ಶ್ರೀಲಕ್ಷ್ಮಿರಂಗನಾಥ ದೇವಸ್ಥಾನ ಹುಂಡಿ ಎಣಿಕೆ ಏ.೨೩ ರಂದು ಜಾತ್ರೆ ಹಿನ್ನೆಲೆ | ಭರದಿಂದ ಸಾಗಿದೆ ಅಗತ್ಯ ಸಿದ್ಧತೆ

ದೇವದುರ್ಗ.ಏ.೧೯- ತಾಲೂಕಿನ ಜಾಲಹಳ್ಳಿ ಪಟ್ಟಣದ ಆರಾಧ್ಯದೈವ ಶ್ರೀಲಕ್ಷ್ಮಿರಂಗನಾಥ ಸ್ವಾಮಿ ಜಾತ್ರೆ ಹಿನ್ನೆಲೆಯಲ್ಲಿ ಇಚ್ಚೆಗೆ ದೇವಸ್ಥಾನ ಕಾಣಿಕೆ ಹುಂಡಿ ಏಣಿಕೆ ಕಾರ್ಯ ಜರುಗಿತು.
ಉಪತಹಸೀಲ್ದಾರ್ ವಿಕಾಸ್‌ಕುಮಾರ ಕೋಳೂರು ಮಾತನಾಡಿ, ಜಾತ್ರೆ ನಿಮಿತ್ತ ಹುಂಡಿ ಏಣಿಕೆ ಮಾಡಿದ್ದು ೨೮ಸಾವಿರ ರೂ. ಸಂಗ್ರಹವಾಗಿದೆ. ಏ.೨೩ರಂದು ರಥೋತ್ಸವ ಜರುಗಲಿದ್ದು ಒಂದು ವಾರಗಳ ಕಾಲ ಜಾತ್ರೆ ನಡೆಯಲಿದೆ. ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದು ಅವರಿಗೆ ಅಗತ್ಯ ಕುಡಿವ ನೀರು, ನೆರಳಿನ ವ್ಯವಸ್ಥೆ ಮಾಡಿದ್ದು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಜಾತ್ರೆಯಲ್ಲಿ ತೆಂಗಿನಕಾಯಿ ಮಾರಾಟಕ್ಕೆ ಟೆಂಡರ್ ಕರೆಯಲಾಗಿತ್ತು. ಸ್ಥಳೀಯ ಗ್ರಾಪಂ ಮಾಜಿ ಅಧ್ಯಕ್ಷ ರಂಗಪ್ಪ ನಾಯಕ ಮಕಾಶಿ ೩.೭೦ಲಕ್ಷ ರೂ.ಗೆ ಟೆಂಡರ್ ಪಡೆದಿದ್ದಾರೆ. ರಥೋತ್ಸವ ನಂತರ ಜಾನುವಾರುಗಳ ಜಾತ್ರೆ ಜರುಗಲಿದ್ದು ಬಹುಮುಖ್ಯವಾಗಿ ಕುಡಿವ ನೀರಿನ ವ್ಯವಸ್ಥೆ ಮಾಡಲು ಸ್ಥಳೀಯ ಗ್ರಾಪಂಗೆ ಸೂಚಿಸಲಾಗಿದೆ. ದೇವಸ್ಥಾನದಲ್ಲಿ ವಿವಿಧ ಕಾರ್ಯಕ್ರಮಗಳು ಆರಂಭವಾಗಿವೆ ಎಂದರು.
ಕಂದಾಯ ನಿರೀಕ್ಷಕ ದೇವರೆಡ್ಡಿ ಗಾಣದಾಳ, ಗ್ರಾಮ ಆಡಳಿತಾಧಿಕಾರಿ ರುದ್ರಪ್ಪ ನಾಯಕ, ಮುಖಂಡರಾದ ಭೀಮರಾಯ ಜಗಲಗುಂಡ, ಮಲ್ಲಿಕಾರ್ಜುನ, ದೇವಸ್ಥಾನ ಪೂಜಾರಿಗಳಾದ ಯಂಕೋಬ ಪೂಜಾರಿ, ಸೂರೇಶ ಪೂಜಾರಿ, ಗೋವಿಂದಪ್ಪ ಬಂಡಿ, ರಂಗನಾಥ ಚಿಕ್ಕಲ್, ಗಿರಿಯಪ್ಪ ಪೂಜಾರಿ ಇತರರಿದ್ದರು.