಹಳ್ಳಿ ಅವರ ನೇತೃತ್ವದಲ್ಲಿ ಗ್ರಾಮದ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಮಹಾರುದ್ರಾಭಿಷೇಕದ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡರಾದ ರಮೇಶ ಬಾಗೂರು ದೊಡ್ಡಮನಿ ಜಾಲಹಳ್ಳಿ,ಬಾಬು ಪಿ,ರಂಗನಾಥ ಆರ್.ಲಕ್ಕಿ, ರಾಮು, ಆರ್.ಪ್ರಿನ್ಸೆಸ್, ಹನುಮಂತ ಕಮಲದಿನ್ನಿ, ಮೌನೇಶ ಚಿಂಚೋಡಿ ಹಾಗೂ ಇನ್ನೂ ಮುಂತಾದವರು ಭಾಗಿಯಾಗಿದ್ದರು.